Revenue Facts

ಮತದಾರರ ಗುರುತಿನ ಚೀಟಿ ಬದಲು ಮತದಾನಕ್ಕೆ ಮಾನ್ಯವಾದ 12 ಗುರುತಿನ ಪುರಾವೆಗಳನ್ನು ಪಟ್ಟಿ

identity#proofs#documents#assembly# election
ಬೆಂಗಳೂರು ಏ 10:ಮತದಾನ ಪ್ರತಿಯೊಬ್ಬ ಭಾರತೀಯನ ಹಕ್ಕು. ಮೇ.10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮತದಾನ ಚೀಟಿ ಬದಲು 12 ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆಗಳಿದ್ದರೂ ಮತದಾನ ಮಾಡಬಹುದು. ಇದಕ್ಕೆ ಚುನಾವಣಾ ಆಯೋಗ ಸಮ್ಮತಿ ಸೂಚಿಸಿದೆ. ರಾಜ್ಯ ವಿಧಾನಸಭಾ ಚುನಾವಣೆಯು ಮೇ 10 ರಂದು ನಿಗದಿಯಾಗಿದೆ. ಮೇ 13 ರಂದು ಫಲಿತಾಂಶ ಪ್ರಕಟಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ಗಳನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಮತದಾನದ ಸಂದರ್ಭದಲ್ಲಿ ಪಾರದರ್ಶಕತೆ ತರಲು ಮತ್ತು ಖೊಟ್ಟಿ ಮತದಾನ ತಡೆಯುವ ಉದ್ದೇಶ ದಿಂದ ಮತದಾರರು ಮತದಾನ ಕೇಂದ್ರದಲ್ಲಿ ಅವ್ರ ಗುರುತನ್ನು ಸಾಬೀತುಪಡಿಸುವ ದನ್ನು ಕಡ್ಡಾಯ ಗೊಳಿಸುವದ ಅವಶ್ಯಕ.ಈ ಚುನಾವಣೆಯಲ್ಲಿ ಮತ ಚಲಾಯಿಸುವ ಅನೇಕರು ತಮ್ಮ ಮತದಾರರ ಗುರುತಿನ ಚೀಟಿಗಳ ಭೌತಿಕ ಪ್ರತಿಗಳನ್ನು ಹೊಂದಿಲ್ಲದಿರಬಹುದು. ಮಾನ್ಯ ID ಪುರಾವೆಗಳಾಗಿ ಕಾರ್ಯನಿರ್ವಹಿಸುವ ಕೆಲವು ಪರ್ಯಾಯ ದಾಖಲೆಗಳು ಇಲ್ಲಿವೆ. ಮತದಾರರ ಗುರುತಿನ ಚೀಟಿ ಅಥವಾ EPIC ಅನ್ನು ಹೊಂದಿಲ್ಲದಿದ್ದರೆ, ನಿಮ್ಮ ಮತವನ್ನು ಚಲಾಯಿಸಲು ಕೆಳಗಿನ 12 ನಿರ್ದಿಷ್ಟಪಡಿಸಿದ ಫೋಟೋ ಗುರುತಿನ ದಾಖಲೆಗಳಲ್ಲಿ ಒಂದು ಅಗತ್ಯವಿದೆ.

ಗುರುತಿನ ಪುರಾವೆಗಳ ಪಟ್ಟಿ;

1) ಪಾಸ್ಪೋರ್ಟ್, 2) ಚಾಲನಾ ಪರವಾನಗಿ, 3) ಕೇಂದ್ರ/ರಾಜ್ಯ ಸರ್ಕಾರದ ಹಾಗೂ ಅರೆ ಸರ್ಕಾರಿ ಮತ್ತು ಸಾರ್ವಜನಿಕ ಸ್ವಾಮ್ಯದ ಪಿಎಸ್ಯು/ಪಬ್ಲಿಕ್ ಲಿಮಿಟೆಡ್ ಕಂಪನಿಗಳು ತಮ್ಮ ಸಿಬ್ಬಂದಿಗೆ ನೀಡಿರುವ ಫೋಟೋ ಗುರುತಿನ ಚೀಟಿ, 4) ಬ್ಯಾಂಕ್ / ಪೋಸ್ಟ್ ಆಫೀಸ್ ಫೋಟೋವುಳ್ಳ ಪಾಸ್ ಬುಕ್, 5) PAN ಹೊಂದಿರುವ ಕಾರ್ಡ್, 6) ಎನ್ಪಿಆರ್ ಅಡಿ ಅರ್ಜಿ ನೀಡಿರುವ ಸ್ಮಾರ್ಟ್ ಕಾರ್ಡ್, 7) ಎಂನರೇಗಾ ಜಾಬ್ ಕಾರ್ಡ್, 8) ಕಾರ್ಮಿಕರ ಸಚಿವಾಲಯದ ಯೋಜನೆಯಡಿ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, 9) ಫೋಟೋವುಳ್ಳ ಪಿಂಚಣಿ ದಾಖಲೆ, 10) ಚುನಾವಣಾ ಆಯೋಗದ ವತಿಯಿಂದ ನೀಡುವ ದೃಢೀಕೃತ ಫೋಟೋ ವೋಟರ್ ಸ್ಲಿಪ್ಸ್, 11) ಸಂಸದರು,ವಿಧಾನಸಭಾ,ವಿಧಾನ ಪರಿಷತ್ತಿನ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ, 12) ಆಧಾರ್ ಕಾರ್ಡ್ ಇವುಗಳ ಯಾವುದಾದರೂ ಗುರುತಿನ ಚೀಟಿ ಬಳಸಿ ಮತದಾನ ಮಾಡಬಹುದು.ಭಾವಚಿತ್ರ ಹೊಂದಿರುವ ಈ ಎಪಿಕ್ ಕಾರ್ಡ್ನಲ್ಲಿ ದೋಷಗಳಿದ್ದರೆ, ಇಲ್ಲವೆ ಎಪಿಕ್ ಕಾರ್ಡ್ ಅನ್ನು ತರದಿದ್ದ ಸಂದರ್ಭದಲ್ಲಿ ಭಾರತ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು.

ಮತದಾನದ ದಿನದಂದು ಮತ ಚಲಾಯಿಸಲು ಮತಗಟ್ಟೆ ಪ್ರವೇಶಿಸುವ ಮತದಾರರು ಮತಗಟ್ಟೆ ಅಧಿಕಾರಿಗೆ ತಮ್ಮ ಗುರುತನ್ನು ಖಾತ್ರಿ ಪಡಿಸಲು ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್) ಯನ್ನು ತೋರಿಸಬೇಕು.ಭಾವಚಿತ್ರ ಹೊಂದಿರುವ ಈ ಎಪಿಕ್ ಕಾರ್ಡ್ನಲ್ಲಿ ದೋಷಗಳಿದ್ದರೆ, ಇಲ್ಲವೆ ಎಪಿಕ್ ಕಾರ್ಡ್ ಅನ್ನು ತರದಿದ್ದ ಸಂದರ್ಭದಲ್ಲಿ ಭಾರತ ಆಯೋಗ ಪರಿಗಣಿಸಿರುವ 12 ದಾಖಲೆಗಳ ಪೈಕಿ ಒಂದನ್ನು ತೋರಿಸಿ ಮತದಾನ ಮಾಡಬಹುದು.

Exit mobile version