ಬೆಂಗಳೂರು, ಮೇ. 29 : ಒಂದು ಮನೆಯಲ್ಲಿ ಎರೆಡು ಅಡುಗೆ ಮನೆಯಲ್ಲಿ ಎನ್ನುವುದು ಒಂದಾದರೆ, ಒಂದೇ ಫ್ಲೋರ್ ನಲ್ಲಿ ಬಾಡಿಗೆ ಮನೆಗಳಿದ್ದು, ಅಲ್ಲಿ ಹಲವು ಅಡುಗೆ ಮನೆಗಳು ಇರುತ್ತವೆ. ಹೀಗೆ ಒಂದೇ ಬಿಲ್ಡಿಂಗ್ ನಲ್ಲಿ ಬೇರೆ ಬೇರೆ ಮನೆಗಳಿದ್ದು, ಮನೆಗೊಂದು ಎಂಬಂತೆ ಅಡುಗೆ ಕೋಣೆಗಳು ಇದ್ದರೆ ಸಮಸ್ಯೆ ಆಗುವುದಿಲ್ಲ. ಅದೇ ಒಂದೇ ಮನೆಯಲ್ಲಿ ಎರಡೆರಡು ಅಡುಗೆ ಮನೆಯೆಂದರೆ, ಅದರಿಂದ ಸ್ವಲ್ಪ ಸಮಸ್ಯೆಗಳು ಆಗಬಹುದು. ಒಬ್ಬರೇ ಯಜಮಾನಿ ಇರುವಂತಹ ಮನೆಯಲ್ಲಿ ಎರಡು ಅಡುಗೆ ಮನೆ ಇರಬಾರದು.
ಸಾಮಾನ್ಯವಾಗಿ ಎಲ್ಲರೂ ಒಟ್ಟಿಗೆ ಸೇರುವ ಜಾಗವೆಂದರೆ ಅದು ಡೈನಿಂಗ್ ಹಾಲ್ ನಲ್ಲಿ. ಇದೆಲ್ಲವೂ ಮನೆಯವರೆಲ್ಲಾ ಒಟ್ಟಿಗೆ ಇರುವಂತಹ ಸ್ಥಳ. ಒಂದೇ ಅಡುಗೆ ಮಾಡಿ ಮನೆಯವರೆಲ್ಲಾ ಸವಿಯುವುದು ಮನೆಯಲ್ಲಿನ ಸಂಬಂಧಗಳನ್ನು ಕೂಡ ಹೆಚ್ಚಿಸುತ್ತದೆ. ಅದೇ, ಒಂದೇ ಮನೆಯಲ್ಲಿ ಎರಡೆರಡು ಅಡುಗೆ ಮನೆಗಳು ಇದ್ದಲ್ಲಿ ಆಗ, ಅಣ್ಣ ಒಂದು ಕಡೆ ಹಾಗೂ ತಮ್ಮ ಒಂದು ಕಡೆ ಅಡುಗೆ ಮಾಡಿಕೊಳ್ಳುವುದು ಮನೆಗೆ ಶೋಭೆಯಲ್ಲ. ಇದರಿಂದ ಮನೆಯಲ್ಲಿನ ಅನ್ಯೂನತೆ ಇರುವುದಿಲ್ಲ.
ಮನೆಯಲ್ಲಿ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತದೆ. ಮನೆಯಲ್ಲಿ ಸಮಸ್ಯೆ ಕಾಣಿಸಿಕೊಂಡರು ಒಟ್ಟಿಗೆ ಕುಳಿತು ಬಗೆ ಹರಿಸಿಕೊಳ್ಳಲಾಗದೇ, ಒದ್ದಾಡಬೇಕಾಗುತ್ತದೆ. ಇನ್ನು ವಾಸ್ತು ಪ್ರಕಾರ ಎರು ಕಿಚನ್ ಬೇಕೆಂದರೆ, ವಾಯುವ್ಯ ಹಾಗೂ ಆಗ್ನೇಯದಲ್ಲಿ ಅಡುಗೆ ಮನೆಯನ್ನು ಇಟ್ಟುಕೊಳ್ಳಬಹುದು. ಆದರೆ, ಒಂದು ಮನೆಗೆ ಎರಡು ಅಡುಗೆ ಮನೆ ಸೂಕ್ತವಲ್ಲ. ಇನ್ನು ಸಾಮಾನ್ಯವಾಗಿ ನಾನ್ ವೆಜ್ ಅನ್ನು ಮಾಡಲು ಬೇರೆ ಅಡುಗೆ ಮನೆ ಬೇಕು ಎಂದು ಕೇಳುವವರಿಗೆ, ಟೆರೆಸ್ ಮೇಲೋ ಅಥವಾ ಬೇರೆ ಕಡೆ ಅಡುಗೆ ಮನೆಯನ್ನು ಇಟ್ಟುಕೊಳ್ಳಬಹುದು. ಇದರಿಂದ ಸಮಸ್ಯೆ ಉಂಟಾಗುವುದಿಲ್ಲ.