Revenue Facts

ಜೂನ್ 11 ರಂದು ಶಕ್ತಿ ಯೋಜನೆಗೆ ಚಾಲನೆ : ಮಹಿಳೆಯರು ಒದಗಿಸಬೇಕಾದ ದಾಖಲೆಗಳ ವಿವರ ಇಲ್ಲಿವೆ ನೋಡಿ.

ಬೆಂಗಳೂರು: ಮಹಿಳೆಯರಿಗಾಗಿ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಅವಕಾಶ ನೀಡುವ ಶಕ್ತಿ ಯೋಜನೆ (Shakti Scheme) ಜೂನ್ 11ರಂದು ಚಾಲನೆ ನೀಡಲಾಗುತ್ತದೆ. ಆದರೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ದಾಖಲಯೊಂದನ್ನು ತೋರಿಸಬೇಕು. ಹಾಗಿದ್ದರೆ, ಯೋಜನೆಯ ಮುಖ್ಯ ಅಂಶಗಳೇನು? ಮಹಿಳೆಯರು ತೋರಿಸಬೇಕಾದ ದಾಖಲೆಗಳು ಏನೇನು? ಮಾಹಿತಿ ಇಲ್ಲಿದೆ.

ಉಚಿತ ಬಸ್ ಯೋಜನೆಯ ಮುಖ್ಯ ಅಂಶಗಳು
1. ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ) ಮಾತ್ ಉಚಿತ ಪಯಾಣ ಸೌಲಭ್ಯ ಅನ್ವಯ. ಮಹಿಳಾ ಪ್ರಯಾಣಿಕರ ಪೈಕಿ 5 ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಸಹ ಒಳಗೊಂಡಿರುತ್ತಾರೆ.
2. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಗರ ಸಾರಿಗೆ ಅಥವಾ ಸಾಮಾನ್ಯ ಮತ್ತು ವೇಗದೂತ (ತಡೆರಹಿತ ಸಾರಿಗೆಗಳು ಒಳಗೊಂಡಂತೆ) ಸಾರಿಗೆಗಳಲ್ಲಿ ಮಾತ್ರ ಮಹಿಳೆಯರು (ವಿದ್ಯಾರ್ಥಿನಿಯರು ಸೇರಿದಂತೆ) ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
3. ಐಷಾರಾಮಿ ಬಸ್‌ಗಳಾದ ರಾಜಹಂಸ, ನಾನ್ ಎಸಿ ಸ್ಲೀಫರ್, ಎಸಿ ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ್ ಫ್ಲೈ ಬಸ್, ಇವಿ ಪ್ಲಸ್ ಸಾರಿಗೆಗಳಲ್ಲಿ ಉಚಿತ ಪಯಾಣ ಸೌಲಭ್ಯವು ಅನ್ವಯಿಸುವುದಿಲ್ಲ.
4. ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರದ ಯಾವುದೇ ಮಿತಿ ಇರುವುದಿಲ್ಲ. ಆದರೆ ಪ್ರಯಾಣ ಸೌಲಭ್ಯವು ರಾಜ್ಯದ ಒಳಗೆ ಮಾತ್ರ ಅನ್ವಯವಾಗುತ್ತದೆ.
5. ಅನುಬಂಧ-1 ಮತ್ತು ಅನುಬಂಧ-2ರಲ್ಲಿ ನಮೂದಿಸಿರುವ ಕೆಲವು ಆಯ್ಕೆ ಅಂತರ ರಾಜ್ಯ ಸಾರಿಗೆಗಳನ್ನು ಹೊರತುಪಡಿಸಿ ಉಳಿದ ಅಂತರರಾಜ್ಯ ಸಾರಿಗೆಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದು
6. ಶಕ್ತಿ ಯೋಜನೆಯು ದೈನಿಕ ಪಾಸು ಮಾಸಿಕ ಪಾಸು, ಸಾಂದರ್ಭಿಕ ಒಪ್ಪಂದ ಹಾಗೂ ಖಾಯಂಗುತ್ತಿಗೆ ಪುಯಾಣಿಸಲು ಅವಕಾಶವಿರುವುದಿಲ್ಲ, ಪ್ಯಾಕೇಜ್ ಮುಂತಾದ ಸೇವೆಗಳಿಗೆ ಅನ್ವಯಿಸುವುದಿಲ್ಲ.
ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸುವ ಮಹಿಳೆಯರು ಕರ್ನಾಟಕ ರಾಜ್ಯದ ನಿವಾಸಿಗಳೆಂಬ ಪುರಾವೆಗಾಗಿ ಕೆಲವೊಂದು ದಾಖಲಾತಿಗಳನ್ನು ತೋರಿಸಬೇಕು. ಈ ಕೆಳಕಂಡ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ ಅಥವಾ ಡಿಜಿಲಾಕಲ್‌’ ಮುಖಾಂತರ ಹಾಜರುಪಡಿಸಬೇಕಾಗಿರುತ್ತದೆ. ಈ ಗುರುತಿನ ಚೀಟಿಗಳಲ್ಲಿ ಫೋಟೋ ಮತ್ತು ಕರ್ನಾಟಕ ರಾಜ್ಯದ ವಾಸ ಸ್ಥಳ ನಮೂದಿಸಿರುವುದು ಕಡ್ಡಾಯವಾಗಿರುತ್ತದೆ.
• ಚುನಾವಣಾ ಆಯೋಗ ವಿತರಿಸಿರುವ ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ (Driving licence).
• ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು ಅಥವಾ ಭಾರತ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮ ಸಂಖ್ಯೆಗಳು (PSU’s) ವಿತರಿಸಿರುವ ಗುರುತಿನ ಚೀಟಿ.
• ವಾಸಸ್ಥಳ ನಮೂದಿಸಿರುವಂತಹ ಕರ್ನಾಟಕ ಸರ್ಕಾರದ ಇಲಾಖೆಗಳು
ಸರ್ಕಾರದ ಸಾರ್ವಜನಿಕ ವಲಯದ ಉದ್ಯಮ/ಸಂಸ್ಥೆಗಳು ವಿತರಿಸಿರುವ ಗುರುತಿನ ಚೀಟಿ ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ, ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಪಡೆದು ಶಕ್ತಿ ಸ್ಮಾರ್ಟ್ ಕಾರ್ಡ್ ಗಳನ್ನು ವಿತರಿಸುವವರೆಗೆ ಮೇಲೆ ತಿಳಿಸಿರುವ ಗುರುತಿನ ಚೀಟಿಗಳನ್ನು ಪರಿಗಣಿಸಿ ‘ಶೂನ್ಯ’ ಮೊತ್ತದ ಮಹಿಳೆಯರ ಉಚಿತ ಟಿಕೇಟ್‌ಗಳನ್ನು ವಿತರಿಸಲಾಗುವುದು.

Exit mobile version