Revenue Facts

ಕೈಗೆಟಕುವ ದರ, ಸ್ಲಂ ಮುಕ್ತ ಮುಂಬೈ ಈಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಗುರಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೋಮವಾರ ಹೋಮ್‌ಥಾನ್ ಪ್ರಾಪರ್ಟಿ ಎಕ್ಸ್‌ಪೋ 2022 ರಲ್ಲಿ ಮಾತನಾಡುತ್ತಾ, ನಗರದಲ್ಲಿನ ಮನೆಗಳ ಬೆಲೆಗಳು ಖರೀದಿದಾರರ ಕೈಗೆಟುಕುವಂತೆ ಮಾಡಲು ಖಾಸಗಿ ಡೆವಲಪರ್‌ಗಳಿಗೆ ಸೂಚಿಸಿದ್ದಾರೆ.

NAREDCO ಮಹಾರಾಷ್ಟ್ರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನಿರ್ಮಾಣವು ಒಂದು ಪ್ರಮುಖ ಕ್ಷೇತ್ರವಾಗಿ ಎಲ್ಲರಿಗೂ ವಸತಿ ಒದಗಿಸುವಂತಿರಬೇಕು ಎಂದು ಹೇಳಿದರು. “ಉತ್ತಮ ಗುಣಮಟ್ಟದ ಮತ್ತು ಕೈಗೆಟುಕುವ ದರದಲ್ಲಿ ಮನೆ ಹೊಂದುವುದು ಪ್ರತಿಯೊಬ್ಬರ ಕನಸಾಗಿದೆ” ಎಂದು ಏಕನಾಥ್ ಶಿಂಧೆ ಹೇಳಿದ್ದಾರೆ.

NAREDCO ಮಹಾರಾಷ್ಟ್ರ ಅಧ್ಯಕ್ಷ ಸಂದೀಪ್ ರುನ್ವಾಲ್ ಮತ್ತೊಮ್ಮೆ ಸ್ಟ್ಯಾಂಪ್ ಡ್ಯೂಟಿಯನ್ನು ಕಡಿತಗೊಳಿಸುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ. ಇದರಿಂದಾಗಿ ಹೆಚ್ಚು ಪ್ರಯೋಜನಗಳನ್ನು ಮನೆ ಖರೀದಿದಾರರಿಗೆ ರವಾನಿಸಬಹುದು ಎಂದು ಮನವಿ ಮಾಡಿದ್ದಾರೆ.

ಈ ವೇಳೆ , ಬಿಲ್ಡರ್‌ಗಳ ಸಂಘದ ಅವಹಾಲುಗಳು ಏನೇನು ಎಂಬುದನ್ನು ಪಟ್ಟಿ ಮಾಡಿ ನೀಡುವಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಿಳಿಸಿದ್ದಾರೆ. ಹಣಕಾಸು ಇಲಾಖೆಯೊಂದಿಗೆ ಸಮಾಲೋಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೈಗೆಟಕುವ ದರದ ವಸತಿಗಳ ಅಗತ್ಯವನ್ನು ಒತ್ತಿಹೇಳುತ್ತಾ, ಏಕನಾಥ್ ಶಿಂಧೆ ತಮ್ಮ ತಂಡವು ಹಳೆಯ ಮತ್ತು ಶಿಥಿಲಗೊಂಡ ಕಟ್ಟಡಗಳ ಉತ್ತಮ ಕ್ಲಸ್ಟರ್ ಅಭಿವೃದ್ಧಿಗೆ ಕೆಲಸ ಮಾಡುತ್ತಿದೆ. ಪೊಲೀಸ್ ಸಿಬ್ಬಂದಿಯ ವಸತಿಗೆ ಆದ್ಯತೆ ನೀಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಮುಂಬೈಯನ್ನು ಕೊಳೆಗೇರಿ ಮುಕ್ತ ಮತ್ತು ಆರೋಗ್ಯಕರ ನಗರವನ್ನಾಗಿ ಮಾಡುವುದು ನನ್ನ ದೃಷ್ಟಿಯಾಗಿದೆ ಎಂದು ಈ ವೇಳೆ ತಿಳಿಸಿದ್ದಾರೆ.

Exit mobile version