Revenue Facts

ಅಕ್ರಮ ಆಸ್ತಿ ಗಳಿಕೆ ಆರೋಪ: ನಂಜನಗೂಡು ಉಪ ನೋಂದಣಾಧಿಕಾರಿ ಅಮಾನತು

#Lokayuktha, #Nanjanagudu sub Registar # suspende #Revenue department
ಬೆಂಗಳೂರು: ನ. 20: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ನಂಜನಗೂಡಿನ ಹಿರಿಯ ಉಪ ನೋಂದಣಾಧಿಕಾರಿ ಶಿವಶಂಕರಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಿ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕ ಆಯುಕ್ತೆ ಬಿ.ಆರ್‌. ಮಮತಾ ಅವರು ಆದೇಶ ಹೊರಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಶಿವಶಂಕರಮೂರ್ತಿ ಅವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.2004 ರಲ್ಲಿ ಸೇವೆ ಸೇರಿದ್ದ ಶಿವಶಂಕರಮೂರ್ತಿ ಅವರು ಅಕ್ರಮ ಆಸ್ತಿ ಗಳಿಸಿದ ಮಾಹಿತಿ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಿಸಿ ತನಿಖೆ ನಡೆಸಿದ್ದರು. ದಾಳಿ ವೇಳೆ ಮೂರು ಕೋಟಿ ರೂ. ಗೂ ಅಧಿಕ ಮೊತ್ತದ ಆಸ್ತಿಗಳು ಪತ್ತೆಯಾಗಿದ್ದವು. ಶೇ. 400 ರಷ್ಟು ಅಕ್ರಮ ಆಸ್ತಿ ಹೊಂದಿರುವುದು ದಾಳಿಯ ಪ್ರಾಥಮಿಕ ವರದಿಯಿಂದ ಬೆಳಕಿಗೆ ಬಂದಿತ್ತು.

ಇವರ ವಿರುದ್ಧದ ಮುಕ್ತ ತನಿಖೆಗೆ ಅವರು ಸೇವೆಯಿಂದ ಅಮಾನತಿನಲ್ಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಪತ್ರ ಬರೆದಿದ್ದರು. ಈ ಹಿನ್ನೆಲೆಯ್ಲಿ ಶಿವಶಂಕರ ಮೂರ್ತಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಇವರ ವಿರುದ್ಧ ಇಲಾಖೆ ವಿಚಾರಣೆ ಬಾಕಿ ಇರಿಸಿ ಅಮಾನತು ಆದೇಶ ಹೊರಡಿಸಲಾಗಿದೆ. ಅಮಾನತು ಅವಧಿಯಲ್ಲಿ ಕೇವಲ ಜೀವನಾಧಾರ ಭತ್ಯೆ ಪಡೆಯಲಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Exit mobile version