ಬೆಂಗಳೂರು; ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿಯ ವಿಜಿನಾಪುರ ಗ್ರಾಮದ ಸರ್ವೆ ನಂ-92/1 ರಲ್ಲಿರುವ ರೂ 50 ಕೋಟಿಗೂ ಹೆಚ್ಚಿನ ಮೌಲ್ಯದ 3 ಎಕರೆ 16 ಗುಂಟೆ ಜಮೀನಿನ ಖಾತೆಯನ್ನು ಅಕ್ರಮವಾಗಿ ಬದಲಾವಣೆ ಮಾಡಲು ಆದೇಶಿಸಿದ ಆರೋಪದಲ್ಲಿ ಇಬ್ಬರು ಕೆ.ಎ.ಎಸ್ ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಲೋಕಾಯುಕ್ತ ಪೊಲೀಸರಿಗೆ ಪೂರ್ವಾನುಮತಿ ನೀಡಿದೆ.
ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್. ಪುರ ಹೋಬಳಿಯ ವಿಜಿನಾಪುರ ಗ್ರಾಮದ ಸರ್ವೇ ನಂಬರ್ 92/1 ರಲ್ಲಿ ಮೆ.ಗುರುಕಿರಣ್ ಎಂಟರ್ ಪ್ರೈಸಸ್ ಗೆ ಸೇರಿದ್ದ ಜಮೀನಿನ ಖಾತೆಯನ್ನು ತಮ್ಮ ಹೆಸರಿಗೆ ವರ್ಗಾಯಿಸುವಂತೆ ಕೋರಿ ಸೈಯದ್ ಇಸ್ಮಾಯಿಲ್ ಮತ್ತು ಇತರರು ಉಪ ವಿಭಾಗಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು . ಕಾನೂನು ಬದ್ದ ಹಕ್ಕು ಮತ್ತು ದಾಖಲೆಗಳಿಲ್ಲದಿದ್ದರೂ ಸರಿಯಾಗಿ ವಿಚಾರಣೆ ನಡೆಸದೆ, ಘನ ನ್ಯಾಯಾಲಯದ ತಿರ್ಪುಗಳನ್ನು ಪರಿಗಣಿಸದೆ ಅಧಿಕಾರ ದುರುಪಯೋಗಪಡಿಸಿ ಭ್ರಷ್ಟಾಚಾರ ಎಸಗಿರುವುದು ಕಂಡುಬಂದಿರುವ ಕಾರಣ ಸದ್ಯ ಅಮಾನತ್ತಿನಲ್ಲಿರುವ ಬೆಂಗಳೂರು ಉತ್ತರ ಉಪ ವಿಭಾಗದ ಹಿಂದಿನ ಉಪ ವಿಭಾಗಾಧಿಕಾರಿ ಕೆ.ರಂಗನಾಥ್ ಮತ್ತು ಹಾಲಿ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿ ಆಗಿರುವ ಬೆಂಗಳೂರು ಪೂರ್ವ ತಾಲ್ಲೂಕ್ ತಹಶೀಲ್ದಾರ್ ಹುದ್ದೇಯಲ್ಲಿರುವ ಎನ್.ತೇಜಸ್ ಕುಮಾರ್ ವಿರುದ್ದ ಭ್ರಷ್ಟಚಾರ ನಿಯಂತ್ರಣ ಕಾಯ್ದೆಯಡಿ ದೂರು ದಾಖಲಿಸಿ ತನಿಖೆ ಆರಂಭಿಸಲು ಅನುಮತಿ ನೀಡಿ ಜನವರಿ 04 ರಂದು ಆದೇಶ ಹೊರಡಿಸಲಾಗಿದೆ.