ದೃಶ್ಯ 01:
ಒಂದು ಪ್ರದೇಶದಲ್ಲಿ A ಎಂಬ ವ್ಯಕ್ತಿಯ ಎರಡು ಎಕರೆ ಖಾಸಗಿ ಜಮೀನು ಇದೆ. ಪಕ್ಕದಲ್ಲಿ B ಎಂಬ ವ್ಯಕ್ತಿಯ ಐದು ಎಕರೆ ಆತನ ಸ್ವಂತ ಜಮೀನು ಇದ್ದು, ಅದಕ್ಕೆ ಹೋಗಬೇಕಾದರೆ A ಎಂಬ ವ್ಯಕ್ತಿಯ ಜಮೀನಿನಲ್ಲಿಯೇ ಹಾದು ಹೋಗಬೇಕು. ಉಳಿದ ಬೇರೆ ಯಾವ ಕಡೆಯಿಂದಲೂ ಹೋಗಲು ಅವಕಾಶವೇ ಇಲ್ಲ. A ಹೆಸರಿನ ವ್ಯಕ್ತಿ B ಗೆ ದಾರಿ ಬಿಡಲು ಒಪ್ಪುತ್ತಿಲ್ಲ. ಹಣ ಕೊಡುತ್ತೇನೆ ಎಂದರೂ ಸುತರಾಂ ಸಮ್ಮತಿ ಸೂಚಿಸಲಿಲ್ಲ. ಇಂತಹ ಸಂದರ್ಭದಲ್ಲಿ A ವ್ಯಕ್ತಿಯ ಜಮೀನಿನಲ್ಲಿ ದಾರಿ ಬಿಡಿಸಿಕೊಳ್ಳುವುದು ಹೇಗೆ ? B ವ್ಯಕ್ತಿ ತನ್ನ ಜಮೀನಿಗೆ ಹೋಗಲು A ವ್ಯಕ್ತಿಗೆ ಸೇರಿದ ಜಾಗದಲ್ಲಿ ದಾರಿ ಬಿಡಿಸಿಕೊಳ್ಳಲು ಅರ್ಹನೇ ?
ದೃಶ್ಯ 02:
ಅದೊಂದು ದೊಡ್ಡ ಲೇಔಟ್. ಅಲ್ಲಿ ಒಬ್ಬ ನಿವೇಶನ ಮಾಲೀಕನ ಜಾಗದಲ್ಲಿ ಬೋರ್ ವೆಲ್ ಕೊರೆಯಲಾಗಿದೆ. ಬೇರೆ ಯಾವುದೇ ಮೂಲದಿಂದ ಆ ಲೇಔಟ್ ಗೆ ಕುಡಿಯುವ ನೀರು ಪೂರೈಸಲು ಅವಕಾಶವಿಲ್ಲ. ಇಂತಹ ಸಂದರ್ಭದಲ್ಲಿ ಎ ವ್ಯಕ್ತಿಯ ನಿವೇಶನದಲ್ಲಿನ ಬೋರ್ ವೆಲ್ ನೀರು ಇಡೀ ಬಡಾವಣೆಗೆ ಬಿಡುವ ಸಾರ್ವಜನಿಕ ಉದ್ದೇಶ ಸರ್ಕಾರದ್ದು. ಈ ಬೋರ್ ವೆಲ್ ನೀರು ಪೂರೈಸಲು ಅಕ್ಕ ಪಕ್ಕದ ನಿವೇಶನಗಳ ಜಾಗದಲ್ಲಿ ಪೈಪ್ ಲೈನ್ ಅಳವಡಿಸುಸಲೇಬೇಕು. ಆದರೆ ನಿವೇಶನದಾರರು ತಮ್ಮ ನಿವೇಶನಗಳಲ್ಲಿ ಪೈಪ್ ಲೈನ್ ಅಳವಡಿಸಲು ನಿರಾಕರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಯ ನಿವೇಶನದಲ್ಲಿರುವ ಬೋರ್ ವೆಲ್ ನೀರು ಯಾರಿಗೂ ಬಿಡದಂತೆ ನಿರ್ಧಾರ ಕೈಗೊಳ್ಳುವುದು ಸರಿಯೇ ? ಅಥವಾ ಆತ ಕಡ್ಡಾಯವಾಗಿ ನೀರನ್ನು ಪೂರೈಸಲು ಸಮ್ಮತಿಸಬೇಕಾ ? ಇನ್ನೂ ಅಕ್ಕ ಪಕ್ಕದ ನಿವೇಶನದಾರರ ಜಾಗದಲ್ಲಿ ಪೈಪ್ ಲೈನ್ ಅಳವಡಿಸಲು ಅನುಮತಿ ನೀಡದಿದ್ದರೆ ಮುಂದಿರುವ ಪರಿಹಾರ ಮಾರ್ಗ ಏನು ?
ಒಬ್ಬ ವ್ಯಕ್ತಿಗೆ ಸೇರಿದ ಆಸ್ತಿಯನ್ನು ಅನುಭೋಗಿಸುವುದು ಅವನ ಹಕ್ಕು. ಆದರೆ ಅದಕ್ಕೆ ಮತ್ತೊಬ್ಬ ವ್ಯಕ್ತಿಗೆ ಸೇರಿದ ಜಾಗದ ಮೂಲಕವೇ ಹಾದು ಹೋಗುವಂತಿತ್ತಿದ್ದರೆ ಆತನಿಗೆ ಜಾಗವನ್ನು ಬಿಡಬೇಕು. ಬಿಡದಿದ್ದರೆ ನ್ಯಾಯಾಲಯದ ಮೂಲಕವೇ ಬಿಡಿಸಿಕೊಳ್ಳಲು ಅವಕಾಶವಿದೆ. ಇದರ ಬಗ್ಗೆ Indian Easesment act 1882 ಹೇಳುತ್ತದೆ.
ಬಡವರಿಗೆ ಕೈಗೆಟುಕುವ ದರದಲ್ಲಿ ಮನೆ: ಪಂಜಾಬ್‌ನಲ್ಲಿ ಹೊಸ ವಸತಿ ನೀತಿಗೆ ಚಿಂತನೆ
ಇಂಡಿಯನ್ ಈಸ್‌ಮೆಂಟ್ ಆಕ್ಟ್ 1882 ವಿವರ : ಇಸಸ್‌ಮೆಂಟ್ ಎಂದರೆ ಕನ್ನಡದಲ್ಲಿ ಸರಾಗಗೊಳಿಸುವಿಕೆ ಎಂದರ್ಥ. ಇದು ವ್ಯಕ್ತಿಗಳಿಗೆ ಸೇರಿದ ವಸ್ತು/ ಆಸ್ತಿಗಳ ಮೇಲಿನ ಹಕ್ಕು ಹಾಗೂ ಅಕ್ಕ ಪಕ್ಕದವರಿಗೆ ದಾರಿಯ ಮೇಲಿನ ಹಕ್ಕುಗಳ ಬಗ್ಗೆ ಹೇಳುತ್ತದೆ.
ಒಬ್ಬ ಖಾಸಗಿ ವ್ಯಕ್ತಿಯ ಜಾಗದಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ರಸ್ತೆ ಮಾಡಬೇಕಿದ್ದರೆ ಖಾಸಗಿ ವ್ಯಕ್ತಿ ಜಾಗ ಬಿಡಬೇಕು. ಖಾಸಗಿ ಉದ್ದೇಶಕ್ಕಾಗಿಯಾಗಿದ್ದರೂ ಬಿಡಲೇಬೇಕು. ಈಸ್ಮೆಂಟ್ ಕಡ್ಡಾಯವಾಗಿ ಕೊಡಬೇಕಾ? ಅಥವಾ ಕೊಡಬಾರದಾ? ಎಂಬ ಪ್ರಶ್ನೆಗೆ ಇದನ್ನು ಕಡ್ಡಾಯವಾಗಿ ಕೊಡಲೇಬೇಕಾದ ಹಕ್ಕು ಎನ್ನುತ್ತದೆ ಈಸ್‌ಮೆಂಟ್ ಆಕ್ಟ್. ಈಸ್‌ಮೆಂಟ್ ಆಕ್ಟ್ ನ ಪ್ರಕಾರ ದಾರಿ ಬಿಡಿಸಿಕೊಳ್ಳುವನನ್ನು ಡಾಮಿನೆಂಟ್ ಹೆರಿಟೇಜ್ ( ಆದಿ ಭೋಗಿ) ಎಂದು ಕರೆಯುತ್ತೇವೆ. ದಾರಿ ಬಿಡುವ ವ್ಯಕ್ತಿಯನ್ನು ಸರ್ವೆಂಟ್ ಹೆರಿಟೇಜ್ ( ಅಧಿಸಾಪತಿ) ಎಂದು ಕರೆಯುತ್ತೇವೆ.
ರೇರಾ ಅನುಷ್ಠಾನ: ಅರ್ಧದಷ್ಟು ಕೇಸ್‌ಗಳು ಇತ್ಯರ್ಥಕ್ಕೆ ಬಾಕಿ
ಕಡ್ಡಾಯವಾಗಿ ದಾರಿ ಬಿಡಲೇಬೇಕು:
ಇನ್ನು ಗ್ರಾಮ ನಕ್ಷೆಗಳಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ ಬಿಟ್ಟಿರುವ ಬಂಡಿದಾರಿ, ಕಾಲುದಾರಿ ರಸ್ತೆಗಳನ್ನು ಕಡ್ಡಾಯವಾಗಿ ಬಿಡಲೇಬೇಕು. ಇದನ್ನು ಎಲ್ಲರೂ ಉಪಯೋಗಿಸಬೇಕು. ಈ ಜಾಗದಲ್ಲಿ ನಿವೇಶನ ಮಾಡುವುದು, ಒತ್ತುವರಿ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ದಾವೆ ಹೂಡಬಹುದು. ರಾಜಕಾಲುವೆ, ಬಂಡಿದಾರಿ ಗ್ರಾಮ ನಕ್ಷೆಯಿಂದ ಬೇರಡೆ ಸ್ಥಳಾಂತರಕ್ಕೆ ಕಾನೂನಿನಲ್ಲಿ ಅವಕಾಶವಿದೆ. ಬದಲಾವಣೆ ಮಾಡುವ ಉದ್ದೇಶ ಸಾರ್ವಜನಿಕ ಉಪಯೋಗ ಇರಬೇಕು. ಇಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಾಧಿಕಾರಕ್ಕೆ ಸಾರ್ವಜನಿಕ ಮನವಿ ನೀಡಿ ಬದಲಾವಣೆಗೆ ಕೋರಬಹುದು. ಸಂಬಂಧಪಟ್ಟ ಪ್ರಾಧಿಕಾರ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತದೆ. ಪ್ರಸ್ತಾಪ ಪರಿಶೀಲಿಸಿ ಈಸ್‌ಮೆಂಟ್ ಆಕ್ಟ್ ನ ನಿಯಮಗಳ ಅಡಿ ಅದನ್ನು ಸರ್ಕಾರ ಬದಲಾವಣೆ ಮಾಡಲು ಅವಕಾಶವಿದೆ.
ಇನ್ನು ಕೆಲವು ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಜಮೀನಿನಲ್ಲಿ ಇಬ್ಬರು ಬಿಲ್ಡರ್ ಗಳು ಲೇಔಟ್ ನಿರ್ಮಾಣ ಮಾಡಿದ್ದಾರೆ ಎಂದಿಟ್ಟುಕೊಳ್ಳಿ. ಎ ಬಿಲ್ಡರ್ ನಿರ್ಮಿಸಿದ ಲೇಔಟ್ ಗೆ ಹೋಗಬೇಕಾದರೆ ಬಿ ಬಿಲ್ಡರ್ ನ ಲೇಔಟ್ ನ ದಾರಿ ಮೂಲಕವೇ ಹಾದು ಹೋಗಬೇಕು. ಇಂತಹ ಸಂದರ್ಭದಲ್ಲಿ ಎ ಬಿಲ್ಡರ್ ಹಣ ಕೊಟ್ಟು ಬಿ ಬಿಲ್ಡರ್ ನಿಂದ ಈಸ್‌ಮೆಂಡ್ ಡೀಡ್ ಮಾಡಿಸಿಕೊಂಡು ದಾರಿ ಬಿಡಬಹುದು. ದಾರಿ ಬಿಟ್ಟಿದ್ದಕ್ಕೆ ಅದರಕ್ಕೆ ಪರಿಹಾರವಾಗಿ ಬಿ ಬಿಲ್ಡರ್ ಹಣ ಪಡೆಯಬಹುದು. ಇದಕ್ಕೆ ಸಂಬಂಧಿಸಿದಂತೆ ಒಡಂಬಡಿಕೆ ಸಹ ಮಾಡಿಕೊಳ್ಳಬಹುದು. ಇಲ್ಲವೇ ಉಚಿತವಾಗಿ ಸಹ ಬಿಡಬಹುದು.
ಇದಕ್ಕೆ ಸಂಬಂಧಪಟ್ಟಂತೆ ಮಾಡಿಕೊಲ್ಳುವ ಡೀಡ್ ನ್ನು ಈಸ್‌ಮೆಂಟ್ ಆಫ್ ಡೀಡ್ ಎಂದು ಕರೆಯಲಾಗುತ್ತದೆ. ಡೀಡ್ ಆಫ್ ಈಸ್‌ಮೆಂಟ್ ಸರ್ಕಾರಕ್ಕೆ ಬರೆದುಕೊಟ್ಟರೆ ಅದಕ್ಕೆ ಪೂರ್ತಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಯಲ್ಲಿ ವಿನಾಯಿತಿ ಸಿಗುತ್ತದೆ. ಒಂದು ವೇಳೆ ಖಾಸಗಿ ವ್ಯಕ್ತಿಗಳ ನಡುವೆ ಅವರ ವೈಯಕ್ತಿಕ ಉಪಯೋಗಕ್ಕೆ ಆಗಿದ್ದರೆ ಅಂತಹ ಸಂದರ್ಭದಲ್ಲಿ ಉಪ ನೋಂದಣಾಧಿಕಾರಿಗಳಿಗೆ ಅದರ ಮೌಲ್ಯಕ್ಕೆ ಅನುಗುಣವಾಗಿ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಲೇಬೇಕು.
ಸಾರ್ವಜನಿಕ ಮತ್ತು ಖಾಸಗಿ ಈಸ್‌ಮೆಂಟ್ ದಸ್ತಾವೇಜುಗಳನ್ನು ಕಡ್ಡಾಯವಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಖಾಸಗಿ ವ್ಯಕ್ತಿಗಳು ಸಹ ಡೀಡ್ ಆಫ್ ಈಸ್‌ಮೆಂಟ್ ಸಾರ್ವಜನಿಕ ಉದ್ದೇಶಕ್ಕಾಗಿ ಎಂದು ಬರೆದರೆ ಅದಕ್ಕೆ ಮುದ್ರಾಂಕ ಮತ್ತು ನೋಂದಣಿ ಶುಲ್ಕ ವಿನಾಯಿತಿ ಪಡೆಯಲು ಅವಕಾಶ ಇರುತ್ತದೆ. ಮೇಲಿನ ಪ್ರಸಂಗದಲ್ಲಿ ಎ ವ್ಯಕ್ತಿಯ ಜಮೀನು ಮೂಲಕವೇ ಬಿ ಎಂಬ ವ್ಯಕ್ತಿ ತನ್ನ ಜಮೀನಿಗೆ ಹೋಗಬೇಕು.
ಇಂತಹ ಸಂದರ್ಭದಲ್ಲಿ ಎ ವ್ಯಕ್ತಿ ದಾರಿ ಬಿಡಲು ನಿರಾಕರಿಸುವಂತಿಲ್ಲ. ನಿರಾಕರಿಸಿದರೆ ಈಸ್‌ಮೆಂಟ್ ಆಕ್ಟ್ ಅಡಿಯಲ್ಲಿ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಬಹುದು. ನ್ಯಾಯಾಲಯ ನೀಡಿದ ತೀರ್ಪನ್ನು ಇಬ್ಬರೂ ಖಾಸಗಿ ವ್ಯಕ್ತಿಗಳು ಪಾಲಿಸಬೇಕಾಗುತ್ತದೆ. ಎ ಕಡ್ಡಾಯವಾಗಿ ದಾರಿ ಬಿಡಬೇಕಾಗುತ್ತದೆ. ಆದರೆ ಅದಕ್ಕೆ ಪ್ರತಿಯಾಗಿ ನಿಗದಿ ಮಾಡುವ ಪರಿಹಾರ ಅಥವಾ ದಾರಿಯ ಬಳಕೆ ಶುಲ್ಕವನ್ನು ಬಿ ಎಂಬ ವ್ಯಕ್ತಿ ಪಾವತಿಸಬೇಕಾಗುತ್ತದೆ. ಇನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಒಬ್ಬರ ಖಾಸಗಿ ಜಮೀನಿನಲ್ಲಿ ಪೈಪ್ ಲೈನ್ ಅಥವಾ ಇತರೆ ಯಾವುದೇ ಡ್ರೈನೇಜ್ ಕಾರ್ಯ ಮಾಡುವಾಗ ಅದಕ್ಕೆ ಅವಕಾಶ ನಿರಾಕರಿಸುವಂತಿಲ್ಲ ಎಂದು ಈಸ್‌ಮೆಂಟ್ ಆಕ್ಟ್ ಹೇಳುತ್ತದೆ.