Revenue Facts

ಜಸ್ಟ್‌ 30 ಲಕ್ಷಕ್ಕೆ ಮಾರಾಟಕ್ಕಿದೆ 40 ಎಕರೆಯಲ್ಲಿರುವ ಐತಿಹಾಸಿಕ ಅರಮನೆ.!!

ಜಸ್ಟ್‌ 30 ಲಕ್ಷಕ್ಕೆ ಮಾರಾಟಕ್ಕಿದೆ 40 ಎಕರೆಯಲ್ಲಿರುವ ಐತಿಹಾಸಿಕ ಅರಮನೆ.!!

ಬೆಂಗಳೂರು, ಜೂ. 02 : ಐತಿಹಾಸಿಕ ಸ್ಥಳಗಳು ಯಾವಾತ್ತಿಗೂ ಮಾರಾಟ ಮಾಡಲು ಬರುವುದಿಲ್ಲ. ಐತಿಹಾಸಿಕ ಸ್ಥಳಗಳನ್ನು ಸರ್ಕಾರ ವಶ ಪಡೆದುಕೊಳ್ಳುತ್ತದೆ. ಆದರೆ, ಇಲ್ಲೊಂದು ಐತಿಹಾಸಿಕ ಸ್ಥಳವನ್ನು ಮಾರಾಟಕ್ಕಿಟ್ಟಿದ್ದು, ಕೇವಲ 30 ಲಕ್ಷ ರೂಪಾಯಿಗೆ ನೀಡಲಾಗುತ್ತಿದೆ. ಹಾಗಾದರೆ ಯಾವುದು ಆ ಐತಿಹಾಸಿಕ ಸ್ಥಳ. ಅದು ಎಲ್ಲಿದೆ..? ಯಾಕಾಗಿ ಅದನ್ನು ಮಾರಾಟ ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.

 

ಇದೊಂಧೂ ಐತಿಹಾಸಿಕ ಕೋಟೆ. ಇದರ ಹೆಸರು ಬ್ರೌ ಲಾಡ್ಜ್.‌ ಸ್ಕಾಟ್‌ ಲ್ಯಾಂಡ್‌ ನ ಶೆಟ್‌ ಲ್ಯಾಂಡ್‌ ನಲ್ಲಿರುವ ಫೆಟ್ಲರ್‌ ಎಂಬ ದ್ವೀಪದಲ್ಲಿ ಈ ಕೋಟೆ ಇದೆ. ಸುಮಾರು 200 ವರ್ಷಗಳಷ್ಟು ಹಳೆಯದಾಗಿದ್ದು, ಬ್ರೌ ಲಾಡ್ಜ್ ಕೋಟೆ 40 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಆರ್ಥರ್ ನಿಕೋಲ್ಸನ್ ಎಂಬ ವ್ಯಾಪಾರಿ ನಿರ್ಮಾಣ ಮಾಡಿದ್ದು, ಇದರಲ್ಲಿ 24 ಕೊಠಡಿಗಳು ಇವೆ. ಉದ್ಯಾನವನ, ಟವರ್‌ ಫೋಲಿ ಟವರ್‌, ವಿಶಾಲವಾದ ಅಂಗಳ ಸೇರಿದಮತೆ ಕೋಟೆಯಲ್ಲಿ ಎಲ್ಲವೂ ಇದೆ.

200 ವರ್ಷಗಳಷ್ಟು ಹಳೆಯದ್ದಾಗಿದ್ದರಿಂದ ಶಿಥಿಲಾವಸ್ಥೆಯಲ್ಲಿ ಕಟ್ಟಡವಿದೆ. ಈ ಕಾರಣಕ್ಕಾಗಿಯೇ ಇದನ್ನು ಕೇವಲ 30 ಲಕ್ಷ ರೂಪಾಯಿ ಅನ್ನು ಕೋಟ್‌ ಮಾಡಿರಬಹುದು ಎಂದು ಅಂದಾಜಿಸಲಾಗಿದೆ. ಈ ಅರಮನೆಯು ಬ್ರೌ ಲಾಡ್ಜ್ ಟ್ರಸ್ಟ್ ಅಡಿಯಲ್ಲಿದೆ. ಇದನ್ನು 1980 ರ ದಶಕದಿಂದ ಖಾಲಿ ಇದೆ. ಇಲ್ಲಿ ಯಾರೂ ವಾಸವಿಲ್ಲ. ಸದ್ಯ ನಿಕೋಲ್ಸನ್ ಕುಟುಂಬ ಸದಸ್ಯರಾಗಿರುವ ಆಲಿವ್ ಬೋರ್ಲ್ಯಾಂಡ್ ಎಂಬಾತ 2007 ರಲ್ಲಿ ಟ್ರಸ್ಟ್‌ ಅನ್ನು ಸ್ಥಾಪಿಸಿದ್ದಾರೆ.

ಬ್ರೌ ಲಾಡ್ಜ್‌ ಟ್ರಸ್ಟ್ ಈ ಕಟ್ಟಡವನ್ನು ಖರೀದಿಸಿದವರು ನವೀಕರಣಗೊಳಿಸಬೇಕು ಎಂದು ಹೇಳಿದೆ. ಅರಮನೆಯನ್ನು ಹಾಗೆ ಉಳಿಸಿಕೊಳ್ಳುವಂತೆ ಒತ್ತಾಯಿಸಿದೆ. 24 ಮಲಗುವ ಕೋಣೆಗಳನ್ನು ಮತ್ತು ರೆಸ್ಟೋರೆಂಟ್ ಅನ್ನು ನಿರ್ಮಾಣ ಮಾಡುವ ಯೋಜನೆ ಬಗ್ಗೆ ತಿಳಿಸಿದೆ. ಬಳಿಕ ಇದನ್ನು ಪ್ರವಾಸಿ ಸ್ಥಳವನ್ನಾಗಿ ಮಾರ್ಪಾಡು ಮಾಡುವ ಯೋಜನೆಯನ್ನು ಹಾಕಿಕೊಂಡಿದೆ. ಟ್ರಸ್ಟ್‌ ಪ್ರಕಾರ ಈ ಕಡ್ಡದ ನವೀಕರಣಕ್ಕೆ 1,22,95,57,129 ಕೋಟಿ ಲಕ್ಷ ಕರ್ಚಾಗಬಹುದು ಎಂದು ಹೇಳೀದೆ.

Exit mobile version