Revenue Facts

ಕಾವೇರಿ 2.0 ತಂತ್ರಾಂಶಕ್ಕೆ ಚಾಲನೆ ಕೊಟ್ಟ ಶಾಸಕ ಎ. ಮಂಜು

ಬೆಂಗಳೂರು, ಮೇ. 27 : ಆಸ್ತಿ ಮಾರಾಟ ಹಾಗೂ ಖರೀದಿ ಪ್ರಕ್ರಿಯೆಯ ಉಪನೋಂದಣಿ ಕಚೇರಿಗಳಲ್ಲಿ ಈಗ ಕಾವೇರಿ 2.0 ಆನ್ ಲೈನ್ ತಂತ್ರಾಂಶ ಬಂದಿದೆ. ಹಾಸನದ ಅರಕಲಗೂಡಿನಲ್ಲಿ ಕಾವೇರಿ 2.0 ಆನ್ ಲೈನ್ ತಂತ್ರಾಂಶಕ್ಕೆ ಶಾಸಕ ಎ. ಮಂಜು ಅವರು ಚಾಲನೆಯನ್ನು ನೀಡಿದರು. ಹೊಸ ತಂತ್ರಾಂಶಕ್ಕೆ ಚಾಲನೆ ಕೊಟ್ಟ ಬಳಿಕ ಮಾತನಾಡಿದ ಶಾಸಕರು, ಸರ್ಕಾರ ಜನರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾಗಿಯೇ ಈ ಆನ್ ಲೈನ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಸಾರ್ವಜನಿಕರು ನೋಂದಣಿ ಪ್ರಕ್ರಿಯೆಗಾಗಿ ಕಚೇರಿಗೆ ಅಲೆಯುವ ಗೋಜಿಲ್ಲ ಎಂದರು.

ಮಾತನ್ನು ಮುಂದುವರಿಸಿದ ಅವರು, ಕಾವೇರಿ 2.0 ಆನ್ ಲೈನ್ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿದರೆ ನಿಗದಿತ ದಿನಾಂಕ ಹಾಗೂ ಸಮಯಕ್ಕೆ ಕಚೇರಿಗೆ ಹೋದರೆ, ಸುಲಭವಾಗಿ ನೋಂದಣಿ ಮಾಡಿಸಬಹುದು. ಆಗ ನಿಮ್ಮ ನೋಂದಣಿ ಕಾರ್ಯವು ಶೀಘ್ರವಾಗಿ ಮುಗಿಯುತ್ತದೆ. ಜನರು ಕಾವೇರಿ 2.0 ಆನ್ ಲೈನ್ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳಬೇಕು. ತಂತ್ರಜ್ಞಾನ ಮುಂದುವರೆದಂತೆ ಜನರ ಕೆಲಸಗಳು ಕೂಡ ಸುಲಭವಾಗಿ ನಡೆಯುತ್ತದೆ. ಹೀಗಾಗಿಯೇ ಈ ವ್ಯವಸ್ಥೆ ಅನ್ನು ಜಾರಿಗೆ ತರಲಾಗಿದೆ ಎಂದರು.

ಕಾವೇರಿ 2.0 ಆನ್ ಲೈನ್ ತಂತ್ರಾಂಶದ ಚಾಲನೆ ಕಾರ್ಯಕ್ರಮದಲ್ಲಿ ಜಿಲ್ಲಾ ನೋಂದಾಣಿದಾಕಾರಿ ಶ್ರೀನಿಧಿ, ನೋಡಲ್ ಅಧಿಕಾರಿ ಹನುಮನಗೌಡ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ್, ಉಪ ನೋಂದಣಾಧಿಕಾರಿ ಇ. ರಾಕೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾವೇರಿ 2.0 ಆನ್ ಲೈನ್ ತಂತ್ರಾಂಶವಿಲ್ಲದೇ, ನೋಂದಣಿ ಕಚೇರಿಗಳಲ್ಲಿ ದಿನಗಟ್ಟಲೆ ಕಾಯಬೇಕಿತ್ತು. ಮಧ್ಯವರ್ತಿಗಳ ಹಾವಳಿ ಅಧಿಕವಾಗಿತ್ತು. ಆದರೆ, ಈಗ ಕಾವೇರಿ 2.0 ಆನ್ ಲೈನ್ ತಂತ್ರಾಂಶ ಬಂದಿದ್ದರಿಂದ ಸುಲಭವಾಗಿಯೂ, ಮೀಡಿಯೇಟರ್ ಗಳ ಸಮಸ್ಯೆಗಳು ಇಲ್ಲದೆಯೂ ನೋಂದಣಿ ಮಾಡಲಿಸಬಹುದಾಗಿದೆ.

Exit mobile version