Revenue Facts

ದೇಶದ ದುಬಾರಿ ಪೆಂಟ್ ಹೌಸ್ ಅನ್ನು ಖರೀದಿಸಿದ ವೆಲ್ಸ್ ಪನ್ ಗ್ರೂಪ್ ನ ಅಧ್ಯಕ್ಷ

ಬೆಂಗಳೂರು, ಫೆ. 13 : ದೇಶದ ಅತೀ ದುಬಾರಿ ಹಾಗೂ ಐಷಾರಾಮಿ ಪೆಂಟ್ ಹೌಸ್ ಅನ್ನು ಕಳೆದ ವಾರ ವೆಲ್ಸ್ ಪನ್ ನ ಅಧ್ಯಕ್ಷ ಬಿಕೆ ಗೋಯೆಂಕಾ ಅವರು ಖರೀದಿಸಿದ್ದಾರೆ. ಬರೋಬ್ಬರಿ 240 ಕೋಟಿ ರೂಪಾಯಿಗೆ ಐಷಾರಾಮಿ ಪೆಂಟ್ ಹೌಸ್ ಅನ್ನು ಖರೀದಿಸಲಾಗಿದೆ. ಮುಂಬೈನ ವರ್ಲಿಯಲ್ಲಿರುವ ಅನ್ನಿ ಬೆಸೆಂಟ್ ರಸ್ತೆಯ ತ್ರೀ ಸಿಕ್ಸ್ಟಿ ವೆಸ್ಟ್ ನಲ್ಲಿ ಈ ಪೆಂಟ್ ಹೌಸ್ ಇದೆ. ಅಷ್ಟಕ್ಕೂ ಹಲವರಲ್ಲಿ ಪೆಂಟ್ ಹೌಸ್ ಎಂದರೇನು ಎಂಬ ಪ್ರಶ್ನೆ ಕಾಡುತ್ತಿರುತ್ತದೆ. ಅದಕ್ಕೆ ಸುಲಭವಾದ ಉತ್ತರ ಎಂದರೆ, ಗಗನ ಚುಂಬಿ ಕಟ್ಟದಲ್ಲಿ ಅತೀ ಎತ್ತರದಲ್ಲಿರುವ ಮನೆಗೆ ಪೆಂಟ್ ಹೌಸ್ ಎಂದು ಕರೆಯಲಾಗುತ್ತದೆ.

ಈ ಪೆಂಟ್ ಹೌಸ್ ಅನ್ನು ಸದ್ಯ ವೆಲ್ಸ್ ಪನ್ ನ ಅಧ್ಯಕ್ಷ ಬಿಕೆ ಗೋಯೆಂಕಾ ಅವರು 240 ರೂಪಾಯಿ ಕೋಟಿ ಕೊಟ್ಟು ಖರೀದಿ ಮಾಡಿದ್ದಾರೆ. ಇದು ಭಾರತದ ಅತೀ ದುಬಾರಿ ಪೆಂಟ್ ಹೌಸ್ ಮಾರಾಟವಾಗಿದೆ. ಇದು ಟವರ್ ಬಿ ವಿಭಾಗದ 63, 64 ಮತ್ತು 65ನೇ ಮಹಡಿಯಲ್ಲಿ ಈ ಪೆಂಟ್ ಹೌಸ್ ಇದೆ. ಈ ಪೆಂಟ್ ಹೌಸ್ 30,000 ಸಾವಿರ ಚದರ ಅಡಿ ಇದ್ದು, ಇದು ಸರ್ಕಾರದ ಕೊಳೆಗೇರಿ ಪುನರ್ವಸತಿ ಯೋಜನೆಯಡಿ ರೂಪಿಸಿರುವ 300 ಚದರ ಅಡಿಯ ವಠಾರಕ್ಕಿಂತಲೂ 100 ಪಟ್ಟು ಪೆಂಟ್ ಹೌಸ್ ಹೆಚ್ಚಿದೆ. ಇದೇ ಪೆಂಟ್ ಹೌಸ್ ನಲ್ಲಿ ಖರೀದಿದಾರರು ವಾಸ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಇನ್ನು ದೇಶದಲ್ಲಿ ಅತೀ ದುಬಾರಿ ಬೆಲೆಗೆ ಮಾರಾಟವಾದ ಅಪಾರ್ಟ್‌ ಮೆಂಟ್‌ ಗಳ ಪೈಕಿ ಇದೂ ಒಂದಾಗಿದೆ. ತ್ರೀ ಸಿಕ್ಸ್‌ಟಿ ವೆಸ್ಟ್‌ ಟವರ್‌ ಗೆ ಹೊಂದಿಕೊಂಡಿರುವ ಮತ್ತೊಂದು ಟವರ್‌ ನ ಪೆಂಟ್‌ ಹೌಸ್‌ ಅನ್ನು ಬಿಲ್ಡರ್ ಖರೀದಿಸಿದ್ದಾರೆ. ಉದ್ಯಮಿ ಹಾಗೂ ಬಿಲ್ಡರ್ ಸುಧಾಕರ್‌ ಶೆಟ್ಟಿ ಇಬ್ಬರ ಸಹ ಭಾಗಿತ್ವದಲ್ಲಿ ಆರ್.ಎಸ್. ಎಂಟರ್ಪ್ರೈಸಸ್ ಲಿಮಿಟೆಡ್ನಿಂದ ಒಬೆರಾಯ್ ಅವರು ಈ ಪೆಂಟ್‌ ಹೌಸ್‌ ಅನ್ನು ಖರೀದಿಸಿದ್ದಾರೆ. ಇದಕ್ಕೂ ಕೂಡ 240 ಕೋಟಿ ರೂ. ಗೆ ಈ ಪೆಂಟ್‌ ಹೌಸ್‌ ಅನ್ನು ಖರೀದಿಸಲಾಗಿದೆ.

ಈ ಪೆಂಟ್‌ ಹೌಸ್‌ ಅನ್ನು ಓಸಿಸ್ ರಿಯಾಲ್ಟಿ ಕಂಪನಿ ಪಾಲುದಾರಿಕೆಯಲ್ಲಿ ನಿರ್ಮಾಣ ಮಾಡಿದೆ. ಇದನ್ನು ಈಗ ಒಬೆರಾಯ್ ರಿಯಾಲ್ಟಿ ವಹಿಸಿಕೊಂಡಿದೆ. ಒಬೆರಾಯ್‌ ರಿಯಾಲ್ಟಿ ತ್ರೀ ಸಿಕ್ಸ್‌ಟಿ ವೆಸ್‌ ಅನ್ನು 4000 ಕೋಟಿಗೆ ಪಡೆದಿದೆ. ಇದರಲ್ಲಿ 5.25 ಲಕ್ಷ ಚದರ ಅಡಿಯಲ್ಲಿ 63 ಅಪಾರ್ಟ್‌ ಮೆಂಟ್‌ ಕೂಡ ಸೇರಿದೆ. ಇನ್ನು ಏಪ್ರಿಲ್ 2023 ರಂತೆ ಸೆಕ್ಷನ್ 54 ರ ಅಡಿಯಲ್ಲಿ ಹೂಡಿಕೆ ಮಾಡಬಹುದಾದ ಗರಿಷ್ಠ ಬಂಡವಾಳ ಲಾಭಗಳು 10 ಕೋಟಿಗಿಂತ ಹೆಚ್ಚಿನ ಬಂಡವಾಳ ಲಾಭವು ತಕ್ಷಣದ ತೆರಿಗೆಗೆ ಒಳಪಟ್ಟಿರುತ್ತದೆ.

Exit mobile version