Revenue Facts

ಆಸೆ ನೆರವೇರಿಸಿಕೊಳ್ಳಲು ಒಬ್ಬನೇ ಟೈಟಾನಿಕ್‌ ಶೇಪ್ ನಲ್ಲಿ ಮನೆ ನಿರ್ಮಿಸಿದ ವ್ಯಕ್ತಿ

ಬೆಂಗಳೂರು, ಏ. 13 :ಟೈಟಾನಿಕ್ ಹಡಗಿಗೆ 110 ವರ್ಷ ಕಳೆದಿದೆ. ಟೈಟಾನಿಕ್ ಆ ಕಾಲದ ಪ್ರಸಿದ್ಧ ಹಾಗೂ ಬೃಹತ್ ಹಡಗು. ಟೈಟಾನಿಕ್ ಹಡಗು ಇನ್ನೂ ಹಲವರಲ್ಲಿ ಕುತೂಹಲವನ್ನು ಉಳಿಸಿಕೊಂಡಿದೆ. ಹಲವರಿಗೆ ಟೈಟಾನಿಕ್‌ ಹಡಗು ಒಂದು ಅದ್ಭುತವಾದ ಕನಸಾಗಿದೆ. ಟೈಟಾನಿಕ್‌ ಹಡಗಿನ ಬಗ್ಗೆ ಹಲವರು ತಮ್ಮದೇ ರೀತಿಯಲ್ಲಿ ಕನಸನ್ನು ಕಂಡಿದ್ದಾರೆ. ಇಲ್ಲೊಬ್ಬ ವ್ಯಕ್ತತತಿ ಟೈಟಾನಿಕ್ ಹಡಗನ್ನು ಇಷ್ಟ ಪಟ್ಟ ಕಾರಣ. ಅದೇ ಮಾದರಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿದ್ದಾನೆ.

ಪಶ್ಚಿಮ ಬಂಗಾಳದ ಮಿಂಟು ರಾಯ್ ಎಂಬಾತ ಟೈಟಾನಿಕ್‌ ಮಾದರಿಯ ಮನೆಯನ್ನು ಕಟ್ಟಿದ್ದಾನೆ. ಈತ ಇಲ್ಲಿಯ ಉತ್ತರ 24 ಪರಗಣಗಳ ಹೆಲೆಂಚಾ ಜಿಲ್ಲೆಯ ನಿವಾಸಿಯಾಗಿದ್ದಾರೆ. ಮಿಂಟು ರಾಯ್‌ ಅವರಿಗೆ ಟೈಟಾನಿಕ್‌ ನಂತಹ ಮನೆಯನ್ನು ನಿರ್ಮಿಸಬೇಕೆಂದು ಆಸೆ ಇತ್ತು. ಆದರೆ, ಮೊದಮೊದಲು ಯಾವ ಇಂಜಿನಿಯರ್‌ ಗಳು ಯಾರೂ ಕೂಡ ಟೈಟಾನಿಕ್ ಹಡಗಿನ ಮನೆಯನ್ನು ನಿರ್ಮಾಣ ಮಾಡಲು ಒಪ್ಪಿರಲಿಲ್ಲ. ಇದರಿಂದ ಮಿಂಟು ರಾಯ್ ಅವರೇ ಟೈಟಾನಿಕ್‌ ಮಾದರಿಯ ಮನೆಯನ್ನು ನಿರ್ಮಾಣ ಮಾಡಲು ಮುಂದಾದರು.

ಮಿಂಟು ರಾಯ್ ಅವರು ಕೃಷಿ ಮಾಡಿ ಜೀವನ ನಡೆಸುತ್ತಿದ್ದವರು. ಇವರ ಬಳಿ ಹೆಚ್ಚಿನ ಹಣ ಕೂಡ ಇರಲಿಲ್ಲ. ಹಾಗಾಗಿ ಮನೆ ನಿರ್ಮಾಣ ಮಾಡಲು ಮೇಸ್ತ್ರಿಗಳಿಗೂ ಹಣ ಕೊಡಲು ಸಾಧ್ಯವಿಲ್ಲ ಎಂದು ಮಿಂಟು ತಾನೇ ಮನೆ ನಿರ್ಮಾಣ ಮಾಡಲು ಮುಂದಾದ. ಮನೆ ಕಟ್ಟುವ ತರಬೇತಿ ಪಡೆಯಲು ಮಿಂಟು ನೇಪಾಳಕ್ಕೆ ತೆರಳಿದ. ಮೇಸ್ತ್ರಿ ಕೆಲಸವನ್ನು ಕಲಿತ ಮಿಂಟು ತಾವೇ ಮನೆ ನಿರ್ಮಾಣಕ್ಕೆ ಮುಂದಾದರು. 2010 ರಲ್ಲಿ ಮನರಯನ್ನು ಕಟ್ಟಲು ಮಿಂಟು ಶುರುವಾಗಿದೆ.

39 ಅಡಿ ಉದ್ದ ಹಾಗೂ 13 ಅಡಿ ಅಗಲದ ಟೈಟಾನಿಕ್‌ ಮಾದರಿಯ ಹಡಗನ್ನು ನಿರ್ಮಿಸಿದ್ದು, ಇದು ಸುಮಾರು 30 ಅಡಿ ಎತ್ತರವಿದೆ. ಪಶ್ಚಿಮ ಬಂಗಾಳದಲ್ಲಿ ಈಗ ಈ ಹಡಗಿನ ಮನೆ ಪ್ರಮುಖ ಆಕರ್ಷಣೆಯಾಗಿದೆ. ಈ ಮನೆಗೆ ಮಿಂಟು ರಾಯ್‌ ತನ್ನ ತಾಯೊ ಹೆಸರನ್ನು ಇಡಲು ಮುಂದಾಗಿದ್ದಾನೆ. ಈ ಹಡಗಿನ ಮನೆ ಕಟ್ಟಲು ಈವರೆಗೆ ಅಂದಾಜು 15 ಲಕ್ಷ ರೂ. ಕರ್ಚು ಮಾಡಲಾಗಿದೆ. ಇನ್ನೊಂದು ವರ್ಷದಲ್ಲಿ ಮನೆಯ ಸಂಪೂರ್ಣ ಕೆಲಸವನ್ನು ಮಾಡಿ ಮುಂಗಿಸಲು ಮಿಂಟು ತೀರ್ಮಾನಿಸಿದ್ದಾರೆ.

Exit mobile version