#Tumkuru, #Dc #Registartion, #Rera rule #Indian Registation Rule
ತುಮಕೂರು, ನ.06: ತುಮಕೂರು ನಗರ ಜಿಲ್ಲಾ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಿವೇಶನ ಹಾಗೂ ಅಪಾರ್ಟ್ಮೆಂಟ್ ಗಳನ್ನು ರೇರಾ ಅನುಮೋದನೆ ಇಲ್ಲದೇ ನೋಂದಣಿ ಮಾಡದಂತೆ ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಆದೇಶ ಹೊರಡಿಸುವ ಮೂಲಕ ನೋಂದಣಿ ಕಾಯ್ದೆಯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.ಜಿಲ್ಲಾಧಿಕಾರಿಗಳ ಈ ಆದೇಶದಿಂದ ರಾಜ್ಯದ ರಾಜಸ್ವಕ್ಕೆ ಭಾರೀ ಪೆಟ್ಟು ಬೀಳುವ ಸಾಧ್ಯತೆಯಿದೆ. ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿ ರೇರಾ ಅನುಮೋದನೆ ಪಡೆಯದೇ ನಿವೇಶನ ಮತ್ತು ಸ್ವತ್ತುಗಳನ್ನು ನೋಂದಣಿ ಮಾಡುತ್ತಿದ್ದು, 2017 ರಿಂದ ನಿಮರ್ಿಸಿರುವ ಹೊಸ ಬಡಾವಣೆಗಳಲ್ಲಿನ ನಿವೇಶನಗಳನ್ನು ರೇರಾ ಅನುಮೋದನೆ ಇಲ್ಲದೇ ನೋಂದಣಿ ಮಾಡುವಂತಿಲ್ಲ. ಹೊಸ ಬಡಾವಣೆ ನಿರ್ಮಿಸಿದರು ಸಹ ರೇರಾ(RERA) ಅನುಮೋದನೆಯೊಂದಿಗೆ ನಿವೇಶನ ಮತ್ತು ಅಪಾರ್ಟ್ಮೆಂಟ್ ಗಳನ್ನು ನೋಂದಣಿ ಮಾಡಲು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ನೋಂದಣಾಧಿಕಾರಿ ಬಿ.ಎನ್. ಶಶಿಕಲಾ ಅವರಿಗೆ ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಈ ಸುತ್ತೋಲೆಯಿಂದ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಜಿಲ್ಲೆಯಲ್ಲಿ 2017 ರಿಂದ ನಿಮರ್ಿಸಿರುವ ಬಡಾವಣೆಗಳಲ್ಲಿನ ನಿವೇಶನಗಳನ್ನು ರೇರಾ ಅನುಮೋದನೆ ಇಲ್ಲದೇ ನೋಂದಣಿ ಮಾಡಲು ಸಾಧ್ಯವಿಲ್ಲ. ಇದರಿಂದ ನಿವೇಶನಗಳ ನೋಂದಣಿ ಪ್ರಕ್ರಿಯೆ ನನಿಂತು ಹೋಗಲಿದೆ.
ರಿಯಲ್ ಎಸ್ಟೇಟ್ ವ್ಯವಹಾರದ ಮೇಲೆ ನಿಯಂತ್ರಣ ಹಾಗೂ ನಿವೇಶನ ಮಾರಾಟ ಪ್ರಕ್ರಿಯೆಯಲ್ಲಿ ಆಗುವ ಅಕ್ರಮ ತಡೆಯುವ ಮೂಲ ಉದ್ದೇಶ ರೇರಾ ಕಾಯ್ದೆಯದ್ದು. ಬಡಾವಣೆಗಳನ್ನು ಪಾರದರ್ಶಕವಾಗಿ ನಿರ್ಮಿಸಿ ನಿವೇಶನ ಮಾರಾಟ ಮಾಡುವುದು ಸಹ ಈ ಕಾಯ್ದೆಯ ಮತ್ತೊಂದು ಉದ್ದೇಶ. ಆದರೆ, ರೇರಾ ಕಾಯಿದೆ ಅಡಿ ನೋಂದಣಿ ಮಾಡದೇ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಲವಾರು ಬಡಾವಣೆ ನಿಮರ್ಾಣವಾಗಿದೆ. ಸಾವಿರಾರು ನಿವೇಶನ ಈಗಾಗಲೇ ನೋಂದಣಿ ಮಾಡಲಾಗಿದೆ. ಇದೀಗ ಜಿಲ್ಲಾಧಿಕಾರಿಗಳ ಸುತ್ತೋಲೆಯಿಂದ ರೆವಿನ್ಯೂ ನಿವೇಶನಗಳ ನೋಂದಣಿ ಪ್ರಕ್ರಿಯೆ ಸ್ಥಗಿತಗೊಳ್ಳಲಿದ್ದು, ಕಂದಾಯ ಇಲಾಖೆಯ ಆದಾಯಕ್ಕೆ ಖೋತಾ ಆಗಲಿದೆ.
ನೋಂದಣಿ ನಿಯಮ ಏನು ಹೇಳುತ್ತದೆ ? ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಉಪ ನೋಂದಣಾಧಿಕಾರಿಗಳು ಭಾರತೀಯ ನೋಂದಣಿ ಕಾಯಿದೆ 1908 ರ ಕಲಂ 06 ಅಡಿಯಲ್ಲಿ ನೇಮಕ ಆಗಿದ್ದು, ಕಾಯ್ದೆಯ ಸೂಚನೆಯಂತೆ ಕೆಲಸ ಮಾಡಬೇಕು. ನೋಂದಣಿ ಕಾಯ್ದೆಯ ಮೂಲ ಉದ್ದೇಶ ಸರಕಾರಕ್ಕೆ ರಾಜಸ್ವ ಸಂಗ್ರಹಣೆ ಮಾಡುವುದಾಗಿರುತ್ತದೆ. ಕನರ್ಾಟಕ ನೋಂದಣಿ ನಿಯಮಗಳು 1965 ರ ನಿಯಮ 73 ಜಿಲ್ಲಾ ನೋಂದಣಾಧಿಕಾರಿಗಳ ಮತ್ತು ಉಪ ನೋಂದಣಾಧಿಕಾರಿಗಳ ಕರ್ತವ್ಯದ ಬಗ್ಗೆ ಹೇಳುತ್ತದೆ.
ನೋಂದಣಿಗಾಗಿ ಉಪ ನೋಂದಣಾಧಿಕಾರಿಗಳ ಮುಂದೆ ಹಾಜರು ಪಡಿಸಿದ ನೋಂದಣಿಯ ದಾಸ್ತವೇಜುಗಳ ನೈಜತೆ ಬಗ್ಗೆ ಕೇಳುವಂತಿಲ್ಲ. ನೋಂದಣಿ ಮಾಡುವುದಿಲ್ಲ ಎಂದು ಮೌಖಿಕವಾಗಿ ಅಥವಾ ಲಿಖಿತವಾಗಿಯೂ ಹೇಳುವಂತಿಲ್ಲ. ದಾಸ್ತಾವೇಜಿನ ಅಂಶಗಳ ಬಗ್ಗೆ ಗೊತ್ತಿಲ್ಲದಿದ್ದರೆ ಅಥವಾ ಅವರಿಗೆ ಗೊತ್ತಿರುವ ಭಾಷೆಯಲ್ಲಿ ಇಲ್ಲದಿದ್ದರೆ, ಅಂತಹ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳು ಅದರ ವಿಷಯಗಳ ಬಗ್ಗೆ ಪಾಟರ್ಿಗಳಿಗೆ ಹೇಳಬೇಕು.
ಈ ಕೆಳಗಿನ ಆಧಾರದ ಮೇಲೆ ನೋಂದಣಿಗೆ ಆಕ್ಷೇಪ ವ್ಯಕ್ತಪಡಿಸಿದರೆ,
ನೋಂದಣಿಗೆ ದಾಸ್ತವೇಜು ಹಾಜರು ಪಡಿಸಿದ ವ್ಯಕ್ತಿ ಉಪ ನೋಂದಣಾಧಿಕಾರಿಗಳ ಮುಂದೆ ಹಾಜರಿದ್ದು, ಆತ ಅಪ್ರಾಪ್ತನಾಗಿದ್ದರೆ, ಮಾನಸಿಕ ಅಸ್ವತ್ತನಾಗಿದ್ದರೆ ನೋಂದಣಿಗೆ ಉಪ ನೋಂದಣಾಧಿಕಾರಿಗಳು ಆಕ್ಷೇಪಣೆ ಮಾಡಬಹುದು.
ದಾಖಲೆಗಳನ್ನು ನಖಲಿ ಮಾಡಿದ್ದರೆ,
ದಸ್ತಾವೇಜುಗಳನ್ನು ಹಾಜರು ಪಡಿಸಿದ ವ್ಯಕ್ತಿಯ ಪರವಾಗಿ ನೋಂದಣಿ ಮಾಡಿಕೊಡಿವಂತೆ ಕೋರಿದ ಪ್ರತಿನಿಧಿ ವ್ಯಕ್ತಿಯು ಅನರ್ಹನಾಗಿದ್ದರೆ, ( ಅಧಿಕಾರ ಇರದಿದ್ದರೆ) ನೋಂದಣಿ ನಿರಾಕರಿಸಬಹುದು. ಒಟ್ಟಾರೆಯಾಗಿ ಈ ನಿಯಮದ ಪ್ರಕಾರ, ಬರೆದುಕೊಡುವರು ಹಾಗೂ ಬರೆಸಿಕೊಳ್ಳುವರು ಒಪ್ಪಿಕೊಂಡಲ್ಲಿ ಸರಕಾರವು ನಿಗದಿ ಪಡಿಸಿದ ಮಾರುಕಟ್ಟೆ ದರ ಅಥವಾ ನಿಜವಾದ ಮಾರುಕಟ್ಟೆ ದರ ಯಾವುದು ಹೆಚ್ಚಳವೋ ಅದರಂತೆ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಡೆದು ನೋಂದಣಿಯನ್ನು ಕಡ್ಡಾಯವಾಗಿ ಮಾಡಲೇಬೇಕಿರುತ್ತದೆ. ಯಾವುದೇ ಕಾನೂನು ಬದ್ಧ ದಾಖಲೆಗಳನ್ನು ನೋಂದಣಿಗೆ ಹಾಜರು ಪಡಿಸಿದಾಗ ಅದನ್ನು ನಿರಾಕರಣೆ ಮಾಡುವುದು ಭಾರತೀಯ ನೋಂದಣಿ ಕಾಯ್ದೆಗೆ ವಿರುದ್ಧವಾಗುತ್ತದೆ.
ರೇರಾ ಅಡಿಯಲ್ಲಿ ಬಡಾವಣೆಗಳನ್ನು ನೋಂದಣಿ ಮಾಡಬೇಕು ಎಂಬುದು ನಿಯಮ ಅಷ್ಟೇ. ಹಾಗಂತ ರೇರಾ ಪಾಲಿಸುವ ನೆಪದಲ್ಲಿ ಭಾರತೀಯ ನೋಂದಣಿ ಕಾಯ್ದೆಯ ನಿಯಮಗಳನ್ನು ಉಲ್ಲಂಘನೆ ಮಾಡುವಂತಿಲ್ಲ. ರೇರಾ ದಲ್ಲಿ ನೋಂದಣಿ ಪ್ರಮಾಣ ಪತ್ರ ಕೊಡದಿದ್ದರೆ ನೋಂದಣಿ ಮಾಡಲಾಗದು ಎಂದು ಹೇಳುವ ಹಕ್ಕು ಉಪ ನೋಂದಣಾಧಿಕಾರಿಗಳಿಗೆ ಇರುವುದಿಲ್ಲ. ಹೀಗಾಗಿ ತುಮಕೂರು ಜಿಲ್ಲಾ ನೋಂದಣಾಧಿಕಾರಿಗಳ ಸುತ್ತೋಲೆಯಂತೆ ರೇರಾ ಪ್ರಮಾಣ ಪತ್ರ ಇಲ್ಲದ ಕಾರಣ ನೀಡಿ ನಿವೇಶನ ಸ್ವತ್ತುಗಳ ನೋಂದಣಿಯನ್ನು ಉಪ ನೋಂದಣಾಧಿಕಾರಿಗಳು ನಿರಾಕರಣೆ ಮಾಡುವುದು ಭಾರತೀಯ ನೋಂದಣಿ ಕಾಯ್ದೆಯ ಉಲ್ಲಂಘನೆ ಮಾಡಿದಂತೆ ಆಗುತ್ತದೆ. ಹಲವು ಪ್ರಕರಣಗಳಲ್ಲಿ ನ್ಯಾಯಾಲಯಗಳೇ ಭಾರತೀಯ ನೋಂದಣಿ ನಿಯಮಗಳನ್ನು ಎತ್ತಿ ಹಿಡಿದಿವೆ.
ಮಲ್ಲೇಶ್ವರಂ ಹೌಸಿಂಗ್ ಸೊಸೈಟಿ ಪ್ರಕರಣ: ಮಲ್ಲೇಶ್ವರಂ ಟೈಲರಿಂಗ್ ಗೃಹ ನಿಮರ್ಾಣ ಸಹಕಾರ ಸಂಘ ಲೇಔಟ್ ಅಭಿವೃದ್ಧಿ ಪಡಿಸಿ ಹಲವು ನಿವೇಶನಗಳನ್ನು ಮಾರಾಟ ಮಾಡಲು ಮುಂದಾಗಿತ್ತು. ಅಜರ್ಿದಾರರು ನಿವೇಶನ ನೋಂದಣಿ ಮಾಡುವಂತೆ ಉಪ ನೋಂದಣಾಧಿಕಾರಿ ಮುಂದೆ ಹಾಜರು ಪಡಿಸಿದ್ದರು. ಆದರೆ, ಉಪ ನೋಂದಣಾಧಿಕಾರಿಗಳು ನೋಂದಣಿಗೆ ನಿರಾಕರಿಸಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಎನ್ಒಸಿ ತರುವಂತೆ ಸೂಚಿಸಿದ್ದರು. ಭೂಮಿ ಯಾವ ರೀತಿ ಖರೀದಿ ಮಾಡಿದ್ದೀರಾ, ಭೂ ಪರಿವರ್ತನೆ ಆದೇಶ ತೆಗೆದುಕೊಂಡು ಬನ್ನಿ ಎಂದು ಉಪ ನೋಂದಣಾಧಿಕಾರಿ ಸೂಚಿಸಿ ನಿವೇಶನ ನೋಂದಣಿ ನಿರಾಕರಿಸಿದ್ದರು. ನಿವೇಶನ ನೋಂದಣಿ ನಿರಾಕರಿಸಿದ ಉಪ ನೋಂದಣಾಧಿಕಾರಿ ಕ್ರಮ ಪ್ರಶ್ನಿಸಿ ಹೌಸಿಂಗ್ ಸೊಸೈಟಿ ನ್ಯಾಯಾಲಯದ ಮೊರೆ ಹೋಗಿತ್ತು. ನ್ಯಾಯಾಲಯವು ಉಪ ನೋಂದಣಾಧಿಕಾರಿ ನೋಂದಣಿಗೆ ನಿರಾಕರಣೆ ಮಾಡಿ ನೀಡಿದ್ದ ಆಕ್ಷೇಪಣೆಯನ್ನು ನ್ಯಾಯಾಲಯ ರದ್ದು ಪಡಿಸಿತ್ತು. ನಿವೇಶನಗಳ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು.
ಭಾರತೀಯ ನೋಂದಣಿ ಕಾಯ್ದೆ ಮೂಲ ಉದ್ದೇಶ ಉಲ್ಲಂಘನೆ ಮಾಡುವ ಆದೇಶ ಸುತ್ತೋಲೆಗಳನ್ನು ಇನ್ನೊಂದು ಕಾಯ್ದೆ ನೆಪವೊಡ್ಡಿ ಹೊರಡಿಸಲು ಬರುವುದಿಲ್ಲ. ಈ ನಿಟ್ಟಿನಲ್ಲಿ ತುಮಕೂರು ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಹೊರಡಿಸಿರುವ ಸುತ್ತೋಲೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಅದನ್ನು ರದ್ದು ಪಡಿಸಲು ಅವಕಾಶವಿದೆ.
ಈಗಾಗಲೇ ರೇರಾ ನೋಂದಣಿ ಇಲ್ಲದೇ ಅಭಿವೃದ್ಧಿ ಪಡಿಸಿರುವ ನಿವೇಶನಗಳನ್ನು ನೋಂದಣಿ ಮಾಡಲಾಗಿದೆ. ಅನೇಕರು ನೋಂದಣಿ ಮಾಡಿಸಿದ್ದಾರೆ. ಆದರೆ, ಈಗ ರೇರಾ ಅನುಮೋದನೆ ಇಲ್ಲದೇ ನಿವೇಶನ ನೋಂದಣಿ ಮಾಡಬಾರದು ಎಂಬುದು ಮೂಲ ನೋಂದಣಿ ನಿಯಮಕ್ಕೆ ತದ್ವಿರುದ್ಧವಾಗಿರುತ್ತದೆ. ಪ್ರಕರಣವೊಂದರಲ್ಲಿ ನಿವೇಶನ ನೋಂದಣಿ ಮಾಡದಂತೆ ನಿದರ್ೇಶನ ನೀಡಿ ನ್ಯಾಯಾಧೀಶರೊಬ್ಬರು ಭಾರತೀಯ ನೋಂದಣಿ ನಿಯಮಕ್ಕೆ ತದ್ವಿರುದ್ಧ ಕೊಟ್ಟು ನ್ಯಾಯಾಧೀಶ ಹುದ್ದೆಯನ್ನು ಕಳೆದುಕೊಂಡ ಉದಾಹರಣೆಯಿದೆ. (ಸನ್ನದಿ ಪ್ರಕರಣ) ಹೀಗಾಗಿ ಭಾರತೀಯ ನೋಂದಣಿ ಕಾಯ್ದೆಯ ನಿಯಮಗಳಿಗೆ ರೇರಾ ನಿಯಮಗಳಿಂದ ನಿರ್ಬಂಧ ವಿಧಿಸುವುದು ನ್ಯಾಯಸಮ್ಮತವಲ್ಲ ಎಂಬುದು ಕಾನೂನು ತಜ್ಞರು ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.