Revenue Facts

LPG Cylinder Price Hike: ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಏರಿಕೆ!

LPG Cylinder Price Hike:  ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರ್ ಬೆಲೆಯಲ್ಲಿ 25.50 ರೂ. ಏರಿಕೆ!

Assam, Sept 01 (ANI): A worker carries an LPG gas cylinder for delivery, in Guwahati on Wednesday. The price of non-subsidised LPG cylinders hiked by Rs 25 effective from 1st September. (ANI Photo)

#LPG Cylinder #price #hike #25.50 rupees #commercial #use
ನವದೆಹಲಿ;ಬೆಲೆ ಏರಿಕೆ ಮಾಡಿ ಅಡುಗೆ ಅನಿಲ ಗ್ರಾಹಕರಿಗೆ ಸರ್ಕಾರ ಶಾಕ್ ನೀಡಿದೆ. ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯಲ್ಲಿ 25.50 ರೂ. ಹೆಚ್ಚಳವಾಗಿದೆ. ಲೋಕಸಭಾ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಈ ಘೋಷಣೆ ಬಂದಿದೆ. ಮಾರ್ಚ್ 1 ರ ಶುಕ್ರವಾರ ತೈಲ ಮಾರುಕಟ್ಟೆ ಕಂಪನಿಗಳು ಎಲ್‌ ಪಿಜಿ ಸಿಲಿಂಡರ್‌ ದರಗಳನ್ನು ಘೋಷಿಸಿದ್ದು,ಗೃಹಬಳಕೆಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ (Gas Cylinder price Hike) ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪರಿಷ್ಕೃತ ಬೆಲೆ ಇಂದಿನಿಂದ (ಮಾರ್ಚ್ 1) ಅನ್ವಯವಾಗಲಿದೆ. ಕಳೆದ ತಿಂಗಳು ಕೂಡ ತೈಲ ಕಂಪನಿಗಳು ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ತುಸು ಹೆಚ್ಚಳ ಮಾಡಿದ್ದವು.ವಾಣಿಜ್ಯ ಸಿಲಿಂಡರ್​ಗಳ ದರ ಬಹುತೇಕ ಪ್ರತಿ ತಿಂಗಳು ಬದಲಾಗುತ್ತಿದೆ. ಈ ಬದಲಾವಣೆಗಳಿಂದಾಗಿ, ಕೆಲವೊಮ್ಮೆ ಗ್ರಾಹಕರಿಗೆ ಪ್ರಯೋಜನವಾದರೆ ಇನ್ನು ಕೆಲವೊಮ್ಮೆ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (HPCL) ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಮಾರುಕಟ್ಟೆ ಬೆಲೆಯನ್ನು ಆಧರಿಸಿ ಪ್ರತಿ ತಿಂಗಳ ಮೊದಲನೆಯ ದಿನ LPG ಬೆಲೆಯನ್ನು ಪರಿಷ್ಕರಣೆ ಮಾಡುತ್ತವೆ

ಯಾವ ನಗರದಲ್ಲಿ ಎಷ್ಟು ದರ?

ವಾಣಿಜ್ಯ ಸಿಲಿಂಡರ್ ದೆಹಲಿಯಲ್ಲಿ 1769.50 ರೂ.ಗಳ ಬದಲು 1795 ರೂ.ಗೆ ಲಭ್ಯವಿದೆ. ಕೋಲ್ಕತ್ತಾದಲ್ಲಿ ಈ ಸಿಲಿಂಡರ್ ಈಗ 1887 ರೂ.ಗಳ ಬದಲು 1911 ರೂ.ಗೆ ಏರಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಈಗ ಮುಂಬೈನಲ್ಲಿ 1749 ರೂ.ಗೆ ಮತ್ತು ಚೆನ್ನೈನಲ್ಲಿ 1960 ರೂ.ಗೆ ಏರಿದೆ.ಇಂದಿನಿಂದ ದೆಹಲಿ ಮತ್ತು ಮುಂಬೈನಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆ 25.50 ರೂ. ಕೋಲ್ಕತ್ತಾದಲ್ಲಿ 24 ರೂ., ಚೆನ್ನೈನಲ್ಲಿ 23.50 ರೂ. ಏರಿಕೆಯಾಗಿದೆ. ಇಂದು ಅಹಮದಾಬಾದ್, ಮೀರತ್, ದೆಹಲಿ, ಜೈಪುರ, ಇಂದೋರ್, ಲಕ್ನೋ, ಆಗ್ರಾ, ಮುಂಬೈ ಮತ್ತು ದೇಶಾದ್ಯಂತ ಎಲ್ಪಿಜಿ ದರಗಳನ್ನು ಹೆಚ್ಚಿಸಲಾಗಿದೆ.

Exit mobile version