Revenue Facts

ವಾಹನ ಕಳವಾದ್ರೆ ಮನೆಯಿಂದ್ಲೇ FIR ಮಾಡಬಹುದು !! E FIR ದಾಖಲಿಸುವ ವಿಧಾನ ಇಲ್ಲಿದೆ

ವಾಹನ ಕಳವಾದ್ರೆ ಮನೆಯಿಂದ್ಲೇ FIR ಮಾಡಬಹುದು !! E FIR ದಾಖಲಿಸುವ ವಿಧಾನ ಇಲ್ಲಿದೆ

ಬೆಂಗಳೂರು, ಸೆ. 15: ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ಪ್ರತಿ ದಿನ ಒಂದಲ್ಲಾ ಒಂದು ವಾಹನ ಕಳುವು ಆಗುತ್ತದೆ.‌ಕಳುವಾದ ವಾಹನ ಸಂಬಂಧ ಪೊಲೀಸ್ ಠಾಣೆಗೆ ಭೇಟಿ ನೀಡಿ ದೂರು ದಾಖಲಿಸುವುದು ಫಜೀತಿ ಕೆಲಸ. ಇದಕ್ಕೆ ತಿಲಾಂಜಲಿ ಇಟ್ಟಿರುವ ಕರ್ನಾಟಕ ಪೊಲೀಸರು ವಾಹನ ಕಳುವು ಸಂಬಂಧ ಸಾರ್ವಜನಿಕರೇ ಆನ್ ಲೈನ್ ನಲ್ಲಿ ಇ ಎಫ್ ಐಆರ್ ದಾಖಲಿಸಬಹುದು !

ಹೌದು, ವಾಹನ ಕಳವು ಸಂಬಂಧ ಇ ಎಫ್ಐಅರ್ ದಾಖಲಿಸುವ ವ್ಯವಸ್ಥೆಗೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಗೃಹ ಸಚಿವ ಡಾ. ಜಿ.ಪರಮೇಶ್ವರ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಜನ‌ಸ್ನೇಹಿ ವ್ಯವಸ್ಥೆಯನ್ನು ಸಿಎಂ ಉದ್ಘಾಟಿಸಿದರು. ಪೊಲೀಸರ ಈ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.‌ವಾಹನ ಕಳವಾದರೆ, ಸಾರ್ವಜನಿಕರು ಇನ್ನುಮುಂದೆ ಪೊಲೀಸ್ ಠಾಣೆಗೆ ಹೋಗಿ ಎಫ್ ಐಆರ್ ದಾಖಲಿಸುವಂತಿಲ್ಲ. ಬದಲಿಗೆ ಪೊಲೀಸ್ ವೆಬ್ ತಾಣ www.ksp.karnataka.gov.in ವೆಬ್ ತಾಣದ ಸಿಟಿಜನ್ ಲಾಗಿನ್ ಆಗಿ ಕಳವಾದ ವಾಹನ ಬಗ್ಗೆ ವಿವರ ನಮೂದಿಸಿ ಇ ಎಫ್ ಐಅರ್ ದಾಖಲಿಸಬಹುದು. ಆನ್ ಲೈನ್ ನಲ್ಲಿಯೇ ಕೇಸು ದಾಖಲಿಸಲಾಗುತ್ತದೆ. ಮಾತ್ರವಲ್ಲ ಪೊಲೀಸ್ ಇಲಾಖೆಗೆ ಈ ಮಾಹಿತಿ ತ್ವರಿತವಾಗಿ ಲಭ್ಯವಾಗಿ ವಾಹನ ಪತ್ತೆಗೆ ಕ್ರಮ‌ ಜರುಗಿಸಲು ಅನುಕೂಲವಾಗಲಿದೆ.

ಸಾರ್ವಜನಿಕ ಸ್ನೇಹಿ ಇ ಎಫ್ ಐಅರ್ ವ್ಯವಸ್ಥೆ ಪರಿಚಯಿಸಿದ್ದು, ಸಾರ್ವಜನಿಕರು ವಾಹನ ಕಳವು ಸಂಬಂಧ ಮಾತ್ರ ಎಫ್ ಐಆರ್ ದಾಖಲಿಸಿ ಇದರ ಇ ಪ್ರತಿ ಪಡೆಯಬಹುದು. ಇದರಿಂದ ಪಾರದರ್ಶಕತೆ ಜತೆಗೆ ಭ್ರಷ್ಟಾಚಾರ ಕ್ಕೂ ಕಡಿವಾಣ ಬೀಳಲಿದೆ. ತಂತ್ರಜ್ಞಾನ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಪೊಲೀಸರು ಪರಿಚಯಿಸಿರುವ ಜನ ಸ್ನೇಹಿ ವ್ಯವಸ್ಥೆ ಗೆ ಮೆಚ್ಚುಗೆ ವ್ಯಕ್ತವಾಗಿದೆ.

Exit mobile version