Revenue Facts

ಅಪಾರ್ಟ್ ಮೆಂಟ್ ಮಾಲೀಕರಿಗೆ ಸಿಹಿ ಸುದ್ದಿ ಕೊಟ್ಟ ಕರ್ನಾಟಕ ರೇರಾ

ಬೆಂಗಳೂರು, ಆ. 08 : ಈಗ ಮನೆ ಕಟ್ಟುವುದು ಮೊದಲಿನಷ್ಟು ಕಷ್ಟವೇನಲ್ಲ. ಬೀದಿಗೊಬ್ಬರು ಬಿಲ್ಡರ್ ಗಳು ಇದ್ದೇ ಇರುತ್ತಾರೆ. ಅವರಿಗೆ ತಮ್ಮ ಜಾಗವನ್ನು ಬಿಟ್ಟು ಕೊಟ್ಟರೆ ಸಾಕು. ಮನೆಯನ್ನು ನಿರ್ಮಾಣ ಮಾಡಿಕೊಡುತ್ತಾರೆ. ಅದರಲ್ಲೂ ಈಗ ಎಲ್ಲರೂ ಬಿಲ್ಡರ್ ಗಳಿಗೆ ನೀಡಿ, ಸ್ವಂತ ಮನೆಯ ಜೊತೆಗೆ ಬಾಡಿಗೆ ಮನೆಯನ್ನು ನಿರ್ಮಾಣ ಮಾಡಿಕೊಡುವಂತೆ ಒಪ್ಪಂದ ಮಾಡಿಕೊಳ್ಳುತ್ತಾರೆ. ಬಿಲ್ಡರ್ ಗಳು ಒಂದು ಬಿಲ್ಡಿಂಗ್ ನಲ್ಲಿ 8 ಮನೆಯನ್ನು ನಿರ್ಮಿಸಿದರೆ, ನಾಲ್ಕನ್ನು ತಾವಿಟ್ಟುಕೊಂಡು, ಉಳಿದ ನಾಲ್ಕು ಮನೆಗಳನ್ನು ಭೂ ಮಾಲೀಕರಿಗೆ ಹಸ್ತಾಂತರಿಸುತ್ತಾರೆ.

ಆದರೆ, ಬಿಲ್ಡರ್ ಗಳು ಆ ಬಿಲ್ಡಿಂಗ್ ನ ಕಾಮನ್ ಏರಿಯಾವನ್ನು ಯಾವಾಗಲೂ ತಮ್ಮ ಸುಪರ್ಧಿಯಲ್ಲೊಇ ಇಟ್ಟುಕೊಂಡಿರುತ್ತಾರೆ. ಇದರಿಂದ ಅಲ್ಲಿ ಫ್ಲಾಟ್ ಖರೀದಿಸಿ ಮಾಲೀಕರಿಗೆ ಸಮಸ್ಯೆಗಳು ಎದುರಾಗುತ್ತಿದ್ದವು. ಆದರೆ, ಈ ಬಗ್ಗೆ ಈಗ ಕರ್ನಾಟಕ ರೇರಾ ತೀರ್ಪನ್ನು ನೀಡಿದ್ದು ಇದು ಮಾಲೀಕರಿಗೆ ಸಂತಸವನ್ನು ತಂದಿದೆ. ಈ ಬಗ್ಗೆ ಇತ್ತೀಚೆಗಷ್ಟೇ ವಿಚಾರಣೆ ನಡೆಸಿದ ಕೆರೇರಾ, ಮಾಲೀಕರಿಗೆ ಕಾಮನ್ ಏರಿಯಾದ ಹಕ್ಕನ್ನು ಬಿಲ್ಡರ್ ಗಳೂ ಬಿಟ್ಟು ಕೊಡಬೇಕು ಎಂದು ತೀರ್ಪು ನೀಡಿದೆ.

ಇಷ್ಟು ವರ್ಷಗಳ ಕಾಲ ಕೆರಾರಾದಲ್ಲಿ ಕಾಮನ್ ಏರಿಯಾದ ಸಂಪೂರ್ಣ ಹಕ್ಕನ್ನು ಬಿಲ್ಡರ್ ಗಳು ತಮಗೆ ಉಳಿಸಿಕೊಳ್ಳುತ್ತಿದ್ದರು. ಇದರಿಂದ ಮಾಲೀಕರು ಸಮಸ್ಯೆ ಅನ್ನು ಎದುರಿಸಬೇಕಾಗುತ್ತಿತ್ತು. ಆದರೆ, ಈಗ ಈ ತೀರ್ಪು ಬಂದಿದ್ದು, ಮಾಲೀಕರು ನಿರಾಳರಾಗಿದ್ದಾರೆ. ಇನ್ನು ಈ ಹಿಂದೆಯೇ ಮಹಾರಾಷ್ಟ್ರದಲ್ಲಿ ಈ ಬಿಲ್ಡರ್ ಗಳಿಂದ ಮಾಲೀಕರಿಗೆ ಹಕ್ಕನ್ನು ವರ್ಗಾಯಿಸುತ್ತಿದ್ದರು. ಅಲ್ಲಿ ಕೆರೇರಾದಂತೆ ಸಮಸ್ಯೆ ಆಗಲಿಲ್ಲ. ಇನ್ನು ಇದೇ ರೀತಿ ತಮಿಳು ನಾಡಿನಲ್ಲೂ ಕೋರ್ಟ್ ತೀರ್ಪು ನೀಡಿತ್ತು.

ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘವನ್ನು ರಚಿಸುವ ಮೂಲಕ, ಸಂಘವು RERA 2016 ರ ಸೆಕ್ಷನ್ 17 ರ ಪ್ರಕಾರ ಸಾಮಾನ್ಯ ಪ್ರದೇಶಗಳ ಶೀರ್ಷಿಕೆಯನ್ನು ತಿಳಿಸುವ ಕಾರ್ಪೊರೇಟ್ ಸಂಸ್ಥೆಯಾಗುತ್ತದೆ. ಸೇವಾ ಪೂರೈಕೆದಾರರೊಂದಿಗೆ ಒಪ್ಪಂದಗಳಿಗೆ ಸಹಿ ಮಾಡಲು ಕಾನೂನು ಸಂಯೋಜನೆಯ ಸ್ಥಿತಿಯನ್ನು ಸಹ ಪಡೆಯುತ್ತದೆ. ಮಾಲೀಕರ ಸಂಘವನ್ನು ಪ್ರತಿನಿಧಿಸುವ ದೇಹ ಕಾರ್ಪೊರೇಟ್ ಸೊಸೈಟಿಯನ್ನು ಹೊಂದಿರುವುದರಿಂದ ಅನೇಕ ಅನುಕೂಲಗಳಿವೆ.

Exit mobile version