Revenue Facts

ಕಾವೇರಿ 2 ತಂತ್ರಾಂಶ ನಿರ್ವಹಣೆ ಗುತ್ತಿಗೆಯಲ್ಲಿ 800 ಕೋಟಿ ರೂ. ಡೀಲ್ : ಮಾಜಿ ಕಂದಾಯ ಸಚಿವ ಆರ್. ಅಶೋಕ್ ವಿರುದ್ದ ಸಿಎಂ ಕಚೇರಿಗೆ ದೂರು

ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಸ್ತಿಗಳ ನೋಂದಣಿಗೆ ಪರಿಚಯಿಸಿರುವ ಕಾವೇರಿ 2.0 ತಂತ್ರಾಂಶ ಅಭಿವೃದ್ದಿ ಮತ್ತು ನಿರ್ವಹಣೆ ಮಾಡಲು ಖಾಸಗಿ ಕಂಪನಿಗೆ ನೀಡಿರುವ ಗುತ್ತಿಗೆಯಲ್ಲಿ 800 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿರುವ ಆರೋಪ ಕೇಳಿ ಬಂದಿದೆ‌.ಕಾವೇರಿ 2. 0. ತಂತ್ರಾಂಶ ನಿರ್ವಹಣೆ ಖಾಸಗಿ ಕಂಪನಿಗೆ ಗುತ್ತಿಗೆ ನೀಡಿದ್ದು, ಮಾಜಿ ಕಂದಾಯ ಸಚಿವ ಆರ್ ಅಶೋಕ್ ಅವರು 800 ಕೋಟಿ ರೂ. ಕಿಕ್ ಬ್ಯಾಕ್ ಪಡೆದಿದ್ದು, ಈ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆ ನಡೆಸುವಂತೆ ಜಾಗೃತ ಮ ತದಾರರ ವೇದಿಕೆ ಸರ್ಕಾರಕ್ಕೆ ದೂರು ಸಲ್ಲಿಸಿದೆ.
ಕಾವೇರಿ ೨ ತಂತ್ರಾಂಶ ನಿರ್ವಹಣೆಯಲ್ಲಿ ಭಾರೀ ಅಕ್ರಮ ಜರುಗಿದೆ. ಸರ್ಕಾರವೇ ಈ ತಂತ್ರಾಂಶ ಅಭಿವೃದ್ಧಿ ಪಡಿಸಿ ನಿರ್ವಹಣೆ ಮಾಡಲು ಅವಕಾಶ ಇತ್ತು. ಕಿಕ್ ಬ್ಯಾಕ್ ಪಡೆದು ಅನ್ಯ ಕಂಪನಿಗೆ ನೀಡಲಾಗಿದೆ. ಈ ಬಗ್ಗೆ ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಿದರೆ ಸತ್ಯಾಂಶ ಹೊರ ಬರುತ್ತದೆ ಎಂದು ವೇದಿಕೆ ಕಾರ್ಯದರ್ಶಿ ಶ್ರೀಧರ್ ಅವರು ಮುಖ್ಯಮಂತ್ರಿ ಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.ಕಾವೇರಿ ೨ ತಂತ್ರಾಂಶವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆ ಅಭಿವೃದ್ಧಿ ಪಡಿಸಿದ್ದು ನಿರ್ವಹಣೆಯನ್ನು ಸಿಎಂಎಸ್ ಇನೋ ಸಿಸ್ಟಮ್ ಅವರಿಗೆ ವಹಿಸಿದ್ದು, ಸುಮಾರು 2500 ಕೋಟಿ ರೂ. ಅಕ್ರಮ ನಡೆದಿದೆ ಎಂದು ಆರೋಪಿಸಿದ್ದಾರೆ.

ಈ ಹಿಂದೆ ರಾಜ್ಯದಲ್ಲಿ ಆಸ್ತಿಗಳ ನೋಂದಣಿಯನ್ನು ಕಾವೇರಿ 1 ತಂತ್ರಾಂಶದಲ್ಲಿ ಅಭಿವೃದ್ಧಿ ಪಡಿಸಲಾಗಿತ್ತು. ಬಿಜೆಪಿ ಸರ್ಕಾರ ಅವಧಿಯಲ್ಲಿ ಕಾವೇರಿ ೨ ತಂತ್ರಾಂಶ ಪರಿಚಯಿಸಲು ಅನುಮೋದನೆ ನೀಡಿತ್ತು. ನೋಂದಣಿ ಮತ್ತು ಮುದ್ರಾಂಕ ಇಲಾಖೆ ತರಾತುರಿಯಲ್ಲಿ ಕಾವೇರಿ ೨ ನ್ನು ರಾಜ್ಯದ ಎಲ್ಲಾ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಪರಿಚಯಿಸಿತ್ತು. ಇದೀಗ ಭಾರೀ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದ್ದು, ಸರ್ಕಾರ ಈ ಕುರಿತು ತನಿಖೆ ನಡೆಸಲಿದೆಯೇ ಎಂಬುದು ಕಾದು ನೋಡಬೇಕಿದೆ.

ಕಾವೇರಿ 1 ತಂತ್ರಾಂಶಕ್ಕೂ ಕಾವೇರಿ 2 ತಂತ್ರಾಂಶಕ್ಕೂ ಹೆಚ್ಚಿನ ಭಿನ್ನತೆ ಇಲ್ಲ. ಆಸ್ತಿಗಳ ದಾಖಲೆಗಳ ನೋಂದಣಿಗೆ ಸಾರ್ವಜನಿಕರೇ ಅಪ್ ಲೋಡ್ ಮಾಡಲು ಅವಕಾಶ ನೀಡಿದ್ದು, ನೋಂದಣಿ ಸಮಯ ನಿಗದಿ ಪಡಿಸಲಾಗುತ್ತಿದೆ. ಕಾವೇರಿ 2 ತಂತ್ರಾಂಶದಲ್ಲಿ ಇನ್ನೂ ಸಾಕಷ್ಟು ಲೋಪಗಳಿವೆ. ಕಾವೇರಿ 1 ತಂತ್ರಾಂಶದಲ್ಲಿ ನೋಂದಣಿ ಆಗದೇ ಇರುವ ದಾಖಲೆಗಳು ಕಾವೇರಿ 2 ಗೆ ಇಂಟಿಗ್ರೇಟೆಡ್‌ ಆಗದೇ ರಾಜ್ಯದಲ್ಲಿ ದೊಡ್ಡ ಸಮಸ್ಯೆ ತಲೆದೋರಿದೆ. ಸರ್ವರ್ ಸಮಸ್ಯೆ ಸೇರಿದಂತೆ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಂಡಿದ್ದು, ಉಪ ನೋಂದಣಾಧಿಕಾರಿಗಳು ನೋಂದಣಿ ಪ್ರಕ್ರಿಯೆ ಮುಗಿಸಲು ಪರದಾಡುವಂತಾಗಿದೆ.

Exit mobile version