Revenue Facts

ಮನೆಯ ಅಲಂಕಾರದ ಜೊತೆಗೆ ಮನಸ್ಸಿಗೆ ಮುದ ನೀಡಲು ಒಂದು ಪುಟ್ಟ ಮತ್ಸ್ಯಲೋಕವಿರಲಿ..

ಬೆಂಗಳೂರು, ಡಿ. 17: ಹಲವರಿಗೆ ಮನೆಯಲ್ಲಿ ಒಂದು ಫಿಶ್‌ ಟ್ಯಾಂಕ್‌ ಇಡಬೇಕು ಎಂಬ ಆಸೆ ಇರುತ್ತದೆ. ಆದರೆ, ಕೆಲವರು ಅದನ್ನು ಕ್ಲೀನ್‌ ಮಾಡುವುದು ಕಷ್ಟ. ಮೀನುಗಳನ್ನು ಜೋಪಾನ ಮಾಡಲಾಗದು. ಮನೆಯಲ್ಲಿ ಫಿಶ್‌ ಟ್ಯಾಂಕ್‌ ಇದ್ದರೆ, ಕೆಲಸ ಹೆಚ್ಚು ಎಂದೆಲ್ಲಾ ತಿಳಿದು, ಆಸೆಯನ್ನು ಆಸೆಯಾಗಿಯೇ ಇಟ್ಟುಕೊಂಡಿರುತ್ತಾರೆ. ಆದರೆ, ಮನೆಯಲ್ಲಿ ಫಿಶ್‌ ಟ್ಯಾಂಕ್‌ ಇದ್ದರೆ, ಮನೆ, ಮನಗಳಿಗೆ ಆಹ್ಲಾದಕರ ಹಾಗೂ ಆರೋಗ್ಯಕರವಾದ ವಾತಾವರಣವಿರುತ್ತದೆ. ಗಾಜಿನೊಳಗೆ ಬಣ್ಣ ಬಣ್ಣದ ಮೀನುಗಳು ಒಡಾಡಿಕೊಂಡಿದ್ದರೆ, ನೋಡುವವರು ಕೂಡ ಅಷ್ಟೇ ಆಕ್ಟೀವ್‌ ಆಗಿರುತ್ತಾರೆ. ಅಕ್ವೇರಿಯಂ ಯಾವ ಆಕಾರದ್ದೇ ಇದ್ದರೂ ಅದೊರಳಿರು ಮೀನಿನ ಲೋಕ ನಿಮ್ಮನ್ನು ಸದಾ ಆಕರ್ಷಿಸುತ್ತಿರುತ್ತದೆ.

ದೊಡ್ಡ ಅಕ್ವೇರಿಯಂ ಇದ್ದರೆ ಅದೊರಳಗೆ ಬಣ್ಣ ಬಣ್ಣದ ಕಲ್ಲುಗಳು, ಮರಳು, ಹಸಿರು ಬಣ್ಣದ ಗಿಡ-ಬಳ್ಳಿಗಳು, ನೀರು, ಮಿಣ ಮಿಣ ಎನ್ನುವ ದೀಪಗಳು, ಸ್ವಚ್ಛಂಧವಾಗಿ ನೀರಿನೊಳಗೆ ಈಜಾಡುವ ಪುಟಾಣಿ ಮೀನುಗಳು, ಆಮ್ಲಜನಕದ ಯಂತ್ರದಿಂದ ಮೂಡುವ ಗುಳ್ಳೆಗಳು ಇವೆಲ್ಲವೂ ನೋಡಿದಷ್ಟು ಹೊಸತರಂತೆ ಕಾಣುತ್ತವೆ. ಮತ್ತೆ ಮತ್ತೆ ಆ ಮೀನುಗಳ ಚಲನವಲನಗಳನ್ನು ನೋಡಬೇಕು ಎನಿಸುತ್ತಿರುತ್ತವೆ. ನಿಮ್ಮ ಮನೆಗೆ ಎಷ್ಟು ಗಾತ್ರದ ಅಕ್ವೇರಿಯಂ ಬೇಕು. ಅದರ ಆಕಾರ ಹೇಗಿದ್ದರೆ ಚೆನ್ನಾ ಎಂಬುದರ ಬಗ್ಗೆ ತಿಳಿದು, ತಂದರೆ ಸೂಕ್ತ.

 

 

ಗೋಲ್ಡ್‌ಫಿಷ್, ಜೆಬ್ರಾ, ಗಪ್ಪಿ, ಕೊಯ್‌, ಆಸ್ಕರ್, ವೈಟ್‌ ಕ್ಲೌಡ್, ಬ್ಲ್ಯಾಕ್‌ ಟೈಗರ್‌ ಆಸ್ಕರ್‌ ಫಿಷ್, ರೆಡ್‌ ರಾಸ್ಬೋರ, ಕಿಚ್ಲಿಡ್‌, ಗ್ರಾಸ್‌ ಕಾರ್ಪ್‌ಫಿಷ್, ಇರೆ ನಿಯಾನ್, ಮಲಬಾರ್‌ ಪಫರ್, ವೈಟ್‌ ಆ್ಯಂಡ್‌ ರೆಡ್‌ ಕ್ಯಾಪ್‌ ಫಿಷ್, ಸ್ವಾರ್ಡ್‌ ಟೇಲ್‌ ಹೀಗೆ 22ಕ್ಕೂ ಅಧಿಕ ಬಗೆಯ ಮೀನುಗಳಿವೆ. ಇವುಗಳಲ್ಲಿ ನಿಮ್ಮ ಮನೆಯ ಅಕ್ವೇರಿಯಂಗೆ ಯಾವುದು ಸೂಕ್ತ ಎಂಬುದನ್ನು ಗಮನದಲ್ಲಿಟ್ಟುಕೊಂಡು ಮೀನುಗಳನ್ನು ಆರಿಸಿಕೊಳ್ಳಿ. ಇವುಗಳಲ್ಲಿ ಸಹಬಾಳ್ವೆ ನಡೆಸುವಂತಹ ಮೀನುಗಳನ್ನು ಮಾತ್ರವೇ ಖರೀದಿಸಿ, ಇಲ್ಲದಿದ್ದರೆ, ಒಂದು ಜಾತಿಯ ಮೀನು ಮತ್ತೊಂದನ್ನು ತಿನ್ನುವ ಅಥವಾ ಕಚ್ಚುವ ಸಾಧ್ಯತೆಗಳಿರುತ್ತವೆ. ಒಂದೇ ಅಕ್ವೇರಿಯಂನಲ್ಲಿ ಬಿಡುವುದರಿಂದ ಅವುಗಳ ಗುಣ ಸ್ವಾಭಾವಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಮೀನುಗಳನ್ನು ಆಯ್ಕೆ ಮಾಡಿ.

 

ಇನ್ನು ಈ ಮೀನುಗಳಿಗೆ 20 ರಿಂದ ಸಾವಿರ ರೂಪಾಯಿಗಳವರೆಗೆ ಬೆಲೆ ಬಾಳುತ್ತವೆ. ನಿಮ್ಮ ಬಜೆಟ್‌ ಗೆ ಹೊಂದಿಕೆಯಾಗುವಂತೆ ಆಯ್ಕೆ ಮಾಡಿ. ಇನ್ನು ಇವಕ್ಕೆ ಆಹಾರದ ಬಗ್ಗೆ ಯೋಚಿಸುವಂತಿಲ್ಲ. ಮೀನುಗಳಿಗಾಗಿಯೇ ಆಹಾರವೂ ಸಿಗುತ್ತದೆ. ಮೀನುಗಳಿಗೆ ಒಂದೊಂದು ದಿನ ಆಹಾರವಿಲ್ಲದಿದ್ದರೂ ಪರವಾಗಿಲ್ಲ. ಅಡ್ಜಸ್ಟ್‌ ಮಾಡಿಕೊಳ್ಳುತ್ತವೆ. ಅಕ್ವೇರಿಯಂ ಅನ್ನು ಮೇನ್‌ ಟೈನ್‌ ಮಾಡುವುದು ಕೂಡ ಕಷ್ಟವೇನಲ್ಲ. ಏಕೆಂದರೆ, ವಾರಕ್ಕೊಮ್ಮೆ ಇದಕ್ಕೆ ಸ್ವಚ್ಛ ನೀರನ್ನು ಬಿಡಬಹುದು. ಟ್ಯಾಂಕ್‌ ನಲ್ಲಿ ಇರುವ ನೀರನ್ನು ಖಾಲಿ ಮಾಡಿ ಫ್ರೆಶ್‌ ನೀರನ್ನು ತುಂಬಬಹುದು. 10 ದಿನಗಳಿಗೊಮ್ಮೆಯೂ ನೀರನ್ನು ಬದಲಿಸಿದರೆ ಆಯ್ತು.

ಮೊದಲಿಗೆ ಮೀನನ್ನು ಬೇರೆ ನೀರಿನ ಪಾತ್ರೆಗೆ ಹಾಕಿ. ನಂತರ ಅಕ್ವೇರಿಯಂ ನಲ್ಲಿರುವ ನೀರನ್ನು ಚೆಲ್ಲಿ. ಅಕ್ವೇರಿಯಂನನ್ನು ಸ್ವಚ್ಛಗೊಳಿಸಿ, ಬಳಿಕ ಹೊಸ ನೀರನ್ನು ತುಂಬಿಸಿ. ಬಳಿಕವಷ್ಟೇ ಮೀನನ್ನು ಬಿಡಿ. ನಿಮ್ಮ ಅಕ್ವೇರಿಯಂ ಬಹಳ ದೊಡ್ಡದಿದ್ದು, ಅದರಲ್ಲಿ ಮರಳು, ಗಿ-ಬಳ್ಳಿಗಳು, ಕಲ್ಲುಗಳಿದ್ದರೆ, ಸ್ವಚ್ಛ ಮಾಡುವಾಗಲೂ, ಪುನಃ ಜೋಡಿಸುವಾಗಲು ಸ್ವಲ್ಪ ಹೆಚ್ಚಿನ ಕೆಲಸ ಹಾಗೂ ಜಾಗರೂಕರಾಗಿರಿ. ನಿತ್ಯ ನಿಮಗೆ ಬೋರ್‌ ಎನಿಸಿದಾಗ ಆ ಮೀನುಗಳ ಜೊತೆಗೆ ಮಾತನಾಡಬಹುದು. ಅವುಗಳ ಚಲನವಲನಗಳನ್ನು ನೋಡುತ್ತಾ ಸ್ವಲ್ಪ ಸಮಯ ಕಳೆದರೆ ನಿಮ್ಮ ಮನಸ್ಸಿಗೂ ಕೊಂಚ ಉಲ್ಲಾಸ ಸಿಗುತ್ತದೆ.

Exit mobile version