ಹೊಸದಿಲ್ಲಿ;ಹೊಸ ವರ್ಷದ ಮುನ್ನವೇ ಬಿಗ್ ರಿಲೀಫ್ ಸಿಕ್ಕಿದೆ. ಇದರ ಅಡಿಯಲ್ಲಿ, ಆಯಿಲ್ ಮಾರ್ಕೆಟಿಂಗ್ ಕಂಪನಿಯು(Oil Marketing Company) ವಾಣಿಜ್ಯ ಎಲ್ಪಿಜಿ ಸಿಲಿಂಡರ್(Commercial cylinder price)ಗಳ ಬೆಲೆಗಳನ್ನು ಕಡಿಮೆ ಮಾಡಲಾಗಿದೆ. 19 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆ 39.50 ರೂ. ಕಡಿತಗೊಂಡಿದೆ. ಹೀಗಾಗಿ ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 1757 ರೂ.ಗೆ ಲಭ್ಯವಿರುತ್ತದೆ. ದೇಶದ ಇತರ ನಗರಗಳಲ್ಲೂ ಸಿಲಿಂಡರ್ ಬೆಲೆ ಕಡಿಮೆಯಾಗಿದೆ. ಈ ಹಿಂದೆ ಡಿಸೆಂಬರ್ 1 ರಂದು 19 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ಬದಲಾಯಿಸಲಾಗಿತ್ತು. ಆಗ ಸಿಲಿಂಡರ್ ಬೆಲೆಯನ್ನು 21 ರೂ. ಹೆಚ್ಚಿಸಲಾಗಿತ್ತು. ಆದರೆ, ಅದಕ್ಕೂ ಮುನ್ನ ನವೆಂಬರ್ 16 ರಂದು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ 57 ರೂಪಾಯಿ ಕಡಿತಗೊಳಿಸಲಾಗಿತ್ತು. ಕೆಲವು ತಿಂಗಳುಗಳಿಂದ, ವಾಣಿಜ್ಯ ಎಲ್‌ಪಿಜಿ(Comercial LPG) ಸಿಲಿಂಡರ್‌ಗಳ ಬೆಲೆಯಲ್ಲಿ ಬಹುತೇಕ ಪ್ರತಿ ತಿಂಗಳು ಬದಲಾವಣೆ ಕಂಡುಬರುತ್ತಿದೆ. ಸಿಲಿಂಡರ್ ದರವನ್ನು ಪದೇ ಪದೇ ಪರಿಷ್ಕರಿಸಲಾಗುತ್ತಿದೆ. ಆದರೆ,ಮನೆ ಬಳಕೆ ಗ್ಯಾಸ್ ಸಿಲಿಂಡರ್ (Domestic LPG) ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಂಗಳೂರಿನಲ್ಲಿ ಇದೀಗ 19 ಕಿಲೋ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ 1,883 ರೂ. ಇದೆ. 14.2 ಕಿಲೋ ಮನೆ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆ 905 ರೂ. ಇದೆ.ವಾಣಿಜ್ಯ ಸಿಲಿಂಡರ್‌ಗಳ ಹೊಸ ಬೆಲೆಗಳು ಇಂದಿನಿಂದ ಅಂದರೆ ಡಿಸೆಂಬರ್ 22 ರಿಂದಲೇ ಜಾರಿಗೆ ಬಂದಿವೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
ನಾಲ್ಕು ಮಹಾನಗರಗಳಲ್ಲಿ ಹೊಸ ಬೆಲೆಗಳು ಎಷ್ಟಿದೆ?
ದೆಹಲಿ – 1757.50 ರೂ.
ಕೋಲ್ಕತ್ತಾ – 1869 ರೂ.
ಮುಂಬೈ – 1710 ರೂ.
ಚೆನ್ನೈ – 1929.50 ರೂ.
