Revenue Facts

ಸರ್ಕಾರಿ ಕೆಲಸದ ಮಹಿಳೆಯರಿಗೆ ತಿಂಗಳಿಗೊಮ್ಮೆ ಋತುಚಕ್ರ ರಜೆ ಫಿಕ್ಸ್..!

ಹೆಣ್ಣು ತುಂಬಾ ಸೂಕ್ಷ್ಮ ಆದ್ದರಿಂದ ಋತುಚಕ್ರದ ಸಮಯದಲ್ಲಿ ರಜೆ ಬೇಕು. ಮಹಿಳಾ ಸರ್ಕಾರಿ ನೌಕರರಿಗೆ ವಿಶೇಷ ಋತುಚಕ್ರದ ರಜೆಯ ವಿಷಯವು ಆರೋಗ್ಯಕ್ಕೆ ಸಂಬಂಧಿಸಿದ ವಿಷಯವಾಗಿದೆ ಎಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಇಲಾಖೆಗೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯು ತನ್ನ ಹಿಂದಿನ ವರದಿಯಲ್ಲಿ ಋತು ಚಕ್ರದ ಸಮಯದಲ್ಲಿ ರಜೆ ನೀತಿಯನ್ನು ಶಿಫಾರಸು ಮಾಡಿತ್ತು. ಇದೀಗ ಇದಕ್ಕೆ ಸರ್ಕಾರ ಸ್ಪಂದಿಸಿದ್ದು, ಸಂಸತ್ತಿನ ಸಮಿತಿ ತನ್ನ ವರದಿ ನೀಡಿದೆ. ಇದರಲ್ಲಿ ಮಹಿಳಾ ನೌಕರರಿಗೆ ವಿಶೇಷ ‘ಮುಟ್ಟಿನ ರಜೆ’ ಆರೋಗ್ಯ ಸಂಬಂಧಿತ ಸಮಸ್ಯೆಯಾಗಿದೆ ಎಂದು ಕಾರ್ಮಿಕ ಸಚಿವಾಲಯ ಹೇಳಿದೆ.

1 ವರ್ಷದಲ್ಲಿ ಎಷ್ಟು ರಜೆ ಇವೆ..?

ಸಂಸತ್ತಿನಲ್ಲಿ ಮಂಡಿಸಿದ ತನ್ನ ವರದಿಯಲ್ಲಿ ಸಮಿತಿಯು ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮಗಳು 1972 ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳ ಕಲ್ಯಾಣಕ್ಕಾಗಿ ವಿವಿಧ ರೀತಿಯ ವೇತನ ರಜೆ ರೂಪದಲ್ಲಿವಿವಿಧ ರೀತಿಯ ಪ್ರೋತ್ಸಾಹವನ್ನು ಒದಗಿಸಿದೆ ಎಂದು ಹೇಳಲಾಗಿದ. ಮಕ್ಕಳ ಆರೈಕೆ ರಜೆ ಹಾಗೂ ಮಾತೃತ್ವ ರಜೆಯೂ ಸಹ ಸೇರಿದೆ. ಸರ್ಕಾರಿ ನೌಕರನಿಗೆ ವೈಯಕ್ತಿಕ ಅಗತ್ಯಗಳಿಗೆ ಕೆಲವು ಅಗತ್ಯಗಳನ್ನು ಪೂರೈಸಿಕೊಳ್ಳಲು ವರ್ಷದಲ್ಲಿ 30 ದಿನಗಳ ಗಳಿಕೆ ರಜೆ ಮತ್ತು ೮ ದಿನಗಳ ಕ್ಯಾಶುಯಲ್ ರಜೆಗಳನ್ನು ನೀಡಲಾಗುತ್ತದೆ ಎಂದು ಹೇಳಿದೆ.

ಈ ಬಗ್ಗೆ ಸ್ಮೃತಿ ಇರಾನಿ ಉತ್ತರವೇನು..?

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಡಿಸೆಂಬರ್ 8 ರಂದು ಪ್ರಶ್ನೆಸಿದ್ದಾರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಉತ್ತರಿಸಿದ್ದಾರೆ, ಎಲ್ಲಾ ಕೆಲಸದ ಸ್ಥಳಗಳಿಗೆ ವೇತನ ಸಹಿತ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಗಣನೆಯಲ್ಲಿ ಇಲ್ಲ ಎಂದು ಲೋಕಸಭೆಗೆ ತಿಳಿಸಿದರು.

Exit mobile version