Revenue Facts

Lunar Eclipse 2023;ಚಂದ್ರಗ್ರಹಣದ ಗೋಚರ, ಅಂತ್ಯ ಯಾವಾಗ?

Lunar Eclipse 2023;ಚಂದ್ರಗ್ರಹಣದ ಗೋಚರ, ಅಂತ್ಯ ಯಾವಾಗ?

ಬೆಂಗಳೂರು;ನಮಗೆಲ್ಲರಿಗೂ ತಿಳಿದಿರುವಂತೆ, ಚಂದ್ರ ಗ್ರಹಣ ಎಂದೂ ಕರೆಯಲ್ಪಡುವ ಚಂದ್ರಗ್ರಹಣವು ಭಾರತೀಯ ಆಚರಣೆಗಳ ಪ್ರಕಾರ ಮಂಗಳಕರ ಸಂದರ್ಭಗಳಲ್ಲಿ ಒಂದಾಗಿದೆ ಮತ್ತು ಇದು ವೈಜ್ಞಾನಿಕ ಕ್ಷೇತ್ರದಲ್ಲಿಯೂ ಪ್ರಾಮುಖ್ಯತೆಯನ್ನು ಹೊಂದಿದೆ. ವರ್ಷದ ಕೊನೆಯ ಚಂದ್ರ ಗ್ರಹಣವು ಪಾರ್ಶ್ವ ಚಂದ್ರ ಗ್ರಹಣ ಅಥವಾ ಪಾಕ್ಷಿಕ ಚಂದ್ರ ಗ್ರಹಣವಾಗಿದ್ದು, ಇದನ್ನು ರಾಹು ಗ್ರಸ್ತ ಚಂದ್ರಗ್ರಹಣ ಎಂದೂ ಕರೆಯಲಾಗುತ್ತದೆ.ಚಂದ್ರಗ್ರಹಣವು ಇಂದು ರಾತ್ರಿ 11.30ಕ್ಕೆ ಗೋಚರಿಸಲಿದ್ದು, ಮಧ್ಯರಾತ್ರಿ 3.36 ಅಂತ್ಯವಾಗಲಿದೆ.ಮೇಷ ರಾಶಿ ಸಿಂಹ ಮತ್ತು ಕರ್ಕಾಟಕ ಲಗ್ನ, ಅಶ್ವಿನಿ ನಕ್ಷತ್ರದ 4ನೇ ಪಾದದಲ್ಲಿ ಈ ಗ್ರಹಣ ಗೋಚರಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಭಾಗಶಃ ಕಾಣಿಸಿಕೊಳ್ಳಲಿದ್ದು, ಗೋಲ್ಡನ್ ರಿಂಗ್ ರೀತಿಯಲ್ಲಿ ಗೋಚರಿಸಲಿದೆ.ಈ ಹಿನ್ನೆಲೆಯಲ್ಲಿ ಇಂದು ಕೆಲ ದೇವಸ್ಥಾನಗಳು ಈಗಾಗಲೇ ಬಂದ್ ಆಗಿವೆ. ಇನ್ನು ಸಂಜೆ 7 ಗಂಟೆ ಬಳಿಕ ಆಂಧ್ರ ಪ್ರದೇಶದ ತಿರುಪತಿ ತಿಮ್ಮಪ್ಪನ ಸನ್ನಿಧಿ ಹಾಗೂ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲುಗಳನ್ನು ಸಂಜೆ 6ರ ನಂತರ ಮುಚ್ಚಲಾಗುತ್ತದೆ.ರಾಜ್ಯದ ಈ ದೇವಸ್ಥಾನಗಳು ಸಂಜೆ ಬಂದ್ ಈ ವರ್ಷದ ಕೊನೆಯ ಚಂದ್ರಗ್ರಹಣ ಇಂದು ನಡೆಯಲಿದೆ. ಈ ಹಿನ್ನೆಲೆ ರಾಜ್ಯದ ಹಲವು ದೇವಾಲಯಗಳು ಸಂಜೆ ಬಂದ್ ಆಗಲಿವೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಜೆ 6.30 ನಂತರ ಬಂದ್ ಮಾಡಲಾಗುತ್ತದೆ. ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನವನ್ನು ಸಂಜೆ 6ಕ್ಕೆ ಬಂದ್ ಮಾಡಲಾಗುವುದು. ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಾಗಿಲನ್ನು ಸಂಜೆ 6 ಗಂಟೆ ನಂತರ ಮುಚ್ಚಲಾಗುತ್ತದೆ. ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಸಂಜೆ 4ರಿಂದ 5.30ರ ತನಕ ಮಾತ್ರ ಆತ್ಮಲಿಂಗದ ಸ್ಪರ್ಶ ದರ್ಶನಕ್ಕೆ ಅವಕಾಶ ಇದೆ.ಭಾರತ, ಬೆಲ್ಜಿಯಂ, ಗ್ರೀಸ್‌, ಫಿನ್‌ಲ್ಯಾಂಡ್‌, ಪೋರ್ಚುಗಲ್‌, ಥೈಲ್ಯಾಂಡ್‌, ಹಂಗೇರಿ, ಈಜಿಪ್ಟ್‌, ಟರ್ಕಿ, ಇಂಡೋನೇಷ್ಯಾ, ಇಟಲಿ, ಮಯನ್ಮಾರ್‌, ಸ್ಪೇನ್‌ ಸೇರಿದಂತೆ ಇನ್ನು ಅನೇಕ ದೇಶಗಳಲ್ಲಿ ಈ ರಾಹು ಗ್ರಸ್ಥ ಚಂದ್ರ ಗ್ರಹಣ ಗೋಚರಿಸಲಿದೆ.

Exit mobile version