Revenue Facts

ರೇರಾ ಕಚೇರಿಗೆ ಹೋಗಬೇಕಾದ್ರೆ ಬಟ್ಟೆ ಹೀಗಿರಬೇಕು: ಇಲ್ದಿದ್ರೆ ನೋ ಎಂಟ್ರಿ!

ಬೆಂಗಳೂರು, ಸೆ.12: ರಿಯಲ್ ಎಸ್ಟೇಟ್ ವಂಚನೆ, ಅಕ್ರಮ, ನಿಯಮ ಉಲ್ಲಂಘನೆ ಪ್ರಕರಣಗಳನ್ನು ವಿಚಾರಣೆ ನಡೆಸಿ ಸಾರ್ವಜನಿಕರಿಗೆ ನ್ಯಾಯದಾನ ಮಾಡುವ ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಸಾರ್ವಜನಿಕರ ಪ್ರವೇಶಕ್ಕೆ ವಸ್ತ್ರ ಸಂಹಿತೆ ರೂಪಿಸಿದೆ.

ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಒಂದು ಅರೆ ನ್ಯಾಯಿಕ ಸಂಸ್ಥೆಯಾಗಿ ಕಾಯ್ ನಿರ್ವಹಿಸುತ್ತದೆ. ಹೀಗಾಗಿ ಸಾರ್ವಜನಿಕರು ಇಲ್ಲಿ ದೂರು ನೀಡಲು, ಅಥವಾ ದೂರಿನ ವಿಚಾರಣೆ ಸಂದರ್ಭದಲ್ಲಿ ಪಾಲ್ಗೊಳ್ಳಕಾದರೆ, ಶಿಸ್ತು ಬದ್ಧವಾಗಿ ಬಟ್ಟೆ ಧರಿಸಿರಬೇಕು. ನ್ಯಾಯಾಲಯದಲ್ಲಿ ಪಾಲ್ಗೊಳ್ಳಲು ಹೋಗುವ ಮಾದರಿಯಲ್ಲಿಯೇ ರೇರಾ ವಿಚಾರಣೆ ಕಪಾಲದಲ್ಲೂ ಶಿಸ್ತುಬದ್ಧವಾಗಿ ಬಟ್ಟೆ ದರಿಸಿ ಪಾಲ್ಗೊಳ್ಳಬೇಕು. ಈ ಸಂಬಂಧ ವಕೀಲರು, ಪುರುಷರು, ಮಹಿಳೆಯರು ಯಾವ ರೀತಿಯ ಬಟ್ಟೆ ಧರಿಸಬೇಕು ಎಂಬುದರ ವಸ್ತ್ರ ಸಂಹಿತೆ ಕುರಿತು ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಅದೇಶ ಹೊರಡಿಸಿದೆ.

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು ಸಾರ್ವಜನಿಕರಿಗೆ ಕಾನೂನು ಬದ್ಧ ವೇದಿಕೆ ಒದಗಿಸಿಕೊಟ್ಟಿದ್ದು, ರಿಯಲ್ ಎಸ್ಟೇಟ್ ಉದ್ಯಮದಾರರಿಂದಮ ಸಾರ್ವಜನಿಕರಿಂದ, ಎಜೆಂಟರು ನೀಡುವ ದೂರುಗಳ್ನು ಸ್ವೀಕರಿಸಿ ವಿಚಾರಣೆ ನಡೆಸಿ ನ್ಯಾಯ ನೀಡುವ ಕಾರ್ಯ ಮಾಡುತ್ತಿದೆ. ರೆರಾ ಅಧ್ಯಕ್ಷರು, ಇಬ್ಬರು ಸದಸ್ಯರನ್ನು ಒಳಗೊಂಡ ಪೀಠದಲ್ಲಿ ಪ್ರತಿ ದಿನ ಪ್ರಕರಣಗಳ ವಿಚಾರಣೆ ನಡೆಯುತ್ತದೆ.

ಪ್ರಕರಣಗಳ ವಿಚಾರಣೆ ವೇಳೆ ನ್ಯಾಯಾಲಯದ ಕೊಠಡಿಯಲ್ಲಿ ಪಾಲ್ಗೊಳ್ಳುವ ಮುನ್ನ ಸಾರ್ವಜನಿಕರು ಹಾಗೂ ವಕೀಲರು ಈ ಕೆಳಗಿನ ವಸ್ತ್ರಗಳನ್ನು ಧರಿಸಬೇಕು ಎಂದು ರೆರಾ ತನ್ನ ಅದೇಶದಲ್ಲಿ ಸೂಚಿಸಿದೆ.

ವಕೀಲರು: ರೆರಾ ಪ್ರಾಧಿಕಾರದ ಮುಂದೆ ಹಾಜರಾಗುವ ವಕೀಲರು ನಿಯಮಿತ ಡ್ರೆಸ್ ಕೋಡ್ ಧರಿಸಿರಬೇಕು. ಪುರುಷರ ವಕಿಲರು, ಕಾಲರ್ ಇರುವ ಬಿಳಿ ಶರ್ಟ್, ಕಪ್ಪು ಉದ್ದನೆಯ ಪ್ಯಾಂಟ್, ಬಿಳಿ ನೆಕ್ ಬಾಂಡ್ ಧರಿಸತಕ್ಕದ್ದು. ಮಹಿಳಾ ವಕೀಲರು ಬಿಳಿ ಸಲ್ವಾರ್ ಕಮಿಷ್ ಅಥವಾ ಸಮಚಿತ್ತ ಬಣ್ಣದ ಸೀರೆ, ಕುಪ್ಪಸ ಅಥವಾ ಮೇಲುಡುಗೆ , ಉದ್ಧವಾದ ಪ್ಯಾಂಟ್ ಬಿಳಿ ನೆಕ್ ಬಾಂಡ್ ಧರಿಸಿರಬೆಕು.

ಸಾರ್ವಜನಿಕರು ಅಥವಾ ದೂರುದಾರರು ಕಾಲರ್ ಇರುವ ಶರ್ಟ್, ಉದ್ಧವಾದ ಪ್ಯಾಂಟ್ ಧರಿಸಿರಬೇಕು .ಮಹಿಳೆಯರು ಸಮಚಿತ್ತ ಬಣ್ಣದ ಸೀರೆ, ಕುಪ್ಪಸ, ಮೇಲುಡುಗೆ ಸೆಲ್ವಾರ್ ಕಮೀಜ್, ಉದ್ಧವಾದ ಪ್ಯಾಂಟ್ ಧರಿಸಿರಬೆಕು. ಸಮವಸ್ತ್ರ ಪಾಲನೆ ಮಾಡದಿದ್ದರೆ, ರೆರಾ ನ್ಯಾಯಾಲಯದ ಕಲಾಪದೊಳಗೆ ಪ್ರವೇಶ ನೀಡುವುದಿಲ್ಲ ಎಂದು ರೇರಾ ಸ್ಪಷ್ಟಪಡಿಸಿ ಆದೇಶ ಹೊರಡಿಸಿದೆ.

Exit mobile version