Revenue Facts

ಬೆಳ್ಳಂಬೆಳಗ್ಗೆ ರಾಜ್ಯಾದ್ಯಂತ ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

Lokayukta office being seal-down due to spike in Coronavirus positive cases , during the fifth phase of nationwide COVID-19 lockdown, in Bengaluru on Wednesday 1st July 2020 Pics: www.pics4news.com

#Lokayukta attacks # houses of corrupt #government officials #across the state # morning

ಬೆಂಗಳೂರು;ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರು ಸೇರಿದಂತೆ ಬಳ್ಳಾರಿ, ತುಮಕೂರು, ಮಂಡ್ಯ, ವಿಜಯನಗರ, ಕೋಲಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದಾರೆ. ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ದಾಳಿ ನಡೆದಿದೆ.ಮಂಡ್ಯದಲ್ಲಿ 3 ಕಡೆ ದಾಳಿ ನಡೆಸಿದ್ದು, ಬಿಬಿಎಂಪಿ ಅಧಿಕಾರಿ ಮಂಜೇಶ್ ಗೆ ಸೇರಿದ ಮಳವಳ್ಳಿ ತಾಲೂಕಿನ ಹಲಗೂರು, ಗುಂಡಾಪುರ ಗ್ರಾಮದ ಮನೆಗಳ ಮೇಲೆ, ವಿಜಯನಗರಜಿಲ್ಲೆಯ ಬೆಸ್ಕಾಂ(Bescom) ಜನರಲ್ ಮ್ಯಾನೇಜರ್ ನಾಗರಾಜ್ & ಅವರ ಸಂಬಂಧಿಕರ ಮನೆಗಳ ಮೇಲೆ ರೇಡ್ ಮಾಡಲಾಗಿದೆ. ಈ ವೇಳೆ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.ವಿಜಯನಗರ ಜಿಲ್ಲೆಯ ಬೆಸ್ಕಾಂ ಅಧಿಕಾರಿಯಾಗಿರುವ ನಾಗರಾಜ್ ಎನ್ನುವವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ನಾಗರಾಜ್ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.ನಾಗರಾಜ್‌ಗೆ ಸೇರಿದ ಬಳ್ಳಾರಿಯ 7 ಕಡೆಗಳಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಈ ವೇಳೆ ನಾಗರಾಜ್ ಹೆಸರಲ್ಲಿ 9 ಸೈಟ್‌ಗಳು, 3 ಮನೆಗಳು, 3 ಪೆಟ್ರೋಲ್ ಬಂಕ್, ಕೃಷಿ ಜಮೀನು, ಶಿಕ್ಷಣ ಸಂಸ್ಥೆಗಳು ಪತ್ತೆಯಾಗಿದೆ. ದಾಳಿ ವೇಳೆ ಹಲವಾರು ದಾಖಲೆಗಳನ್ನ ಪತ್ತೆಹಚ್ಚಿರುವ ಲೋಕಾಯುಕ್ತ ಅಧಿಕಾರಿಗಳು ಶೋಧಕಾರ್ಯ ಮುಂದುವರಿಸಿದ್ದಾರೆ,ಚಿತ್ರದುರ್ಗ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.

ಮಂಡ್ಯ ಜಿಲ್ಲೆಯಲ್ಲಿ ಮೂರು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ

ಮಂಡ್ಯದ ಬಿಬಿಎಂಪಿ(BBMP) ಅಧಿಕಾರಿ ಮಂಜೇಶ್ ಎನ್ನುವವರಿಗೆ ಬೆಳಗ್ಗೆ ಲೋಕಾಯುಕ್ತ(Lokayukta) ಅಧಿಕಾರಿಗಳು ಶಾಕ್ ನೀಡಿದ್ದು, ಮಂಜೇಶ್ ಮನೆ ಸೇರಿದಂತೆ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಮಳವಳ್ಳಿ ತಾಲೂಕಿನ ಹಲಗೂರು ಹಾಗೂ ಕುಂದಾಪುರ ಗ್ರಾಮದ ಮನೆಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.ಅಲ್ಲದೆ ಮಂಜೇಶ್ ಸಂಬಂಧಿ ಸುರೇಂದ್ರಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿದೆ.ಮದ್ದೂರು ತಾಲೂಕಿನ ಎಸ್ ಐ ಕೋಡಿಹಳ್ಳಿ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಎಸ್‌ಐ ಕೋಡಿಹಳ್ಳಿಯಲ್ಲಿರುವ ಬಿಬಿಎಂಪಿ ಅಧಿಕಾರಿ ಮಂಜೇಶ್ ಅಜ್ಜಿ ಮನೆ ಸೇರಿದಂತೆ ಮಂಜೇಶ್ಗೆ ಸಂಬಂಧಿಸಿದಂತಹ ಪ್ರತಿಯೊಬ್ಬರ ನಿವಾಸದ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Exit mobile version