Revenue Facts

ಮನೆಯಲ್ಲಿ ಲಿಫ್ಟ್‌ ಅನ್ನು ಇಡುವುದಾದರೆ ಯಾವ ದಿಕ್ಕಿನಲ್ಲಿ ಅಳವಡಿಸಬೇಕು..?

ಮನೆಯಲ್ಲಿ ಲಿಫ್ಟ್‌ ಅನ್ನು ಇಡುವುದಾದರೆ ಯಾವ ದಿಕ್ಕಿನಲ್ಲಿ ಅಳವಡಿಸಬೇಕು..?

ಬೆಂಗಳೂರು, ಫೆ. 28 : ಮನೆಗೆ ಲಿಫ್ಟ್‌ ಎಂದರೆ, ಆ ಮನೆ ಕಡಿಮೆ ಎಂದರೂ, ಮೂರು-ನಾಲ್ಕು ಫ್ಲೋರ್‌ ಇರಬೇಕು. ಹೀಗಿರುವಾಗ ಸ್ಟೇರ್‌ ಕೇಸ್‌ ಮತ್ತು ಲಿಫ್ಟ್‌ ಎರಡನ್ನೂ ಮನೆಯಲ್ಲಿ ಅಳವಡಿಸಬೇಕಾಗುತ್ತದೆ. ಹೀಗೆ ಮಹಡಿ ಹಾಗೂ ಲಿಫ್ಟ್‌ ಅನ್ನು ಹಾಕಲು ಸ್ಥಳಾವಕಾಶ ಹೆಚ್ಚಾಗಿ ಇರಬೇಕಿರುತ್ತದೆ. ಇನ್ನು ಸ್ಟೇರ್‌ ಕೇಸ್‌ ಅನ್ನು ವಾಯುವ್ಯ ಅಥವಾ ನೈರುತ್ಯದ ಡೈಯಗ್ನಲ್‌ ದಕ್ಷಿಣ ಇಲ್ಲ ಪಶ್ಚಿಮದ ಕಡೆಗೆ ಸ್ಟೇರ್‌ ಕೇಸ್‌ ಅನ್ನು ಅಳವಡಿಸಬೇಕಾಗುತ್ತದೆ. ಪೂರ್ವ, ಉತ್ತರ, ಈಶಾನ್ಯ ಹಾಗೂ ಬ್ರಹ್ಮಸ್ಥಾನದ ಕಡೆಗೆ ಸ್ಟೇರ್‌ ಕೇಸ್‌ ಅನ್ನು ಹಾಕಲಾಗುವುದಿಲ್ಲ. ಲಿಫ್ಟ್‌ ಅನ್ನು ಆಗ್ನೇಯ ಹಾಗೂ ವಾಯುವ್ಯದ ದಿಕ್ಕಿನಲ್ಲಿ ಅಳವಡಿಸಬಹುದು.

ಇನ್ನು ಸ್ಟೇರ್‌ ಕೇಸ್‌ ಹಾಗೂ ಲಿಫ್ಟ್‌ ಅನ್ನು ಒಂದೇ ಕಡೆ ನಿರ್ಮಿಸುವುದಾದರೆ, ಆಗ್ನೇಯ ಹಾಗೂ ವಾಯುವ್ಯ ದಿಕ್ಕಿನಲ್ಲಿ ನಿರ್ಮಾಣ ಮಾಡಬಹುದು. ಆದರೆ, ಎರಡನ್ನೂ ಬೇರೆ ಬೇರೆಯಾಗಿ ಅಳವಡಿಸುವುದಾದರೆ, ಆಗ್ನೇಯದಲ್ಲಿ ಒಂದು ವಾಯುವ್ಯದಲ್ಲಿ ಒಂದನ್ನು ಅಳವಡಿಸಬಹುದು. ಇಲ್ಲವೇ ಸ್ಟೇರ್‌ ಕೇಸ್‌ ಅನ್ನು ನೈರುತ್ಯದಲ್ಲೂ ಹಾಕಬಹುದು. ಆದರೆ, ಲಿಫ್ಟ್‌ ಅನ್ನು ಮಾತ್ಯ ವಾಯುವ್ಯ ಇಲ್ಲವೇ ಆಗ್ನೇಯದಲ್ಲಿ ನಿರ್ಮಿಸಬೇಕು.

ಹೀಗೆ ಬೇರೆ ಬೇರೆ ಕಡೆ ಅಳವಡಿಸುವುದರಿಂದ ಮನೆಯಲ್ಲಿ ಸ್ಥಳ ಹೆಚ್ಚು ಬೇಕಾಗುತ್ತದೆ. ಇನ್ನು ನಿಮ್ಮ ಮನೆಯನ್ನು ನಿರ್ಮಾಣ ಮಾಡುವಾಗಲೇ ಲಿಫ್ಟ್‌ ಅನ್ನು ಕೂಡ ಪ್ಲಾನ್‌ ಮಾಡಿ ಕಟ್ಟುವುದು ಉತ್ತಮ. ಇನ್ನು ಕೆಲವರು ಎಲ್ಲೆಂದರಲ್ಲಿ ಲಿಫ್ಟ್‌ ಅನ್ನು ನಿರ್ಮಾಣ ಮಾಡುವುದು ತಪ್ಪು. ಲಿಫ್ಟ್‌ ಅನ್ನು ನಿರ್ಮಾಣ ಮಾಡಬೇಕಾದರೆ, ದಿಕ್ಕು ಸರಿಯಾದ ಕಡೆಗೆ ಹಾಕಬೇಕು. ಎಲ್ಲೆಂದರಲ್ಲಿ ಹಾಕಿದರೆ ದಿಕ್ಕಿನ ಪ್ರಭಾವ ತಪ್ಪುತ್ತದೆ. ಆಗ ಮನೆಯ ಮಂದಿಗೆ ತೊಂದರೆ ಆಗುತ್ತದೆ.

ಇನ್ನು ಅಪಾರ್ಟ್‌ ಮೆಂಟ್‌ ಗಳಲ್ಲಿ ಹೆಚ್ಚಾಗಿ ಲಿಫ್ಟ್‌ ಮತ್ತು ಸ್ಟೇರ್‌ ಕೇಸ್‌ ಗಳನ್ನು ಬ್ರಹ್ಮಸ್ಥಾನದಲ್ಲಿ, ಪೂರ್ವದಲ್ಲಿ ಹಾಕಲಾಗುತ್ತದೆ. ಇಲ್ಲಿ ಸಮಸ್ಯೆಗಳು ಹೆಚ್ಚಿರುತ್ತವೆ. ಹಾಗಾಗಿ ವಾಯುವ್ಯ, ನೈರುತ್ಯ, ಆಗ್ನೇಯ ದಿಕ್ಕಿನಲ್ಲಿ ಲಿಫ್ಟ್‌ ಹಾಗೂ ಸ್ಟೇರ್‌ ಕೇಸ್‌ ಗಳು ಇರುವಂತಹ ಅಪಾರ್ಟ್‌ ಮೆಂಟ್‌ ಗಳನ್ನೇ ಆಯ್ಕೆ ಮಾಡುವುದು ಸೂಕ್ತ. ವಿರುದ್ಧ ದಿಕ್ಕಿನಲ್ಲಿ ಮೆಟ್ಟಿಲುಗಳು, ಲಿಫ್ಟ್‌ ಇದ್ದರೆ, ಮನೆಯ ಯಜಮಾನನಿಗೆ ಸಮನಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಲಿಫ್ಟ್‌ ನಿರ್ಮಾಣ ಮಾಡುವಾಗಲೂ ವಾಸ್ತು ಶಾಸ್ತ್ರವನ್ನು ನೋಡಬೇಕಾಗುತ್ತದೆ.

Exit mobile version