Revenue Facts

ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ

ಆಸ್ತಿ ವಿವರ ಸಲ್ಲಿಸದ ಶಾಸಕರ ಹೆಸರು ಪ್ರಕಟಿಸಿದ ಲೋಕಾಯುಕ್ತ ಸಂಸ್ಥೆ

#Lokayukta #published #names # MLAs #who did not #submit asset details

ಬೆಂಗಳೂರು, ನ 30: ಲೋಕಾಯುಕ್ತ(Lokayukta) ಮಾರ್ಗಸೂಚಿಯಂತೆ ಶಾಸಕರು ಮತ್ತು ವಿಧಾನಪರಿಷತ್‌ ಸದಸ್ಯರು ತಮ್ಮ ಆಸ್ತಿ ವಿವರಗಳನ್ನು ನೀಡಬೇಕು,ಆಸ್ತಿ ವಿವರ(Property details) ಸಲ್ಲಿಸದ ಕರ್ನಾಟಕದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರ ಪಟ್ಟಿಯನ್ನು ಲೋಕಾಯುಕ್ತ (karnataka lokayukta) ಬಹಿರಂಗಡಿಸಿದೆ.ಆದರೆ 51 ಶಾಸಕರು ಇದನ್ನು ಸಲ್ಲಿಕೆ ಮಾಡಿಲ್ಲ ಎಂದು ಲೋಕಾಯುಕ್ತ ವರದಿ ಬಿಡುಗಡೆ ಮಾಡಿದೆ. ವಿಧಾನ ಪರಿಷತ್‌ನ 21, ವಿಧಾನಸಭೆಯ 30 ಶಾಸಕರು ಆಸ್ತಿ ವಿವರ ಪ್ರಕಟಿಸಿಲ್ಲ ಎಂದು ತನಿಖಾ ಸಂಸ್ಥೆ ಹೇಳಿದೆ. ಆಸ್ತಿ ವಿವರ ಸಲ್ಲಿಸಲು ಕಳೆದ ಜೂನ್ 30 ಕೊನೆಯ ದಿನವಾಗಿತ್ತು. ಆದರೆ ಸಚಿವರಾದ ಕೆ.ಎನ್.ರಾಜಣ್ಣ, ರಾಮಲಿಂಗಾ ರೆಡ್ಡಿ, ಜಮೀರ್ ಅಹ್ಮದ್, ಕೆ.ಹೆಚ್.ಮುನಿಯಪ್ಪ, ರಹೀಮ್ ಖಾನ್ ಸೇರಿದಂತೆ 51 ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ.

21 ಪರಿಷತ್ ಸದಸ್ಯರು ಆಸ್ತಿ ವಿವರ ಸಲ್ಲಿಸಿಲ್ಲ.ಕಳೆದ ವಿಧಾನಸಭೆಯ ಅವಧಿಯಲ್ಲಿ ಸಚಿವರಾಗಿದ್ದ ಬಿ.ಶ್ರೀರಾಮುಲು, ನಾರಾಯಣಗೌಡ, ಎಸ್.ಅಂಗಾರ ಸೇರಿದಂತೆ 81 ಶಾಸಕರು ವಿವರ ಸಲ್ಲಿಸಿಲ್ಲ ಎಂದು ತಿಳಿದುಬಂದಿದೆ.ಸರಕಾರಿ ನೌಕರನಲ್ಲದ ಪ್ರತಿಯೊಬ್ಬ ಸಾರ್ವಜನಿಕರ ನೌಕರ ಈ ಕಾಯಿದೆಯಂತೆ, ಈ ಅಧಿನಿಯಮ(Act) ಜಾರಿಗೆ ಬಂದ ಮೂರು ತಿಂಗಳೊಳಗೆ ಮತ್ತು ಜೂನ್‌ಗಿಂತ ಮುಂಚಿತವಾಗಿ ಪ್ರತಿ ವರ್ಷವೂ ಪ್ರತಿ ವರ್ಷ ತನ್ನ ಮತ್ತು ಕುಟುಂಬದ ಸದಸ್ಯರ ಆಸ್ತಿ ವಿವರಗಳನ್ನು ನಿಗದಿತ ನಮೂನೆಯಲ್ಲಿ ಲೋಕಾಯುಕ್ತರಿಗೆ ಸಲ್ಲಿಸಬೇಕೆಂಬ ನಿಯಮವಿದೆ. ಅದು ಕಡ್ಡಾಯ ಕೂಡ. 224 ಶಾಸಕರಿಗೂ ಆಸ್ತಿ ವಿವರ(Property details) ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಅವರು ಜೂನ್ 30 ಡೆಡ್​ಲೈನ್ ನೀಡಿದ್ದರು. ಲೋಕಾಯುಕ್ತ ನ್ಯಾ.ಬಿ.ಎಸ್​.ಪಾಟೀಲ್ ಅವರು ಎಲ್ಲಾ ಪಕ್ಷದ ಶಾಸಕರ ಆಸ್ತಿ ವಿವರ ಪಡೆದು ಸಲ್ಲಿಸುವಂತೆ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಮೌಖಿಕ ಸೂಚನೆ ನೀಡಿದ್ದರು.

Exit mobile version