Revenue Facts

ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆ ವಿಸ್ತರಣೆಗೆ ಚಿಂತನೆ;ಸಿಎಂ.ಸಿದ್ದರಾಮಯ್ಯ

ಜ್ಯೋತಿ ಸಂಜೀವಿನಿ ಆರೋಗ್ಯ ವಿಮಾ ಯೋಜನೆ ವಿಸ್ತರಣೆಗೆ ಚಿಂತನೆ;ಸಿಎಂ.ಸಿದ್ದರಾಮಯ್ಯ

ಬೆಳಗಾವಿ;ರಾಜ್ಯದಲ್ಲಿನ ಅನುದಾನಿತ ಶಾಲಾ-ಕಾಲೇಜುಗಳಲ್ಲಿನ ನೌಕರರಿಗೆ ಸಹ ಜ್ಯೋತಿ ಸಂಜೀವಿನಿ ಯೋಜನೆಯನ್ನು ವಿಸ್ತರಿಸುವ ಕುರಿತಂತೆ ರಾಜ್ಯದ ಹಣಕಾಸಿನ ಪರಿಸ್ಥಿತಿಯನ್ನು ನೋಡಿಕೊಂಡು ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್‌ ನಲ್ಲಿ ತಿಳಿಸಿದರು.ವಿಧಾನಪರಿಷತ್‌ ನಲ್ಲಿ ಬಿಜೆಪಿಯ ಹೇಮಲತಾ ನಾಯಕ್‌ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತರಲಾಗಿದೆ. ಕ್ಯಾನ್ಸರ್‌, ಹೃದ್ರೋಗ ಸೇರಿ ಏಳು ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಖರ್ಚಾದ ಹಣವನ್ನು ಸರ್ಕಾರ ಮರು ಪಾವತಿಸುತ್ತದೆ ಎಂದರು.ನರರೋಗ, ಮೂತ್ರಪಿಂಡ ಮತ್ತು ಯೂರಿನರಿ ಚಿಕಿತ್ಸೆ ಗಳು, ನವಜಾತ ಶಿಶು ಹಾಗೂ ಚಿಕ್ಕಮಕ್ಕಳ ಖಾಯಿಲೆ, ಸುಟ್ಟಗಾಯ ಮತ್ತು ಅಪಘಾತಗಳಿಗೆ ಸಂಬಂಧಿಸಿದಂತೆ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ವತಿಯಿಂದ ನೆಟ್‌ವರ್ಕ್‌ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ನಗದು ರಹಿತವಾಗಿ ವೈದ್ಯಕೀಯ ಚಿಕಿತ್ಸೆ ಗಳನ್ನು ಒದಗಿಸಲು ಜ್ಯೋತಿ ಸಂಜೀವಿನಿ(Jyothi sanjeeveeni) ಯೋಜನೆಯನ್ನು 2015 ರಿಂದ ಜಾರಿಗೊಳಿಸಿರುತ್ತದೆ. ಈ ಯೋಜನೆಯನ್ನು ಸರ್ಕಾರಿ ನೌಕರರಿಗೆ(Govt employees) ಮಾತ್ರ ರೂಪಿಸಲಾಗಿದೆ. ಯಾವುದೇ ಅನುದಾನಿತ ನೌಕರರು ಯೋಜನೆಯ ವ್ಯಾಪ್ತಿಗೆ ಒಳಪಡುವುದಿಲ್ಲ,ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರಿಗೂ ವಿಸ್ತರಿಸುವ ಬಗ್ಗೆ ಹಣಕಾಸು ಲಭ್ಯತೆ ನೋಡಿಕೊಂಡು ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಗೆ ಒಳಪಡಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Exit mobile version