Revenue Facts

ಬೆಂಗಳೂರಿನಲ್ಲಿ ಬರೋಬ್ಬರಿ 66 ಕೋಟಿ ರೂ. ಬಂಗಲೆ ಖರೀದಿಸಿದ ಮೈಕ್ರೋ ಲ್ಯಾಬ್ಸ್‌ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ ಸುರಾನಾ

ಬೆಂಗಳೂರು, ಏ. 20 : ಡೋಲೋ 650 ಮಾತ್ರೆ ಉತ್ಪಾದನೆಯ ಮೈಕ್ರೋ ಲ್ಯಾಬ್ಸ್‌ ವ್ಯವಸ್ಥಾಪಕ ನಿರ್ದೇಶಕ ದಿಲೀಪ್‌ ಸುರಾನಾ ಅವರು ಬೆಂಗಳೂರಿನಲ್ಲಿ 66 ಕೋಟಿ ಮೌಲ್ಯದ ಬಂಗಲೆಯನ್ನು ಖರೀದಿ ಮಾಡಿದ್ದಾರೆ. ಬೆಮಗಳೂರಿನ ಶ್ರೀಮಂತರ ನಗರ ಕೋರಮಂಗಲದಲ್ಲಿ ಈ ಬಂಗಲೆ ಇದೆ. ಈ ಬಂಗಲೆಯು ಬೆಂಗಳೂರಿನ ಅತಿ ದುಬಾರಿ ಆಸ್ತಿ ವ್ಯವಹಾರಗಳಲ್ಲಿ ಒಂದು ಎಂದು ಹೇಳಲಾಗಿದೆ. ಈ ಆಸ್ತಿ ಒಟ್ಟು 12,043 ಚದರ ಅಡಿ ವಿಸ್ತೀರ್ಣ ಹೊಂದಿದೆ. ಇದರ ಒಳಗಿರುವ ಬಂಗಲೆ 8,373 ಚದರ ಅಡಿ ಹೊಂದಿದೆ.

ದಿಲೀಪ್‌ ಸುರಾನಾ ಅವರು ಖರೀದಿ ಮಾಡಿರು ಬಂಗಲೆಯ ಮುದ್ರಾಂಕ ಶುಲ್ಕವೇ 3.36 ಕೋಟಿ ರೂಪಾಯಿ. ಈ ಬಂಗಲೆಯು ದಿಲೀಪ್‌ ಸುರಾನಾ ಮತ್ತು ಅವರ ಪತ್ನಿ ಅರ್ಚನಾ ಸುರಾನಾ ಹೆಸರಿನಲ್ಲಿ ಖರೀದಿ ಮಾಡಲಾಗಿದೆ. ಕೋರಮಂಗಲ ಬೆಂಗಳೂರಿನ ಐಷಾರಾಮಿ ನಗರವಾಗಿದೆ. ಇದರಲ್ಲಿರುವ ಫೇರ್‌ ಫೀಲ್ಡ್‌ ಲೇಔಟ್ ನ ದೇವರಾಜ ಅರಸು ರಸ್ತೆಯಲ್ಲಿದೆ. ಇದರಲ್ಲಿ ಗಾಲ್ಫ್‌ ಕೋರ್ಸ್‌ ಮತ್ತು ರೇಸ್‌ಕೋರ್ಸ್ ಕೂಡ ಒಳಗೊಂಡಿದೆ.

ಫೇರ್‌ ಫೀಲ್ಡ್‌ ಲೇಔಟ್ ನಲ್ಲಿ 10 ಸಾವಿರ ಚದರ ಅಡಿ ವಿಸ್ತಾರದ ದೊಡ್ಡ ದೊಡ್ಡ ಪ್ಲಾಟ್‌ಗಳು ಇವೆ. ಇದರಲ್ಲಿ 20 ರಿಂದ 40 ಬಂಗಲೆಗಳು ಇವೆ. ಇದು ಬೆಂಗಳೂರಿನ ಅತ್ಯಂತ ಶ್ರೀಮಂತ ಎನ್‌ಕ್ಲೇವ್‌ಗಳಲ್ಲಿ ಒಂದಾಗಿದೆ. ಇನ್ನು ಕೋರಮಂಗಲದ ಮೂರನೇ ಬ್ಲಾಕ್‌ ನಲ್ಲಿ ನಾರಾಯಣ ಹೆಲ್‌್ ನ ದೇವಿಪ್ರಸಾದ್‌ ಶೆಟ್ಟಿ, ಇ – ಕಾಮರ್ಸ್‌ ಸಂಸ್ಥೆ ಫ್ಲಿಪ್‌ಕಾರ್ಟ್‌ ಸಂಸ್ಥಾಪಕ ಸಚಿನ್‌ ಬನ್ಸಾಲ್‌ ಮತ್ತು ಬಿನ್ನಿ ಬನ್ಸಾಲ್ ಸೇರಿದಂತೆ ಹಲವು ಶ್ರೀಮಂತರ ಮನೆಗಳು ಇಲ್ಲಿವೆ.

ಇನ್ನು ಬೆಂಗಳೂರು ಮೂಲದ ಮೈಕ್ರೋ ಲ್ಯಾಬ್ಸ್ ಔಷಧೀಯ ಸೂತ್ರೀಕರಣಗಳು ಮತ್ತು ಸಕ್ರಿಯ ಔಷಧೀಯ ಪದಾರ್ಥಗಳ ತಯಾರಕರು ಹಾಗೂ ವಿತರಕರು. ಇದರ ಪ್ಯಾರಸಿಟಮಾಲ್ ಬ್ರಾಂಡ್ ಡೊಲೊ 650 ದೇಶದಲ್ಲಿ ಹೆಚ್ಚು ಶಿಫಾರಸು ಮಾಡಲಾದ ಬ್ರಾಂಡ್ ಆಗಿದೆ. ಮೈಕ್ರೋ ಲ್ಯಾಬ್ಸ್ ಅನ್ನು 1973 ರಲ್ಲಿ ಸುರಾನಾ ಅವರ ತಂದೆ ಜಿಸಿ ಸುರಾನಾ ಅವರು ಚೆನ್ನೈನಲ್ಲಿ ಸ್ಥಾಪಿಸಿದರು. ಕಂಪನಿಯು ಅಂದಿನಿಂದ ಭಾರತದ ಪ್ರಮುಖ ಆರೋಗ್ಯ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ, ಇದು ಯುಎಸ್ ಮತ್ತು ಯುರೋಪ್‌ನಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ.

Exit mobile version