Revenue Facts

ಕಾವೇರಿ ತಂತ್ರಾಂಶ ಕೈಕೊಟ್ಟಿದ್ದಕ್ಕೆ ನಾಲ್ಕನೇ ಶನಿವಾರ ರಜೆ ಸ್ಥಗಿತ ! ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜ್ವರ – ಬರೆ ಪಾಲಿಸಿ !

ಕಾವೇರಿ ತಂತ್ರಾಂಶ ಕೈಕೊಟ್ಟಿದ್ದಕ್ಕೆ  ನಾಲ್ಕನೇ  ಶನಿವಾರ ರಜೆ ಸ್ಥಗಿತ !  ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಜ್ವರ – ಬರೆ ಪಾಲಿಸಿ !

ಬೆಂಗಳೂರು, ಸೆ. 23: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ! ಹೌದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ಇಂತಹ ಧೋರಣೆ ಅನುಸರಿಸುತ್ತಿದ್ದಾರೆ. ಕಳೆದ ಮೂರು ದಿನಗಳಿಂದ ಕಾವೇರಿ ತಂತ್ರಾಂಶ ಕೈಕೊಟ್ಟು ರಾಜ್ಯದೆಲ್ಲೆಡೆ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ಸ್ಥಿರಾಸ್ತಿಗಳ ನೋಂದಣಿ ಮಾಡಲಾಗದೇ ಜನರು ಹೈರಾಣ ಆಗಿದ್ದಾರೆ. ನೋಂದಣಿಗೆ ಬಂದ ಜನರನ್ನು ನಿಭಾಯಿಸಲು ಸಾಧ್ಯವಾಗದೇ ಉಪ ನೋಂದಣಾಧಿಕಾರಿಗಳು ಅಮ್ರುತಾಂಜನ್ ಪಕ್ಕದಲ್ಲಿ ಇಟ್ಟುಕೊಂಡು ಕೆಲಸ ಮಾಡುವಂತಾಗಿದೆ. ಕಾವೇರಿ ತಂತ್ರಾಂಶ ಕೈಕೊಡದಂತೆ ಕಟ್ಟು ನಿಟ್ಟಿನ ಕ್ರಮ ಜರುಗಿಸದ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು 4 ನೇ ಶನಿವಾರ ರಜೆ ರದ್ದು ಮಾಡಿ ಸುತ್ತೋಲೆ ಹೊರಡಿಸಿದ್ದಾರೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಈ ಸುತ್ತೋಲೆ ಉಪ ನೋಂದಣಾಧಿಕಾರಿ ವಲಯಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಸಾವಿರಾರು ಕೋಟಿ ಸಕರ್ಾರದ ಹಣ ವೆಚ್ಚ ಮಾಡಿ ರೂಪಿಸಿರುವ ಕಾವೇರಿ ತಂತ್ರಾಂಶ ಕಳೆದ ಮೂರು ದಿನದಿಂದ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಆಸ್ತಿಗಳ ನೋಂದಣಿಗೆ ಬಂದ ಸಾವಿರಾರು ಮಂದಿ ಗಂಟೆಗಟ್ಟಲೇ ಕಾದು ವಾಪಸು ಹೋಗಿದ್ದಾರೆ. ಆಸ್ತಿ ನೋಂದಣಿ ದಾಖಲೆಗಳನ್ನು ಅಪ್ಲೋಡ್ ಮಾಡಲಾಗದೇ ಫಜೀತಿ ಅನುಭವಿಸಿದ್ದಾರೆ. ಕಾವೇರಿ ತಂತ್ರಾಂಶ ಸರಿಪಡಿಸುವ ಗೋಜಿಗೆ ಹೋಗದೇ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಆಯುಕ್ತರು ನಾಲ್ಕನೇ ಶನಿವಾರ ರಜೆ ರದ್ದುಗೊಳಿಸಿ ಸೆ. 23 ರಂದು ಆದೇಶ ಹೊರಡಿಸಲಾಗಿದೆ‌.

ಕಳೆದ ಮೂರು ದಿನಗಳಿಂದ ಕಾವೇರಿ ತಂತ್ರಾಂಶ ಕೈಕೊಟ್ಟು ರಾಜ್ಯದೆಲ್ಲೆಡೆ ಸ್ಥಿರಾಸ್ತಿಗಳ ನೋಂದಣಿ ಮಾಡಲಾಗದೇ ಹೈರಾಣ ಆಗಿರುವ ಉಪ ನೋಂದಣಾಧಿಕಾರಿಗಳು ಏಕಾಎಕಿ ಕೆಲಸಕ್ಕೆ ಬರುವಂತೆ ಸೂಚಿಸಲಾಗಿದೆ. ತಂತ್ರಾಂಶ ಲೋಪದಿಂದ ಆಗಿರುವ ಸಮಸ್ಯೆ ಪರಿಹರಿಸದೇ ಉಪ ನೋಂದಣಾಧಿಕಾರಿಗಳಿಗೆ ರಜೆ ಕಡಿತ ಮಾಡಿ ಕೆಲಸಕ್ಕೆ ಬರುವಂತೆ ಸೂಚಿಸಲಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ ?
ಇನ್ನು ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳ ಮಾಡಿದ್ದು, ಅ. 1 ರಿಂದ ಜಾರಿಗೆ ಬರಲಿದೆ. ಹೀಗಾಗಿ ಜನ ಆಸ್ತಿಗಳ ನೋಂದಣಿಗೆ ಮುಗಿ ಬೀಳುತ್ತಿದ್ದಾರೆ. ಇದೇ ನೆಪ ಇಟ್ಟು ರಜೆ ರದ್ದುಗೊಳಿಸಿದ್ದು ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಎಳೆದಂತಾಗಿದೆ.

Exit mobile version