Revenue Facts

ಡಿ.31 ರಂದು ರಾತ್ರಿ 2 ಗಂಟೆ ವರೆಗೆ ಮೆಟ್ರೋ ರೈಲು ಸೇವೆ..!

ಸಿಲಿಕಾನ್ ಸಿಟಿಯಲ್ಲಿ ಪ್ರತಿ ವರ್ಷವು ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸುತ್ತಾರೆ. ಸಾರ್ವಜನಿಕರ ಹಿತ ದೃಷ್ಟಿಯಿಂದ ಡಿ.31 ರಂದು ರಾತ್ರಿ 2 ಗಂಟೆ ವರೆಗೆ ಮೆಟ್ರೋ ಸಮಯಯವನ್ನು ವಿಸ್ತರಿಸಲಾಗಿದೆ. ಹೀಗಾಗಿ ಮೆಟ್ರೋ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.

ಬೆಂಗಳೂರಿನಲ್ಲಿ ಮೆಟ್ರೋ ರೈಲು (Metro train) ಸೇವೆಯನ್ನು ಡಿ.31 ರಂದು ರಾತ್ರಿ 2 ಗಂಟೆ ವರೆಗೆ ವಿಸ್ತರಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ದಿನ ರಾತ್ರಿ 11.30ಕ್ಕೆ ಮೆಟ್ರೋ ರೈಲು ಸಂಚಾರ ಕೊನೆಗೊಳ್ಳುತ್ತದೆ. ಆದರೆ ಡಿ.31 ರಂದು ರಾತ್ರಿ 2 ಗಂಟೆ ವರೆಗೆ ಕೊನೆಯ ರೈಲು ಸೇವೆಯನ್ನು ಬಿಎಂಆರ್ ಸಿಎಲ್ ವಿಸ್ತರಿಸಲಾಗಿದೆ

11.30ರ ನಂತರ ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣ ಪ್ರವೇಶ ನಿರ್ಬಂಧಿಸಲು ಸೂಚನೆ..!

ಬೆಂಗಳೂರಿನಲ್ಲಿ ಗುರುವಾರವೇ ಪೊಲೀಸ್‌ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ 11.30ರ ನಂತರ ಎಂ.ಜಿ. ರಸ್ತೆ(M.G. road) ಯ ಮೆಟ್ರೊ ನಿಲ್ದಾಣ ಪ್ರವೇಶ ನಿರ್ಬಂಧಿಸಬೇಕು ಎಂದು ಸೂಚನೆ ನೀಡಿದೆ. ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್‌ ಮೆಟ್ರೊ ನಿಲ್ದಾಣಗಳಿಗೆ ತೆರಳಿ ಸಂಚಾರ ಮಾಡಬಹುದು ಎಂದು ತಿಳಿಸಲಾಗಿದೆ.

ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು..!

ಸ್ಮಾರ್ಟ್‌ ಕಾರ್ಡ್ (Smart card) ಮತ್ತು ಕ್ಯೂಆರ್ ಕೋಡ್ ಟಿಕೆಟ್ ಹೊಂದಿರುವ ಪ್ರಯಾಣಿಕರು ಎಂದಿನಂತೆ ರಿಯಾಯಿತಿ ದರದಲ್ಲಿ ಪ್ರಯಾಣಿಸಬಹುದು. ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ (Cubbon Park) ಗೆ 11.30ರ ನಂತರ ಎಂ.ಜಿ.ರಸ್ತೆಯಿಂದ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ 50 ರೂ ಮೊತ್ತದ ಕಾಗದದ ಟಿಕೆಟ್ ವಿತರಿಸಲಾಗುವುದು. ಆದರೆ ಕಾಗದದ ಟಿಕೆಟ್ ಗಳನ್ನು ಅಂದು ಮುಂಚಿತವಾಗಿಯೇ ಪಡೆಯಬೇಕು. ಮಧ್ಯರಾತ್ರಿ ಟಿಕೆಟ್ ವಿತರಣೆ ಇರುವುದಿಲ್ಲ ಎಂದು BMRCL ತಿಳಿಸಿದೆ.

Exit mobile version