ಭಾರತದಲ್ಲಿ ಅನಾದಿ ಕಾಲದಿಂದಲೂ ಬಳಸುತ್ತಿರುವ ಒಂದು ಶುಭ ಚಿಹ್ನೆ ಎಂದರೆ ಅದು ಸ್ವಸ್ತಿಕ. ಭಾರತದಲ್ಲಿ ಹುಟ್ಟಿದಂಥ ಈ ಚಿಹ್ನೆಗೆ ಸುಮಾರು 6,000 ವರ್ಷದ ಇತಿಹಾಸವಿದೆ.ಪ್ರತಿಯೊಂದು ಮಂಗಳಕರ ಮತ್ತು ಶುಭ ಕಾರ್ಯಗಳಲ್ಲಿ ನಾವು ಈ ಚಿಹ್ನೆಯನ್ನು ಕಾಣುತ್ತೇವೆ. ಸ್ವಸ್ತಿಕ ಚಿಹ್ನೆಯನ್ನ ಭಗವಾನ್ ಗಣೇಶನ ಚಿಹ್ನೆ ಎಂದು ಸಹ ಕರೆಯಲಾಗುವುದು. ಜಗತ್ತಿನ ಕೆಲವೆಡೆ ಸ್ವಸ್ತಿಕವನ್ನು ನಕ್ಷತ್ರ ಪುಂಜಗಳ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಸ್ವಸ್ತಿಕ ಚಿಹ್ನೆ ಬಿಡಿಸುವಾಗ ಅದರ ನಾಲ್ಕು ದಿಕ್ಕುಗಳಲ್ಲಿ ಇಡುವ ಚುಕ್ಕಿ ಗೌರಿ, ಭೂ ತಾಯಿ, ಕೂರ್ಮಾ ಹಾಗೂ ದೇವಾನುದೇವತೆಗಳ ಆವಾಸಸ್ಥಾನವೆಂದು ಪರಿಗಣಿಸಲಾಗಿದೆ.ಸ್ವಸ್ತಿಕ (卐) ಲಾಂಛನದ ನಾಲ್ಕು ಬಾಹುಗಳು 90 ಡಿಗ್ರಿಯಲ್ಲಿ ಬಾಗಿರುತ್ತವೆ. ಸಾಮಾನ್ಯವಾಗಿ ಒಂದು ಸಮಬಾಹು ಕ್ರಾಸ್ ಆಕಾರದ ರೂಪವನ್ನು ತೆಗೆದುಕೊಳ್ಳುವ ಒಂದು ಸಂಕೇತ.
ಸ್ವಸ್ತಿಕ ಚಿಹ್ನೆ ಅಂದ್ರೆ ಏನು..?
ಸ್ವಸ್ತಿಕ ಲಾಂಛನವೆಂದರೆ ಅದನ್ನು ವಿಘ್ನನಿವಾರಕ ಗಣಪನ ರೂಪದಲ್ಲಿ ನೋಡುತ್ತಾರೆ. ಸ್ವಸ್ತಿಕ ಚಿಹ್ನೆಯ ಎಡಕ್ಕೆ ಇರುವ ಭಾಗವನ್ನು ಗಂ ಬೀಜ ಮಂತ್ರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಗಣಪತಿಯನ್ನು ಸ್ಥಾಪಿಸಿದಂತಾಗುತ್ತದೆ. ಸ್ವಸ್ತಿಕ ಲಾಂಛನ ಇದ್ದೆಡೆ ನಕಾರಾತ್ಮಕತೆ ದೂರವಾಗುತ್ತದೆ. ವಾಸ್ತಯು ಶಾಸ್ತ್ರದ ಪ್ರಕಾರವು ಸ್ವಸ್ತಿಕಕ್ಕೆ ಮಹತ್ವ ಇದೆ. ಸ್ವಸ್ತಿಕ ಲಾಂಛನದ ನಾಲ್ಕು ಬಾಹುಗಳು 90 ಡಿಗ್ರಿಯಲ್ಲಿ ಬಾಗಿರುತ್ತವೆ.
ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿಹ್ನೆಯ ಮಹತ್ವ
1.ಧನಾತ್ಮಕತೆ ಸೃಷ್ಟಿಸುವ ಸ್ವಸ್ತಿಕ್: ನಕಾರಾತ್ಮಕತೆಯನ್ನು ದೂರ ಮಾಡುತ್ತದೆ. ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಇರುವುದು ಶುಭ ಎಂದು ವಾಸ್ತು ಶಾಸ್ತ್ರವೂ ಹೇಳುತ್ತದೆ. ಇದು ಮನೆಯಲ್ಲಿನ ನೆಗೆಟಿವ್ ಎನರ್ಜಿಯನ್ನು ಹೊರ ಹಾಕಿ, ಪಾಸಿಟಿವ್ ಎನರ್ಜಿಯನ್ನು ವೃದ್ಧಿಸುತ್ತದೆ.
2.ಸ್ವಸ್ತಿಕ ಚಿಹ್ನೆಯನ್ನು ಮನೆ ಮುಂಭಾಗಿಲಿನಲ್ಲಿ ಹಾಕಿದರೆ, ದುಷ್ಟ ಶಕ್ತಿಗಳು ಮನೆಯೊಳಗೆ ಬರೋದಿಲ್ಲ ಎನ್ನಲಾಗುತ್ತದೆ.
3.ಸ್ವಸ್ತಿಕ್ ಲಾಂಛನವು ಮನೆಯಲ್ಲಿ ಸುಖ, ಸಂತೋಷ, ಶಾಂತಿ, ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.
4.ಸ್ವಸ್ತಿಕ್ ಲಾಂಛನದ ಮೇಲೆ ದೇವರ ತೀರ್ಥ, ಗಂಗಾ ಜಲ ಮತ್ತು ಹಸುವಿನ ಗಂಜಲವನ್ನು ಚಿಮುಕಿಸುತ್ತಿದ್ದರೆ ಅದರ ಶಕ್ತಿ ಹೆಚ್ಚಾಗುತ್ತದೆ.
5. ಸ್ವಸ್ತಿಕ್ ಲಾಂಛನವನ್ನು ಅಳವಡಿಸಿದ ನಂತರ ಧೂಳು ಬೀಳದೆ ಇರುವ ಹಾಗೆ ಆಗಾಗ ಒರೆಸುತ್ತಿರಬೇಕು.
6.ಸ್ವಸ್ತಿಕ್ ಚಿನ್ನೆಯು ಆರ್ಥಿಕ ಬಿಕ್ಕಟ್ಟಿನಿಂದ ನಿಮ್ಮನ್ನು ಮುಕ್ತಗೊಳಿಸುತ್ತದೆ.
7.ಮನೆಯ ಗೇಟ್ ಹಾಗೂ ಕಾಂಪೌಂಡ್ ಗೋಡೆ ಮೇಲೆ ಸ್ವಸ್ತಿಕ್ ಲಾಂಛನವನ್ನು ಹಾಕಬೇಕು.
8.ಮನೆಯ ಮುಂಭಾಗದಲ್ಲಿ ಸ್ವಸ್ತಿಕ ಚಿಹ್ನೆ ಬಿಡಿಸುವುದರಿಂದ ಮನೆಗೆ ಶುಭವಾಗುವುದು.
9.ದೀಪಾವಳಿಯಲ್ಲಿ ಕಬೋರ್ಡ್‌ನಲ್ಲಿ ಸ್ವಸ್ತಿಕ ಚಿಹ್ನೆ ಬರೆಯುವುದರಿಂದ ಸಂಪತ್ತು ವೃದ್ಧಿಸಲಿದೆ