Revenue Facts

Karnataka State Budget ;ನಾಳೆ 2023-24ನೇ ಸಾಲಿನ ಬಜೆಟ್​ ಮಂಡನೆ ಬಜೆಟ್ ಗಾತ್ರವೇನು?

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ (ಜುಲೈ 7) ಶುಕ್ರವಾರ 2023-24ನೇ ಸಾಲಿನ ಹಣಕಾಸು ವರ್ಷದ ಬಜೆಟ್‌ ಮಂಡಿಸಲಿದ್ದಾರೆ.ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಈ ಹಿಂದೆ 13 ಬಾರಿ ಬಜೆಟ್ ಮಂಡಿಸಿದ್ದು ಇದೀಗ 14ನೇ ಬಾರಿಗೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಿದ್ದಾರೆ.ಇತಿಹಾಸದಲ್ಲಿ ಅತೀ ಹೆಚ್ಚು ಬಾರಿ ಬಜೆಟ್ ಮಂಡಿಸಿದ ಕೀರ್ತಿಗೆ ಸಿದ್ದರಾಮಯ್ಯಪಾತ್ರರಾಗಲಿದ್ದಾರೆ.ಈ ಹಿಂದೆ ಬೊಮ್ಮಾಯಿ ಮಂಡಿಸಿದ್ದ ಬಜೆಟ್ ಗಾತ್ರ ಸುಮಾರು 2,51,541 ಕೋಟಿ ರೂಪಾಯಿಯಾಗಿತ್ತು. ಈ ಬಾರಿ 3.35 ಲಕ್ಷ ಕೋಟಿ ಬಜೆಟ್ ಗಾತ್ರವಾಗಿರಲಿದೆ ಎಂದು ತಿಳಿದುಬಂದಿದೆ.ಸಿದ್ದರಾಮಯ್ಯ ಬಜೆಟ್ ಮಂಡನೆ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.

ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈ ಬಾರಿ ಯಾವುದಕ್ಕೆ ತೆರಿಗೆ ವಿಧಿಸಲಿದೆ, ಯಾವುದಕ್ಕೆ ಎಷ್ಟು ವಿನಾಯ್ತಿ ನೀಡಲಿದೆ, ಯಾವ ಹೊಸ ಯೋಜನೆ ಜಾರಿಗೆ ತರಲಿದೆ,ಎಂಬುದು ಗೊತ್ತಾಗಲಿದೆ.ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ಪ್ರತಿ ವರ್ಷ 50 ಸಾವಿರ ಕೋಟಿ ರೂ.ಗಳ ಅಗತ್ಯತೆ ಇದೆ.ಗ್ಯಾರಂಟಿ ಯೋಜನೆಗೆ ಹಣಕಾಸಿನ ಕ್ರೋಡೀಕರಿಸುವ ಸವಾಲಿನ ಜೊತೆಗೆ ಆರ್ಥಿಕ ಶಿಸ್ತನ್ನೂ ಕಾಪಾಡಿಕೊಳ್ಳುವುದು ಸವಾಲಾಗಿದೆ. ಈ ಮಧ್ಯೆ ಕಾಂಗ್ರೆಸ್ ಸರ್ಕಾರ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಹೇಗೆ ಈಡೇರಿಸುತ್ತದೆ.ಗ್ಯಾರಂಟಿ ಯೋಜನೆಗಳ ಮಧ್ಯೆ ಅಭಿವೃದ್ಧಿ ಕಾರ್ಯಗಳಿಗೆ ಹೇಗೆ ಅನುದಾನ ನೀಡುತ್ತದೆ. ಎಂಬುದು ಕುತೂಹಲ ಕೆರಳಿಸಿದೆ.

Exit mobile version