Revenue Facts

14 ಐಎಎಸ್ ಅಧಿಕಾರಿಗಳು ಹಾಗೂ 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ

14 ಐಎಎಸ್ ಅಧಿಕಾರಿಗಳು ಹಾಗೂ 15 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ

ಬೆಂಗಳೂರು, ಜೂ. 20 : ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ರಾಜ್ಯದಲ್ಲಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಪರ್ವ ಶುರುವಾಗಿದೆ. ಕಳೆದ ವಾರವಷ್ಟೇ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 14 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಜೊತೆಗೆ 15 ಐಪಿಎಸ್ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿದೆ. ಯಾರೆಲ್ಲಾ ವರ್ಗಾವಣೆ ಲಿಸ್ಟ್ ನಲ್ಲಿ ಇದ್ದಾರೆ ಎಂದು ತಿಳಿಯೋಣ ಬನ್ನಿ.

1993ನೇ ಬ್ಯಾಚ್ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಡಾ.ಕೆ ರಾಮಚಂದ್ರ ರಾವ್ ಅವರನ್ನು ಕರ್ನಾಟಕ ರಾಜ್ಯ ಪೊಲೀಸ್ ಹೌಸಿಂಗ್ ಕಾರ್ಪೋರೇಷನ್ ನ ಎಡಿಜಿಪಿ ಮತ್ತು ಎಂ.ಡಿಯಾಗಿ ನೇಮಿಸಿದೆ. ಮಾಲಿನಿ ಕೃಷ್ಣ ಮೂರ್ತಿ ಅವರನ್ನು ಪ್ರಿಜನ್ ಅಂಡ್ ಕರೆಕ್ಷನ್ ಸರ್ವೀಸ್ ಬೆಂಗಳೂರಿನ ಎಡಿಜಿಪಿಯಾಗಿ ನಿಯೋಜಿಸಿದೆ. ಜೆ ಅರುಣ್ ಚಕ್ರವರ್ತಿ ಅವರನ್ನು ಎಜಿಜಿಪಿ ಡೈರೆಕ್ಟರೇಟ್ ಆಪ್ ಸಿವಿಲ್ ರೈಟ್ಸ್ ಎನ್ಪೋರ್ಸ್ ಮೆಂಟ್ ಆಗಿ ನೇಮಿಸಿದೆ.

ಮನೀಷ್ ಕರ್ಬೀಕರ್ ಅವರನ್ನು ಎಕಾನಮಿಕಲ್ ಎಫೆನ್ಸಸ್, ಕ್ರಿಮಿನಲ್ ಇನ್ವಿಸ್ಟಿಗೇಷನ್ ಡಿಪಾರ್ಟ್ ಮೆಂಟ್ ನ ಎಡಿಜಿಪಿಯಾಗಿ ನೇಮಿಸಿದೆ. ಎಂ ಚಂದ್ರಶೇಖರ್ ಅವರನ್ನು ಎಡಿಜಿಪಿ ಇಂಡರ್ನಲ್ ಸೆಕ್ಯೂರಿಟಿ, ವಿಪುಲ್ ಕುಮಾರ್ ಅವರನ್ನು ಬೆಂಗಳೂರು ಈಸ್ಟ್ ವಿಭಾಗದ ಎಸಿಪಿಯಾಗಿ ವರ್ಗಾವಣೆ ಮಾಡಿದೆ. ಪರ್ವಿನ್ ಮಧುಕರ್ ಪವಾರ್ ಅವರನ್ನು ಐಜಿಪಿ, ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಮಾಡಿದೆ.ಸಂದೀಪ್ ಪಾಟೀಲ್ ಅವರನ್ನು ಕೆ ಎಸ್ ಆರ್ ಪಿಯ ಐಜಿಪಿಯಾಗಿ, ವಿಕಾಸ್ ಕುಮಾರ್ ವಿಕಾಸ್ಟರ್ನಲ್ ಸೆಕ್ಯೂರಿಟಿ ವಿಭಾಗದ ಐಜಿಪಿಯಾಗಿ, ರಮಣ್ ಗುಪ್ತ ಅವರನ್ನು ಬೆಳಗಾವಿಯ ನಾರ್ಥರನ್ ರೇಂಜ್ ಐಜಿಪಿಯಾಗಿ ನೇಮಿಸಿದೆ.

ಎಸ್ ಎನ್ ಸಿದ್ದರಾಮಪ್ಪ ಅವರನ್ನು ಐಜಿಪಿ, ಬೆಂಗಳೂರಿನ ಹೆಡ್ ಕ್ವಾಟ್ರಾಸ್-1ಗೆ ವರ್ಗಾವಣೆ ಮಾಡಿದೆ. ಡಾ.ಎಂ.ಬಿ ಬೋರಲಿಂಗಯ್ಯ ಅವರನ್ನು ಸೌಥ್ರೆನ್ ರೇಂಜ್ ಮೈಸೂರು ಇಲ್ಲಿನ ಐಜಿಪಿಯಾಗಿ ವರ್ಗಾವಣೆ ಮಾಡಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಸಿ ವಂಶಿ ಕೃಷ್ಣ ಅವರನ್ನು ಡಿಐಜಿಪಿ, ಎಕಾನಾಮಿಕ್ ಅಫೆನ್ಸಸ್, ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್ ಮೆಂಟ್ ಗೆ ವರ್ಗಾವಣೆ ಮಾಡಿದೆ. ಹುದ್ದೆಯ ನಿರೀಕ್ಷೆಯಲ್ಲಿದ್ದಂತ ಸಿ.ಬಿ ರಿಷ್ಯಂತ್ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿಯಾಗಿ ನೇಮಿಸಲಾಗಿದೆ.

Exit mobile version