Revenue Facts

Legal notice: ಲೀಗಲ್ ನೋಟಿಸ್ ಬಗ್ಗೆ ಈ ಮಾಹಿತಿ ಗೊತ್ತಿರಲಿ!

Legal notice: ಲೀಗಲ್ ನೋಟಿಸ್ ಬಗ್ಗೆ ಈ ಮಾಹಿತಿ ಗೊತ್ತಿರಲಿ!

how to send legal notice

#Legal notice #Law #Legal notice

ಬೆಂಗಳೂರು: ಲೀಗಲ್ ನೋಟಿಸ್ ಎಂಬುದು ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ವಿಚಾರ. ಲೀಗಲ್ ನೋಟಿಸ್‌ ಎಂದ ಕೂಡಲೇ ಅನೇಕರು ಈಗಲೂ ಭಯ ಬೀಳುವ ಸ್ಥಿತಿಯಿದೆ. ಯಾವುದೇ ಒಂದು ವಿವಾದ ಏರ್ಪಟ್ಟಾಗ ಅದನ್ನು ಇತ್ಯರ್ಥಗೊಳಿಸುವ ಸಂಬಂಧ ಲೀಗಲ್ ನೋಟಿಸ್‌ ಮೂಲಕವೇ ವ್ಯವಹಾರ ಆರಂಭಿಸುತ್ತೇವೆ. ಲೀಗಲ್ ನೋಟಿಸ್‌ ಎಂದರೆ ಏನು ? ಅದು ಹೇಗಿರಬೇಕು? ಲೀಗಲ್ ನೋಟಿಸ್‌ ನಲ್ಲಿರುವ ಅಂಶಗಳನ್ನು ನ್ಯಾಯಾಲಯ ಯಾವ ರೀತಿ ಗಣನೆಗೆ ತೆಗೆದುಕೊಳ್ಳುತ್ತದೆ ಎಂಬ ಮಾಹಿತಿ ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಲೀಗಲ್ ನೋಟಿಸ್ ಕುರಿತ ಸಮಗ್ರ ಮಾಹಿತಿ ಇಲ್ಲಿದೆ ನೋಡಿ!

ಲೀಗಲ್ ನೋಟಿಸ್ ಎಂಬುದು ಒಂದು ವಿಷಯದ ಬಗ್ಗೆ ಮತ್ತೊಬ್ಬರಿಗೆ ಲಿಖಿತವಾಗಿ ತಿಳಿಸುವ ಒಂದು ಸಂಪರ್ಕ ಸಾಧನ. ಇದು ಇದೇ ಫಾರ್ಮೆಟ್‌ ನಲ್ಲಿರಬೇಕು ಎಂಬ ನಿಯಮವಿಲ್ಲ. ಆದರೆ ಒಂದಷ್ಟು ಅವಶ್ಯಕ ಅಂಶಗಳು ಕಡ್ಡಾಯವಾಗಿ ಲೀಗಲ್ ನೋಟಿಸ್ ನಲ್ಲಿರಬೇಕು. ಯಾಕೆಂದರೆ ಯಾವುದೇ ಒಂದು ವಿವಾದ, ಸಮಸ್ಯೆ ಬಗೆ ಹರಿಸಿಕೊಳ್ಳುವಾಗ ಒಬ್ಬ ವ್ಯಕ್ತಿ ಮತ್ತೊಬ್ಬ ವ್ಯಕ್ತಿಗೆ ಕೊಡುವ ಲೀಗಲ್ ನೋಟಿಸ್, ಅದರಲ್ಲಿನ ಅಂಶಗಳನ್ನು ನ್ಯಾಯಾಲಯವು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂಬುದನ್ನು ಮೊದಲು ಯಾರೂ ಮರೆಯಬಾರದು. ಹಿಗಾಗಿ ಲೀಗಲ್ ನೋಟಿಸ್ ನನ್ನು ಸತ್ಯಾಂಶಗಳ ಅಧಾರದ ಮೇಲೆ ತಯಾರಿಸಬೇಕು.

what is legal notice ?

Legal notice meaning:

ಲೀಗಲ್ ನೋಟಿಸ್ ಎಂಬುದು ಔಪಚಾರಿಕವಾಗಿ ಲಿಖಿತವಾಗಿ ಕೊಡುವ ಸಂದೇಶ ಪತ್ರ. ಇಲ್ಲಿ ಇಬ್ಬರು ವ್ಯಕ್ತಿಗಳು ಇರುವುದು ಮುಖ್ಯ. ಲೀಗಲ್ ನೋಟಿಸ್ ಕೊಡುವರು. ಮತ್ತು ಅದನ್ನು ಸ್ವೀಕರಿಸುವರು. ಲೀಗಲ್ ನೋಟಿಸ್ ಕೊಡುವವರು ತನ್ನ ಉದ್ದೇಶ, ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಎದುರು ಪಾರ್ಟಿಗೆ ತಿಳಿಸುವ ಒಂದು ಪ್ರಕ್ರಿಯೆ. ಅಂದರೆ ಮುಂದಿನ ಕಾನೂನು ಕ್ರಮದ ಪ್ರಕ್ರಿಯೆ ಬಗ್ಗೆ ಎಚ್ಚರಿಕೆ ನೀಡುವ ಒಂದು ಪತ್ರ ಅಂತ ಕರೆಯಲೂಬಹುದು.

ಯಾವುದೇ ಒಂದು ಒಪ್ಪಂದ ಉಲ್ಲಂಘನೆ ಮಾಡಿದ್ದರೆ, ಅಥವಾ ಷರತ್ತುಗಳನ್ನು ಈಡೇರಿಸುವಲ್ಲಿ ವಿಫಲನಾಗಿದ್ದಲ್ಲಿ ಅಂತಹ ವ್ಯಕ್ತಿಗೆ ಲೀಗಲ್ ನೋಟಿಸ್ ಎಚ್ಚರಿಕೆಯ ಸಂದೇಶವಾಗಿದ್ದು, ನೀನು ನ್ಯಾಯಾಲಯದ ಪ್ರಕ್ರಿಯೆಗೆ ಒಳಗಾಗಬಾರದು ಎಂದರೆ ಈ ಬೇಡಿಕೆಗಳನ್ನು ಕಾಲಮಿತಿಯಲ್ಲಿ ಈಡೇರಿಸಬೇಕು ಎಂದು ಎಚ್ಚರಿಕೆ ನೀಡಲಾಗುತ್ತದೆ.

ಲೀಗಲ್ ನೋಟಿಸ್ ಕೊಡುವ ಸಂದರ್ಭಗಳು:

1. ಗ್ರಾಹಕ ಸಂಬಂಧಿ ವಿಚಾರದಲ್ಲಿ ಖರೀದಿಸಿದ ವಸ್ತು ಅಥವಾ ಸೇವೆ ಸರಿಯಾಗಿ ಕೆಲಸ ಮಾಡದಿದ್ದರೆ, ಅದನ್ನು ಮಾರಾಟ ಮಾಡಿದ ವ್ಯಕ್ತಿಗೆ ಲೀಗಲ್ ನೋಟಿಸ್ ನೀಡಿ ಇದನ್ನು ಸರಿ ಪಡಿಸುವಂತೆ ಸೂಚಿಸಬಹದು.

2. ಆಸ್ತಿ ಸಂಬಂಧಿತ ವಿವಾದಗಳಲ್ಲಿ ( ಇಬ್ಬಾಗ, ಭೂ ತೆರವು, ಭೂ ಸ್ವಾಧೀನ) ವಿಷಯದಲ್ಲಿಲೀಗಲ್ ನೋಟಿಸ್ ನೀಡಬಹುದು.

3. ಬ್ಯಾಂಕ್ ಅಥವಾ ಇನ್ನಿತರೆ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲಗಳನ್ನು ಮರು ಪಾವತಿ ಮಾಡದಿದ್ದರೆ, ಸಾಲ ವಸೂಲಿಗಾಗಿ ಅಥವಾ ಅಡಮಾನ ವಸ್ತುಗಳ ಹರಾಜು ಸಂಬಂಧ ಸರ್ಫೇಸಿ ಅಕ್ಟ್‌ 2002 ( ಸೆಕ್ಯುರಿಟೈಸೇಷನ್ ಅಂಡ್‌ ರೀ ಕನ್‌ಸ್ಟ್ರಕ್ಷನ್ ಆಫ್ ಫೈನಾನ್ಸಿಯಲ್ ಅಸೆಟ್ಸ್ ಅಂಡ್‌ ಎನ್‌ಫೊರ್ಸ್‌ಮೆಂಟ್‌ ಆಫ್‌ ಸೆಕ್ಯುರಿಟೀಸ್ ಇಂಟ್ರೆಸ್ಟ್‌ ಆಕ್ಟ್‌ ) ಅಡಿಯಲ್ಲಿ ಸಾಲದಾತ ಸಾಲಗಾರನಿಗೆ ಲೀಗಲ್ ನೋಟಿಸ್ ನೀಡಬಹುದು.

4. ಸಾಲ ಪಡೆದು ಪಾವತಿ ಮಾಡದ ಸಂದರ್ಭದಲ್ಲಿ ಸಾಲ ವಸೂಲಾತಿಗಾಗಿ ನೆಗೋಷಬಲ್ ಇನ್‌ಸ್ಟ್ರೂಮೆಂಟ್‌ ಅಕ್ಟ್‌ ಅಡಿಯಲ್ಲಿ ಚೆಕ್‌ ಬೌನ್ಸ್‌ ಪ್ರಕರಣಗಳಲ್ಲಿ ಲೀಗಲ್ ನೋಟಿಸ್‌ ಕೊಡಬಹುದು.

5. ಹಣಕಾಸಿನ ವ್ಯವಹಾರದಲ್ಲಿ ಹಣ ಪಡೆದವರು ಕಾಲದಲ್ಲಿ ನೀಡದೇ ಮೋಸ ಮಾಡಿದಲ್ಲಿ ಅಂತಹವರಿಗೆ ಲೀಗಲ್ ನೋಟಿಸ್ ಕೊಡಬಹುದು.

6. ಉದ್ಯೋಗಿ, ಕಾರ್ಖಾನೆ, ಉದ್ಯೋಗದಾತ ವಿಚಾರದಲ್ಲಿ ಮಾಡಿದ ಕೆಲಸಕ್ಕೆ ವೇತನ ನೀಡದಿದ್ದರೆ, ಅಥವಾ ಕೆಲಸಗಾರ ಯಾವುದೇ ಮಾಹಿತಿ ನೀಡದೇ ಉದ್ಯೋಗದ ಷರತ್ತು ಉಲ್ಲಂಘಿಸಿ ಕೆಲಸ ತ್ಯಜಿಸಿದರೆ ಇಂತಹ ಷರತ್ತು ಉಲ್ಲಂಘನೆ ಸಂದರ್ಭದಲ್ಲಿ ಕೆಲಸಗಾರ ಮಾಲೀಕನಿಗೆ, ಅಥವಾ ಮಾಲೀಕ ಕೆಲಸಗಾರನಿಗೆ ನೋಟಿಸ್ ನೋಡಬಹುದು.

ಲೀಗಲ್ ನೋಟಿಸ್ ಬಂತು ಎಂದರೆ ಒಂದು ವಿವಾದ ಮನೆ ಬಾಗಲಿಗೆ ತಲುಪಿದೆ ಎಂದು ಭಾವಿಸಬೇಕು. ಬಹುಮುಖ್ಯವಾಗಿ ಲೀಗಲ್ ನೋಟಿಸ್ ಸ್ವೀಕರಿಸಿದ ಬಳಿಕ, ರಾಜಿ, ಸಂಧಾನ ಮೂಲಕ ವಿವಾದ ಇತ್ಯರ್ಥ ಪಡಿಸಿಕೊಳ್ಳಲು ಅವಕಾಶವಿದೆ.

important things about Legal notice

ಪ್ರೀ ಲೀಗಲ್ ನೋಟಿಸ್ :

ಲೀಗಲ್ ನೋಟಿಸ್ ನಲ್ಲಿ ಎರಡು ವಿಧವಿದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ದಾವೆ ಸಲ್ಲಿಸುವ ಮುನ್ನ ನೀಡುವ ನೋಟಿಸ್ ಅದು ಫ್ರೀ ಲೀಗಲ್ ನೋಟಿಸ್ ಆಗಿರುತ್ತದೆ. ಒಂದು ವಿವಾದ ಕುರಿತು ಎಚ್ಚರಿಕೆ ನೀಡುವುದಾಗಿರುತ್ತದೆ. ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಗೆ ನೀಡುವಂತದ್ದು.

ವಿಷಯ ಆಧಾರಿತ ಲೀಗಲ್ ನೋಟಿಸ್ : ಒಬ್ಬರಿಗಿಂತಲೂ ಹೆಚ್ಚು ಮಂದಿ ಅವರೇ ಸ್ವಂತವಾಗಿ ಅಥವಾ ಒಬ್ಬ ವಕೀಲರಿಂದ ತಯಾರಿಸಿ ಕೊಡುವುದು ಕಂಟೆಂಟ್‌ ಲೀಗಲ್ ನೋಟಿಸ್‌ ಎಂದು ಕರೆಯುತ್ತೇವೆ. ಇದರಲ್ಲಿ ಕೆಲವು ಅಂಶಗಳನ್ನು ಕಡ್ಡಾಯವಾಗಿ ಉಲ್ಲೇಖಿಸಿರಬೇಕು.

ಲೀಗಲ್ ನೋಟಿಸ್ ಟೈಟಲ್ :

ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದಂತೆ ಲೀಗಲ್ ನೋಟಿಸ್ ಕೊಡುವಾಗ ಅದಕ್ಕೆ ಟೈಟಲ್ ಇರಬೇಕು. ಅದು ಚಿಕ್ಕದಾಗಿ ಅರ್ಥವಾಗುವಂತಿರಬೇಕು. ಮತ್ತು ಯಾರಿಗೆ ಲೀಗಲ್ ನೋಟಿಸ್‌ ಕೊಡುತ್ತಿದ್ದೇವೆ ಅವರ ಹೆಸರು, ವಿಳಾಸವನ್ನು ಸರಿಯಾಗಿ ನಮೂದಿಸಿರಬೇಕು. ಸರಿಯಾದ ವ್ಯಕ್ತಿಗೆ ಲೀಗಲ್ ನೋಟಿಸ್ ನೀಡಬೇಕು. ಯಾರದ್ದೋ ಬದಲಿಗೆ ಇನ್ಯಾರಿಗೋ ಲೀಗಲ್ ನೋಟಿಸ್ ಕೊಡಬಾರದು. ಉದಾಹರಣೆಗೆ ” ಪುಸ್ತಕ ಖರೀದಿ ಬಾಕಿ ಮೊತ್ತ ವಸೂಲಿಗೆ ನೋಟಿಸ್‌” ಎಂದು ಶಿರೋನಾಮೆ ( ಹೆಡ್‌ಲೈನ್ ) ಒಳಗೊಂಡಿರಬೇಕು.

ವಿಷಯ ಪ್ರಸ್ತಾಪ:
ಇನ್ನು ಲೀಗಲ್ ನೋಟಿಸ್ ನಲ್ಲಿ ವಿಷಯವನ್ನು ಸಮಗ್ರವಾಗಿ ವಿವರಿಸಿರಬೇಕು. ಹಣಕಾಸಿನ ವಿಚಾರವಾಗಿದ್ದರೆ, ಯಾವುದರ ಬಗ್ಗೆ ವ್ಯವಹಾರ ಯಾವ ದಿನಾಂಕ ನಡೆಸಲಾಗಿತ್ತು. ಅದಕ್ಕೆ ಸಮ್ಮತಿ ಸೇರಿದಂತೆ ವಿಷಯವನ್ನು ಸಂಕ್ಷಿಪ್ತವಾಗಿ ವಿವರಿಸಿರಬೇಕು. ಸಂಬಂಧವಿಲ್ಲದ ಅನಾವಶ್ಯಕ ವಿಚಾರ ಇರಬಾರದು.

ನೋಟಿಸ್ ಕೊಡುವನ ಬೇಡಿಕೆ: ಇನ್ನು ನೋಟಿಸ್ ಕೊಟ್ಟ ವ್ಯಕ್ತಿ, ಏನಾಗಬೇಕು ಎಂಬುದನ್ನು ಕೊನೆಯಲ್ಲಿ ಉಲ್ಲೇಖಿಸಿರಬೇಕು. ಸಾಲ ವಸೂಲಿ ಅಗಿದ್ದರೆ, ಎಷ್ಟು ಮೊತ್ತ, ಬಡ್ಡಿ ಸೇರಿಸಿ ಯಾವ ದಿನಾಂಕದೊಳಗೆ ಪಾವತಿ ಮಾಡಬೇಕು ಎಂಬುದನ್ನು ಸ್ಪಷ್ಟವಾಗಿ ನೋಟಿಸ್ ನಲ್ಲಿ ಉಲ್ಲೇಖಿಸಿರಬೇಕು.

ಫಲಿತಾಂಶ:

ಒಂದು ವೇಳೆ ನೋಟಿಸ್ ನೀಡಿಯೂ ವಿವಾದ ಬಗೆ ಹರಿಸದಿದ್ದಲ್ಲಿ ಮುಂದಿನ ಕಾನೂನು ಪ್ರಕ್ರಿಯೆ ಕುರಿತು ಎಚ್ಚರಿಕೆಯನ್ನು ನೀಡಿರಬೇಕು. ನಿಗದಿತ ಕಾಲ ಮಿತಿಯಲ್ಲಿ ಸಮಸ್ಯೆ ಬಗೆ ಹರಿಸಿಕೊಳ್ಳಲು ಸೂಚಿಸಿರಬೇಕು. ಒಂದು ವೇಳೆ ನೋಟಿಸ್ ಗೆ ಎದುರುದಾರ ಉತ್ತರಿಸಿದಿದ್ದರೆ ನೋಟಿಸ್‌ ಆಧರಿಸಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿ ಪರಿಹಾರ ಕೇಳಬಹುದು.

ಸಿವಿಲ್ ಪ್ರೊಸೀಜರ್ ಕೋಡ್‌ ( CPC-1908 ) sec 80 ಪ್ರಕಾರ ಲೀಗಲ್ ನೋಟಿಸ್ :

ಸಿವಿಲ್ ದಾವೆಗಳಲ್ಲಿ ಲೀಗಲ್ ನೋಟಿಸ್ ನೀಡಲಾಗುತ್ತದೆ. ಕ್ರಿಮಿನಲ್ ದಾವೆಗಳಲ್ಲಿ ಸರ್ಕಾರ ತಪ್ಪಿತಸ್ಥರ ವಿರುದ್ಧ ನೋಟಿಸ್ ನೀಡುತ್ತದೆ. ಒಂದು ವೇಳೆ ಸರ್ಕಾರ ಅಥವಾ ಸಾರ್ವಜನಿಕ ವ್ಯಕ್ತಿ ವಿರುದ್ಧದ ದಾವೆಗಳಲ್ಲಿ ಕಡ್ಡಾಯವಾಗಿ ಈ ಸೆಕ್ಷನ್ ಅಡಿ ಲೀಗಲ್ ನೋಟಿಸ್ ನೀಡಲೇಬೇಕು.

ನೋಟಿಸ್ ಯಾರು ಕೊಡಬೇಕು ?

ನೋಟಿಸ್ ಏನು ಒಳಗೊಂಡಿರಬೇಕು?

ಸಿವಿಲ್ ಪ್ರೊಸೀಜರ್ ಕೋಡ್‌ ಸೆಕ್ಷನ್ 80 ಪ್ರಕಾರ ಕೇಂದ್ರ ಸರ್ಕಾರಿ ಅಥವಾ ರಾಜ್ಯ ಸರ್ಕಾರಿ ನೌಕರನ ವಿರುದ್ಧದ ಕೇಸುಗಳಲ್ಲಿ ಸರ್ಕಾರದ ಕಾರ್ಯದರ್ಶಿ ಅಥವಾ ಜಿಲ್ಲಾಧಿಕಾರಿಗಳಿಗೆ ನೋಟಿಸ್ ರವಾನೆ ಮಾಡಲಾಗುತ್ತದೆ. ಇನ್ನು ಸರ್ಕಾರಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತಿದ್ದರೆ ಅವರ ಕಚೇರಿ ವಿಳಾಸಕ್ಕೆ ನೋಟಿಸ್ ರವಾನಿಸಬೇಕು.

ಕಾನೂನು ಸಮರ ಸಾರುವಂತಹ ದಾವೆಗಳಿಗೆ ಸಂಬಂಧಿಸಿದಂತೆ ನೋಟಿಸ್ ನೀಡುವಾಗ, cpc sec 80 ಪ್ರಕಾರ ನೋಟಿಸ್‌ ನಲ್ಲಿರಬೇಕಾದ ಕಡ್ಡಾಯ ಅಂಶಗಳ ಬಗ್ಗೆ ಹೇಳಲಾಗಿದೆ. ನೋಟಿಸ್ ನೀಡುತ್ತಿರುವ ವ್ಯಕ್ತಿಯ ಹೆಸರು, ವಿಳಾಸ, ಯಾವ ಕಾರಣಕ್ಕೆ ನೋಟಿಸ್ ನೀಡಲಾಗುತ್ತಿದೆ. ದೂರುದಾರ/ದಾವೆದಾರ ಕೋರುತ್ತಿರುವ ಪರಿಹಾರ ಅಂಶಗಳನ್ನು ಒಳಗೊಂಡಿರಲೇಬೇಕು.

what is legal notice ?
ಯಾರು ನೋಟಿಸ್ ಕೊಡಬಹುದು ?

ಯಾವುದೇ ವ್ಯಕ್ತಿ ನೋಟಿಸ್ ನೀಡಬಹುದು. ಅಥವಾ ವ್ಯಕ್ತಿ ನೇಮಿಸಿಕೊಂಡ ವಕೀಲರಿಂದ ನೋಟಿಸ್ ನೀಡಬಹುದು. ವಕೀಲರ ಮೂಲಕ ಕೊಡುವುದಿದ್ದರೆ ಅದನ್ನು ಅವರ ಲೆಟರ್ ಹೆಡ್ ನಲ್ಲಿಯೇ ಕೊಡಬೇಕು. ಲೀಗಲ್ ನೋಟಿಸ್ ವಿಷಯದ ವಾಸ್ತವಾಂಶಗಳನ್ನು ಒಳಗೊಂಡಿರಬೇಕು. ಲೀಗಲ್ ನೋಟಿಸ್ ಸ್ವೀಕೃತಿಯನ್ನು ನೋಟಿಸ್ ಜತೆಗೆ ಕಳುಹಿಸಿರಬೇಕು. ಭವಿಷ್ಯದಲ್ಲಿ ಈ ವಿಚಾರದಲ್ಲಿ ದಾವೆ ಸಲ್ಲಿಸಿದರೆ, ನೋಟಿಸ್ ಸ್ವೀಕೃತಿಯ ಸತ್ಯತೆಯನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ನೆರವಾಗುತ್ತದೆ.

ಈ ಅಂಶಗಳು ತುಂಬಾ ಮಹತ್ವ :

ಲೀಗಲ್ ನೋಟಿಸ್ ತಯಾರಿಸಿದ ಬಳಿಕ ಅದನ್ನು ರಿಜಿಸ್ಟ್ರ್ ಪೋಸ್ಟ್‌ ಅಥವಾ ಕೊರಿಯರ್ ಮೂಲಕ ಐದರಿಂದ ಏಳು ದಿನದೊಳಗೆ ಕಳುಹಿಸಬೇಕು. ದೇಶದ ಯಾವುದೇ ಅಂಗೀಕೃತ ಭಾಷೆಯಲ್ಲಿ ನೋಟಿಸ್ ನೀಡಬಹುದು. ಸಾಮಾನ್ಯವಾಗಿ ಇಂಗ್ಲೀಷ್ ಭಾಷೆಯನ್ನು ಬಳಸಲಾಗುತ್ತದೆ. ಲೀಗಲ್ ನೋಟಿಸ್ ಜತೆಗೆ ಯಾವುದೇ ದಾಖಲೆಗಳನ್ನು ಕಳುಹಿಸುವಂತಿಲ್ಲ.

ಇನ್ನು ನೋಟಿಸ್ ಪಡೆದ ವ್ಯಕ್ತಿ ಅದಕ್ಕೆ ಪ್ರತ್ಯುತ್ತರ ನೀಡಲೇಬೇಕು ಎಂದೇನಿಲ್ಲ. ನೀಡಬಹುದು. ಇಲ್ಲವೇ ನಿರಾಕರಿಸಬಹುದು. ಆದರೆ ವಕೀಲರ ಸಲಹೆ ಪಡೆದು ಅವರ ಸಲಹೆ ಮೇರೆಗೆ ಕಾನೂನಾತ್ಮಕ ಅಂಶಗಳನ್ನು ಪರಿಶೀಲಿಸಿ ಲೀಗಲ್ ನೋಟಿಸ್ ಗೆ ಪ್ರತ್ಯುತ್ತರ ಕೊಡಬಹುದು.

ಲೀಗಲ್ ನೋಟಿಸ್ ನ್ನು ವಾಟ್ಸಪ್ , ಟೆಲಿಗ್ರಾಮ್ ಅಥವಾ ಇ ಮೇಲ್, ಫ್ಯಾಕ್ಸ್ ಮೂಲಕ ಕಳುಹಿಸಿದರೆ ಅದಕ್ಕೆ ಮಾನ್ಯತೆ ಇದೆಯೇ ? ಸುಪ್ರೀಂಕೋರ್ಟ್‌ ಸಾಮಾಜಿಕ ಮಾಧ್ಯಮಗಳ ಮೂಲಕ ರವಾನಿಸುವ ನೋಟಿಸ್ ಗಳನ್ನು ಮಾನ್ಯ ಮಾಡಿದೆ. ಎಸ್‌ಬಿಐ ಕಾರ್ಡ್‌ ಮತ್ತು ರೋಹಿತ್ ಜಾದವ್ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ ಈ ಕುರಿತ ತೀರ್ಪು ಕೊಟ್ಟಿದೆ.

Exit mobile version