Revenue Facts

ಅತ್ತ ಆ ಕಾವೇರಿಗಾಗಿ ಹೋರಾಟ ಇತ್ತ ಇ ಕಾವೇರಿಗಾಗಿ ಪರದಾಟ

ಅತ್ತ  ಆ ಕಾವೇರಿಗಾಗಿ ಹೋರಾಟ  ಇತ್ತ ಇ ಕಾವೇರಿಗಾಗಿ ಪರದಾಟ

ಬೆಂಗಳೂರು, ಸೆ. 22 : ರಾಜ್ಯದಲ್ಲಿ ಕಾವೇರಿಯದ್ದೇ ದೊಡ್ಡ ಸಮಸ್ಯೆ ಉದ್ಭವಿಸಿದೆ.
ಬರದಲ್ಲೂ ಕಾವೇರಿ ನೀರು ತಮಿಳುನಾಡಿಗೆ ಹರಿಸುವ ಕಾವೇರಿ ಟ್ರಿಬ್ಯುನಲ್ ಆದೇಶ ಖಂಡಿಸಿ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು , ರೈತರು ಹೋರಾಟಕ್ಕೆ ಇಳಿದಿದ್ದಾರೆ‌. ಇತ್ತ ಸ್ತಿರಾಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳದಿಂದ ದಂಗಾಗಿರುವ ಜನ ತಮ್ಮ ಆಸ್ತಿ ನೋಂದಣಿಗೆ ಇ ಕಾವೇರಿ ಮೊರೆ ಹೋಗಿದ್ದಾರೆ. ಕಳೆದ ಮೂರು ದಿನದಿಂದ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಇ ಕಾವೇರಿ ಕ್ಣಣಕ್ಕೊಮ್ಮೆ ಕೈ ಕೊಡುತ್ತಿದೆ. ಸ್ಥಿರಾಸ್ತಿ ವಹಿವಾಟು ಮಾಡಲಾಗದೇ ಇ ಕಾವೇರಿಯನ್ನು ನೆನಪಿಸಿಕೊಂಡು ಸಾರ್ವಜನಿಕರು ಪರದಾಡುತ್ತಿದ್ದಾರೆ. ಒಟ್ಟಾರೆ ರಾಜ್ಯದಾದ್ಯಂತ ಕಾವೇರಿಯದ್ದೇ ಕಾವು ಹೆಚ್ಚಾಗಿದೆ.

ಕಾವೇರಿ ನೀರಿಗಾಗಿ ಹೋರಾಟ : ರಾಜ್ಯದಲ್ಲಿ ಮಳೆ ಇಲ್ಲದೇ ಬರದ ಛಾಯೆ ಆವರಿಸಿದೆ. ಬರಗಾಲ ಘೋಷಣೆಗೆ ಸರ್ಕಾರ ತಯಾರಿ ನಡೆಸಿದೆ. ಸಂಕಷ್ಟ ಸ್ಥಿತಿಯಲ್ಲೂ ತಮಿಳು ನಾಡಿಗೆ ದಿನಕ್ಕೆ ಐದು ಸಾವಿರ ಕ್ಯೂಸೆಕ್ ನೀರನ್ನು ಹರಿಸುವ ಕಾವೇರಿ ನ್ಯಾಯಾಧಿಕರಣದ ತೀರ್ಪಿನ ವಿರುದ್ಧ ಸರ್ಕಾರ ಸುಪ್ರೀಂ ಮೊರೆ ಹೋದರೂ ಪ್ರಯೋಜನವಾಗಲಿಲ್ಲ.ಕಾವೇರಿ ನೀರಿ ಹರಿಸುತ್ತಿರುವ ಸರ್ಕಾರದ ನಡೆಯನ್ನು ವಿರೋಧ ಪಕ್ಷಗಳು ದಾಳವಾಗಿ ಬಳಸುತ್ತಿವೆ. ರೈತರು, ಕನ್ನಡ ಪರ ಸಂಘಟನೆಗಳು ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ. ಮಂಡ್ಯ ಬಂದ್ ಗೆ ಸೀಮಿತವಾಗಿದ್ದ ಬಂದ್ ಇದೀಗ ಹೋರಾಟಕ್ಕೆ ನಾಂದಿ ಹಾಡಿದೆ.‌

 

ಇನ್ನೊಂದಡೆ ಕಳೆದ ಮೂರು ದಿನದಿಂದ ಕಾವೇರಿ 2 ತಂತ್ರಾಂಶ ಕೈ ಕೊಟ್ಟಿದೆ. ಸ್ಥಿರಾಸ್ತಿ ಮಾರ್ಗಸೂಚಿ ಬೆಲೆ ಹೆಚ್ಚಳ ಹಿನ್ನೆಲೆಯಲ್ಲಿ ಆಸ್ತಿಗಳ ನೋಂದಣಿಗೆ ಜನ ಮುಗಿ ಬಿದ್ದಿದ್ದಾರೆ. ಕಳೆದ ಮೂರು ದಿನದಿಂದ ಆಸ್ತಿಗಳ ನೋಂದಣಿ ಮಾಡಲಾಗದೇ ಜನರು ಪರದಾಡುತ್ತಿದ್ದಾರೆ‌. ಅತ್ತ ಕಾವೇರಿ ನದಿಯ ಕಾವು, ಇತ್ತ ಕಾವೇರಿ ತಂತ್ರಾಂಶ ನೋವು. ಒಟ್ಟಾರೆಯಾಗಿ ಕಾವೇರಿ ಗಾಗಿ ಕರ್ನಾಟಕದಲ್ಲಿ ಪರದಾಡುವಂತಾಗಿದೆ.

Exit mobile version