Revenue Facts

ವಾಸ್ತು ದೋಷ ಇರುವ ಮನೆಗೆ ಯಂತ್ರ, ಮಂತ್ರಗಳಿಂದ ಪರಿಹಾರ ಸಿಗುವುದೇ..?

ವಾಸ್ತು ದೋಷ ಇರುವ ಮನೆಗೆ ಯಂತ್ರ, ಮಂತ್ರಗಳಿಂದ ಪರಿಹಾರ ಸಿಗುವುದೇ..?

ಬೆಂಗಳೂರು, ಫೆ. 15 : ವಾಸ್ತು ದೋಷ ಇರುವ ಮನೆಗೆ ಸಾಮಾನ್ಯವಾಗಿ ಎಲ್ಲರೂ ಯಂತ್ರ, ಮಂತ್ರ, ಪೂಜೆಗಳನ್ನು ಮಾಡಿಸುತ್ತಾರೆ. ಆದರೆ ಇದರಿಂದ ಸಂಪೂರ್ಣವಾಗಿ ಪರಿಹಾರ ಸಿಗುತ್ತಾ ಎಂಬುದು ಹಲವರ ಪ್ರಶ್ನೆ. ಇನ್ನು ಕೆಲವರ ಪ್ರಕಾರ, ಆ ಮನೆಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವುದೇ ಸರಿ ಎಂದು ಹೇಳಲಾಗುತ್ತದೆ. ವಾಸ್ತುದೋಷ ಇರುವ ಮನೆ ಡೆಮಾಲಿಷನ್ ಮಾಡಬೇಕಾ ? ಮನೆಯ ವಾಸ್ತುದೋಷಕ್ಕೆ ಪರಿಹಾರ ಇದೆಯೇ ? ಮನೆಯ ವಾಸ್ತು ದೋಷಕ್ಕೆ ಯಂತ್ರ ಪರಿಹಾರವೇ ? ಮಂತ್ರದಿಂದ ಮನೆಯ ವಾಸ್ತುದೋಷ ಸರಿಪಡಿಸಬಹುದೇ ? ಮನೆಯ ವಾಸ್ತುದೋಷ ಸರಿಪಡಿಸಲು ಮನೆ ಡೆಮೋಲಿಷನ್ ಮಾಡುವುದೇ ಸೂಕ್ತವೇ ? ವಾಸ್ತು ಎನರ್ಜಿ ಯಂತ್ರ- ತಂತ್ರಗಳ ಅಸಲಿ ಸತ್ಯ ಏನು ? ಎಂದು ತಿಳಿಯೋಣ ಬನ್ನಿ.

ವಾಸ್ತು ಶಾಸ್ತ್ರದಲ್ಲಿ ಪರಿಹಾರ ಏನು ಎಂಬುದು ಬಹಳ ಮುಖ್ಯವಾದ ವಿಷಯ. ಯಾಕೆಂದರೆ, ಎಲ್ಲಾ ಥರಹದ ವಾಸ್ತು ದೋಷಗಳನ್ನು ಯಾವುದೇ ರೀತಿಯ ಡೆಮಾಲಿಷನ್ ಮಾಡದೆಯೇ ಪರಿಹಾರವನ್ನು ಮಾಡಬಹುದು ಎಂದು ಹಲವರು ಹೇಳುತ್ತಾರೆ. ಆದರೆ, ಸಂಖ್ಯಾಶಾಸ್ತ್ರಜ್ಞರು ಹಾಗೂ ಜ್ಯೋತಿಷಿಗಳಾದ ಡಾ. ರೇವತಿ ವೀ ಕುಮಾರ್ ಅವರ ಪ್ರಕಾರ, ಎಲ್ಲಾ ದೋಷಗಳನ್ನು ಮನೆ ಕೆಡವದೇ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉದಾಹರಣೆಗೆ, ಮನೆಯಲ್ಲಿ ಮಹಡಿ ಮೆಟ್ಟಿಲುಗಳನ್ನು, ಬ್ರಹ್ಮಸ್ಥಾನದಲ್ಲೋ, ಉತ್ತರದಲ್ಲೋ ಇಲ್ಲವೇ ಪೂರ್ವದಲ್ಲೋ ಅಳವಡಿಸಿರಲಾಗುತ್ತದೆ. ಈ ಜಾಗಗಳಲ್ಲಿ ಬಂದಿದ್ದರೆ, ಕೆಡವಿ ಬೇರೆ ಕಡೆ ಕಟ್ಟಬೇಕೇ ಹೊರತು ಬೇರೆ ದಾರಿ ಇಲ್ಲ ಎಂದು ಹೇಳುತ್ತಾರೆ. ಕೆಲವರು ಪವರ್ ಪಿರಾಮಿಡ್ ಸೇರಿದಂತೆ ಕೆಲ ಪರಿಹಾರಗಳನ್ನು ಮಾಡಿಕೊಳ್ಳುತ್ತಾರೆ. ಯಂತ್ರಗಳನ್ನು ನೀಡುತ್ತಾರೆ. ಆದರೆ ಇದ್ಯಾವುದೂ ಪರಿಹಾರವನ್ನು ನೀಡುವುದಿಲ್ಲ. ಯಂತ್ರ, ಮಂತ್ರ ಹಾಗೂ ತಂತ್ರಗಳಿಂದ ಕೆಲ ದೋಷಗಳು ಪರಿಹಾರವಾಗುವುದು ನಿಜ. ಆದರೆ, ಎಲ್ಲವೂ ಸಾಧ್ಯವಿಲ್ಲ.

ಹಾಗಾಗಿ ಎಲ್ಲಾ ದೋಷಗಳನ್ನು ವಾಸ್ತು ವಸ್ತುಗಳಿಂದ ಪರಿಹಾರ ನೀಡಲಾಗುವುದಿಲ್ಲ. ಪಿರಾಮಿಡ್, ಯಂತ್ರಗಳೀಂದ ದೋಷದ ಪರಿಣಾಮವನ್ನು ಕೆಲಸ ಸಮಯ ಕೊಂಚ ಮಟ್ಟಕ್ಕೆ ತಗ್ಗಿಸಬಹುದು. ಅದು ಹೊರತು ಪಡಿಸಿ, ಪೂರ್ಣ ಪ್ರಮಾಣದಲ್ಲಿ ವಾಸ್ತು ದೋಷವನ್ನು ಪರಿಹರಿಸಲು ಸಾಧ್ಯವಿಲ್ಲ. ಹಾಗಾಗಿ ತಪ್ಪಾದ ದಿಕ್ಕಿನಲ್ಲಿ ಮೆಟ್ಟಿಲುಗಳ ನಿರ್ಮಾಣ ಸೇರಿದಂತೆ ಮನೆ ಕಟ್ಟುವಾಗ ದಿಕ್ಕು ತಪ್ಪಾಗಿದ್ದರೆ, ಮನೆಯಬ್ಬು ಕೆಡವಿ ಪುನಃ ನಿರ್ಮಾಣ ಮಾಡುವುದರಿಂದ ಶಾಶ್ವತ ಪರಿಹಾರ ಸಿಗುತ್ತದೆ ಎಂದು ಡಾ.ರೇವತಿ ವೀ ಕುಮಾರ್ ಅವರು ತಿಳಿಸಿದ್ದಾರೆ.

Exit mobile version