Revenue Facts

ಮನೆ ಕಟ್ಟುವಾಗ ಸೆಟ್‌ಬ್ಯಾಕ್ ಬಿಡಿ, ಜಾಗ ವೇಸ್ಟ್ ಎಂದು ಹೇಳಬೇಡಿ…

ಎಲ್ಲಿಯಾದರೂ ಸರಿ ಜಾಗ ಖರೀದಿ ಮಾಡಬೇಕು, ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಹೀಗೆ ರೂಪಾಯಿಗೆ ರೂಪಾಯಿ ಕೂಡಿಟ್ಟು ಜಾಗ ಖರೀದಿಸುವವರು ಎಲ್ಲೆಡೆಯೂ ಕಾಣ ಸಿಗುತ್ತಾರೆ. ಅವರು ಖರೀದಿಸಿದಿ ಪ್ರತಿ ಇಂಚು ಭೂಮಿ ಸಹ ಅವರ ಬೆವರಿನ ಶ್ರಮ ಆಗಿರುತ್ತದೆ. ಹೀಗೆ ಮನೆ ಕಟ್ಟುವಾಗ ಸುತ್ತಮುತ್ತಲೂ ಸಹ ಒಂದು ಚೂರು ಸಹ ಜಾಗ ಬಿಡದೆ ಮನೆ ಕಟ್ಟಿ ಅದರ ಸದುಪಯೋಗ ಎಂದು ತಿಳಿಯುತ್ತಾರೆ. ಮನೆ ಸುತ್ತಲೂ ಸೆಟ್‌ಬ್ಯಾಕ್ ಅಥವಾ ಪ್ಯಾಸೇಜ್ ಬಿಡಿ ಎಂದರೆ ಅದು ಜಾಗ ವೇಸ್ಟ್ ಎಂದು ಅನೇಕರು ಭಾವಿಸುತ್ತಾರೆ. ಆದರೆ, ಮನೆಯ ಸುತ್ತಲೂ ಸೆಟ್‌ಬ್ಯಾಕ್ ಬಿಡುವುದರಿಂದ ಮನೆಗೆ ಕೆಲವು ಉಪಯೋಗಗಳೂ ಇವೆ. ಅವುಗಳನ್ನು ತಿಳಿದುಕೊಂಡರೆ ಮನೆ ಕಟ್ಟಲು ಮುಂದಾಗಿರುವವರಿಗೆ ಉಪಯುಕ್ತ ಆಗುತ್ತದೆ.

ಮನೆ ಕಟ್ಟಬೇಕಾದರೆ ಸಾಮಾನ್ಯವಾಗಿ ಚೌಕಾಕಾರದ ನಿವೇಶನಗಳು, ಆಯತಾಕಾರದ ನಿವೇಶನಗಳು ಮತ್ತು ವೃತ್ತಾಕಾರದ ನಿವೇಶನಗಳು ಅತೀ ಯೋಗ್ಯವಾದ ನಿವೇಶನಗಳು ಎಂದು ವೇದಿಕ ವಾಸ್ತು ಸೂಚಿಸುತ್ತದೆ.

ಮನೆಯನ್ನು ಯಾವುದೇ ನಿವೇಶನದಲ್ಲಿ ಕಟ್ಟುವಾಗ ಪ್ರತಿ ನಿವೇಶನಕ್ಕೂ ವಾಸ್ತು ಪುರುಷ ಎಂಬ ಮೈಥಾಲಜಿ ನಂಬಿಕೆ ಪ್ರತಿಯೊಬ್ಬರಲ್ಲೂ ಇರುತ್ತದೆ. ವಾಸ್ತು ಪುರುಷನ ಅಂಗಾಗಗಳು ನಿವೇಶನದ ಯಾವ ಭಾಗದಲ್ಲಿದೆ ಎಂಬ ಬಗ್ಗೆ ಅನೇಕ ಪುರಾತನ ಗ್ರಂಥಗಳು ಉಲ್ಲೇಖ ನೀಡುತ್ತವೆ.

ಅದೇ ಪ್ರಕಾರವಾಗಿ ನಿವೇಶನದ ದೈವ ಮೂಲೆ ಈಶಾನ್ಯದಲ್ಲಿ, ವಾಸ್ತು ಪುರುಷನ ತಲೆ ಆಗ್ನೇಯದಲ್ಲಿ, ವಾಸ್ತು ಪುರುಷನ ಬಲತೋಳು, ಪೃಷ್ಟಭಾಗ ನೈರುತ್ಯದಲ್ಲಿ ಮತ್ತು ಎಡತೋಳ ವಾಯುವ್ಯ ಭಾಗ ಇರುತ್ತದೆ. ಕೇಂದ್ರ ಭಾಗದಲ್ಲಿ ಹೊಕ್ಕಳು ಅಥವಾ ನಾಭಿ ಸ್ಥಾನ ಇರುತ್ತದೆ ಎಂದು ಉಲ್ಲೇಖವಿದೆ.

ನಿವೇಶನವನ್ನು ನಾಲ್ಕು ಭಾಗಗಳಾಗಿ ಮಾಡಿದಾಗ ಪೂರ್ವ, ದಕ್ಷಿಣ, ಪಶ್ಚಿಮ ಮತ್ತು ಉತ್ತರ ಎಂಬ ನಾಲ್ಕು ದಿಕ್ಕುಗಳು ಸೃಷ್ಟಿಯಾಗುತ್ತವೆ. ಡಯಾಗನಲ್ ಆಗಿ ಮೂಲೆಗಳಿಗೆ ಗೆರೆಯನ್ನು ಎಳೆದಾಗ ಆಗ್ನೇಯ, ನೈರುತ್ಯ, ವಾಯುವ್ಯ ಮತ್ತು ಈಶಾನ್ಯ ಎಂಬ ದಿಕ್ಕುಗಳು ಉತ್ಪತ್ತಿಯಾಗುತ್ತವೆ. ಈ ಎಲ್ಲಾ ಲೈನ್‌ಗಳು ಸೇರುವ ಜಾಗವೇ ಬ್ರಹ್ಮಸ್ಥಾನ. ನಾಭಿ ಅಥವಾ ಹೊಕ್ಕಳು ಎಂದೂ ಕರೆಯುತ್ತಾರೆ.

ಈ ಗೆರೆಗಳು ಪ್ರಾರಂಭ ಮತ್ತು ಕೊನೆ ಮತ್ತು ನಾಭಿ ಸ್ಥಾನ ಇವುಗಳನ್ನು ಮರ್ಮ ಸ್ಥಾನ ಎಂದು ಕರೆಯುತ್ತಾರೆ. ವಿಶೇಷವಾಗಿ ನಾಭಿ ಮತ್ತು ಅಕ್ಕಪಕ್ಕ ಹಿಂದೆ ಮುಂದೆ ಕನಿಷ್ಠ 9 ಚೌಕಗಳನ್ನು ಅತಿ ಮರ್ಮಸ್ಥಾನ ಎಂದು ಕರೆಯುತ್ತಾರೆ.

ಈ ಮರ್ಮಸ್ಥಾನ ಮತ್ತು ಅತಿಮರ್ಮಸ್ಥಾನ ಬಿಂದುಗಳಲ್ಲಿ ಪಿಲ್ಲರ್‌, ಕಬ್ಬಿಣ ಚುಚ್ಚುವುದು, ಬೋರ್‌ವೆಲ್‌ಗಳನ್ನು ಕೊರೆದರೆ ಈ ರೀತಿಯ ಕಾರ್ಯಗಳನ್ನು ಆ ಮನೆಯಲ್ಲಿ ಬಾಧೆಗೆ ಒಳಪಟ್ಟು, ಆರೋಗ್ಯ ಇನ್ನಿತರ ಸಮಸ್ಯೆಗಳು ಉತ್ಪತ್ತಿಯಾಗುತ್ತವೆ.

ವಾಸ್ತು ಪುರುಷ ಮಂಡಲವನ್ನು ಮೂಲತಃ ಕೇಂದ್ರದಿಂದ ನಿವೇಶನದ ಅಂಚಿನೆಡೆಗೆ ನಾಲ್ಕು ಸಮಭಾಗಳನ್ನಾಗಿ ಮಾಡಿದರೆ ಕೇಂದ್ರ ಚೌಕವನ್ನು ಬ್ರಹ್ಮಸ್ಥಾನವೆಂತಲೂ ಅದರ ನಂತರದ ಚೌಕವನ್ನು ದೈವಸ್ಥಾನವೆಂತಲೂ, ಅದರ ನಂತರದ ಚೌಕವನ್ನು ಮನುಷ್ಯ ಸ್ಥಾನವೆಂತಲೂ ಅದರ ನಂತರದ ಚೌಕವನ್ನು ಪೈಶಾಚ ಚೌಕ ಎಂದು ಕರೆಯುತ್ತಾರೆ.

ಇವುಗಳಲ್ಲಿ ಬ್ರಹ್ಮಸ್ಥಾನವು ಅತೀ ಸೂಕ್ಷ್ಮ ಪ್ರದೇಶವಾಗಿದೆ. ನಂತರ ದೈವಸ್ಥಾನವು ಸಾತ್ವಿಕ ಗುಣವನ್ನು ಹೊಂದಿದ್ದು, ಈ ಜಾಗದಲ್ಲಿ ಎನ್‌ಲೈಟನ್‌ಮೆಂಟ್, ಎವಲ್ಯೂಷನ್, ಬೆಳವಣಿಗೆ ಸರಿ ಇರುತ್ತದೆ.

ಮನುಷ್ಯ ಸ್ಥಾನದಲ್ಲಿ ರಾಜಸಿಕ ಗುಣವನ್ನು ಹೊಂದಿದ್ದುಅಲ್ಲಿ ಜಾಗೃತ, ಕ್ರಿಯೆ ಮತ್ತು ಬದಲಾವಣೆ ಇರುತ್ತದೆ. ಇನ್ನು ಪೈಶಾಚ ಸ್ಥಾನದಲ್ಲಿ ತಾಮಸಿಕ ಅಥವಾ ರಾಕ್ಷಸ ಪ್ರವೇತ್ತಿ ಇರುಇತ್ತದೆ.

ಮೇಲಿನ ವಾಸ್ತು ಸೂತ್ರಗಳ ಅನ್ವಯ, ಬ್ರಹ್ಮ, ದೈವ ಮತ್ತು ಮನುಷ್ಯ ಸ್ಥಾನಗಳು ಮಾನವನ ವಾಸಕ್ಕೆ ಯೋಗ್ಯವಾಗಿದ್ದು, ಶಾಂತಿ ಸಹಬಾಳ್ವೆ ಮತ್ತು ನೆಮ್ಮದಿ ಉಂಟಾಗುತ್ತದೆ. ಆದರೆ, ಕೊನೆಯ ಪೈಶಾಚ ಸ್ಥಾನದಲ್ಲಿ ತಾಮಸಿಕ ಗುಣವು ಅಧಿಕವಾಗಿದ್ದು ರಾಕ್ಷಸ ಪ್ರವೃತ್ತಿ ಕೆಟ್ಟ ವಾತಾವರಣ ಇರುತ್ತದೆ.

ಈ ಎಲ್ಲಾ ಕಾರಣಗಳಿಂದ ಮನೆಯ ಸುತ್ತ ಕಾಲಿ ಬಿಟ್ಟರೆ ಆ ಮನೆಯಲ್ಲಿ ವಾಸ ಮಾಡುವ ವ್ಯಕ್ತಿಗಳು ಸಂತೋಷವಾಗಿ ಏಳಿಗೆ ಹೊಂದುತ್ತಾರೆ ಎಂದು ವಾಸ್ತುವಿನಲ್ಲಿ ಸೂಚಿಸಲಾಗಿದೆ.

Exit mobile version