Revenue Facts

ಯಾವ ಜಿಲ್ಲೆಯಲ್ಲಿ ಎಷ್ಟು ನಾಮಪತ್ರಗಳು ಕ್ರಮಬದ್ಧ, ಎಷ್ಟು ತಿರಸ್ಕೃತ?

ಯಾವ ಜಿಲ್ಲೆಯಲ್ಲಿ ಎಷ್ಟು ನಾಮಪತ್ರಗಳು ಕ್ರಮಬದ್ಧ, ಎಷ್ಟು ತಿರಸ್ಕೃತ?

ವಿಧಾನಸಭೆ ಸಾರ್ವತ್ರಿಕ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ಶುಕ್ರವಾರ ನಾಮಪತ್ರ ಪರಿಶೀಲನಾ ಕಾರ್ಯ ಮಾಡಲಾಗಿದೆ.

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ನಾಮಪತ್ರಗಳಳನ್ನು ಚುನಾವಣಾ ಅಧಿಕಾರಿಗಳು ಶುಕ್ರವಾರ ಪರಿಶೀಲಿಸಿ, ಕ್ರಮಬದ್ಧ ಇಲ್ಲದ ನಾಮಪತ್ರಗಳನ್ನು ತಿರಸ್ಕರಿಸಿದರು.
ಶುಕ್ರವಾರ ಯಾವ ಜಿಲ್ಲೆಯಲ್ಲಿ ಎಷ್ಟು ನಾಮಪತ್ರಗಳು ಅಂಗೀಕಾರವಾದವು ಮತ್ತು ಎಷ್ಟು ತಿರಸ್ಕೃತಗೊಂಡಿವೆ ಎಂಬ ಮಾಹಿತಿ ಇಲ್ಲಿದೆ…

ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ 6 ಮಹಿಳೆಯರು ಸೇರಿ 138 ಅಭ್ಯರ್ಥಿಗಳ ನಾಮಪತ್ರ‌ ಕ್ರಮಬದ್ಧವಾಗಿದ್ದು, 7 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿವೆ. ಅಫಜಲಪೂರ-11, ಜೇವರ್ಗಿ-28, ಚಿತ್ತಾಪುರ-8, ಸೇಡಂ-15, ಚಿಂಚೋಳಿ-10, ಗುಲಬರ್ಗಾ ಗ್ರಾಮೀಣ-14, ಗುಲಬರ್ಗಾ ದಕ್ಷಿಣ-22, ಗುಲಬರ್ಗಾ ಉತ್ತರ-16 ಹಾಗೂ ಆಳಂದ ಕ್ಷೇತ್ರದಲ್ಲಿ 14 ಅಭ್ಯರ್ಥಿಗಳ ನಾಮಪತ್ರ‌ ಕ್ರಮಬದ್ಧವಾಗಿವೆ. ಜಿಲ್ಲೆಯ 9 ಕ್ಷೇತ್ರಗಳಲ್ಲಿ ಒಟ್ಟು 145 ಅಭ್ಯರ್ಥಿಗಳು 217 ನಾಮಪತ್ರ ಸಲ್ಲಿಸಿದ್ದರು.

ಧಾರವಾಡ: ಧಾರವಾಡ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳಿಗೆ ಸಲ್ಲಿಕೆಯಾಗಿದ್ದ 182 ನಾಮಪತ್ರಗಳ ಪೈಕಿ ಅಂತಿಮವಾಗಿ 152 ನಾಮಪತ್ರಗಳು ಕ್ರಮಬದ್ಧವಾಗಿವೆ ಮತ್ತು 30 ನಾಮಪತ್ರಗಳು ತಿರಸ್ಕೃತಗೊಂಡಿವೆ. ನವಲಗುಂದ 19, ಕುಂದಗೋಳ 31, ಧಾರವಾಡ 23, ಹುಬ್ಬಳ್ಳಿ-ಧಾರವಾಡ ಪೂರ್ವ 13, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ 18, ಹುಬ್ಬಳ್ಳಿ-ಧಾರವಾಡ ಪಶ್ಚಿಮ 31, ಕಲಘಟಗಿ 17 ನಾಮಪತ್ರಗಳು ಕ್ರಮಬದ್ಧವಾಗಿವೆ.

ಬೆಂಗಳೂರು: ಆನೇಕಲ್ ಮೀಸಲು ಕ್ಷೇತ್ರ 177ರ ವಿಧಾನಸಭಾ ಕ್ಷೇತ್ರ ಚುಮಾವಣಾ ಕಣದಲ್ಲಿ ಒಟ್ಟು 16 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇವರ ಪೈಕಿ ನಾಮಪತ್ರ ಪರಿಶೀಲನಾ ಹಂತ ಮುಗಿದು 12 ಮಂದಿ ಕಣದಲ್ಲಿ ಉಳಿದಿದ್ದಾರೆ.

ವಿಜಯನಗರ: ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಲ್ಲಿ ಸಲ್ಲಿಕೆಯಾದ 105 ನಾಮಪತ್ರಗಳಲ್ಲಿ 69 ಅಭ್ಯರ್ಥಿಗಳ ನಾಮಪತ್ರಗಳು ಮಾತ್ರ ಅಂಗೀಕಾರವಾಗಿದ್ದು, ಉಳಿದ 36 ತಿರಸ್ಕೃತಗೊಂಡಿವೆ.
ಬಳ್ಳಾರಿ: ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಕಂಪ್ಲಿ ವಿಧಾನಸಭಾ ಕ್ಷೇತ್ರದ 7 ಅಭ್ಯರ್ಥಿಗಳ, ಸಿರುಗುಪ್ಪ ವಿಧಾನಸಭಾ ಕ್ಷೇತ್ರದ 11 ಅಭ್ಯರ್ಥಿಗಳ, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 9 ಅಭ್ಯರ್ಥಿಗಳ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ 28 ಅಭ್ಯರ್ಥಿಗಳ ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದ 8 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ಧವಾಗಿವೆ.

ಬಾಗಲಕೋಟೆ: ಜಿಲ್ಲೆಯ ಏಳು ಮತಕ್ಷೇತ್ರಗಳಲ್ಲಿ 156 ನಾಮಪತ್ರಗಳು ಕ್ರಮಬದ್ದವಾಗಿದ್ದು, 10 ನಾಮಪತ್ರಗಳು ತಿರಸ್ಕೃತಗೊಂಡಿವೆ. ಮುಧೋಳ ಮೀಸಲು ಕ್ಷೇತ್ರದಲ್ಲಿ 15, ತೇರದಾಳ ಮತಕ್ಷೇತ್ರದಲ್ಲಿ 30, ಜಮಖಂಡಿ ಮತಕ್ಷೇತ್ರದಲ್ಲಿ 20, ಬೀಳಗಿ ಮತಕ್ಷೇತ್ರದಲ್ಲಿ 26, ಬಾದಾಮಿ ಮತಕ್ಷೇತ್ರದಲ್ಲಿ 25, ಬಾಗಲಕೋಟೆ ಮತಕ್ಷೇತ್ರದಲ್ಲಿ 23, ಹುನಗುಂದ ಮತಕ್ಷೇತ್ರದಲ್ಲಿ 17 ನಾಮಪತ್ರಗಳು ಕ್ರಮಬದ್ದವಾಗಿವೆ.

ಹಾವೇರಿ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲಿ 5 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 78 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದು, ಈ ಪೈಕಿ 67 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿವೆ. ಹಾನಗಲ್ 14, ರಾಣೇಬೆನ್ನೂರು 21, ಬ್ಯಾಡಗಿ 8, ಹಿರೇಕೆರೂರು 7, ಶಿಗ್ಗಾಂವಿಯಲ್ಲಿ 17 ಅಭ್ಯರ್ಥಿಗಳ ನಾಮಪತ್ರಗಳನ್ನು ಅಂಗೀಕರಿಸಲಾಗಿದೆ.

ಕೊಡಗು: ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ತಲಾ 1 ನಾಮಪತ್ರ ತಿರಸ್ಕೃತಗೊಂಡಿದೆ. ಮಡಿಕೇರಿ 21, ವಿರಾಜಪೇಟೆ 9 ನಾಮಪತ್ರಗಳು ಕ್ರಮಬದ್ಧವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

Exit mobile version