Revenue Facts

‘ಇಂಡಿಯಾ’ ನಿಯೋಗದಿಂದ ಇಂದು ಮಣಿಪುರ ಭೇಟಿ

‘ಇಂಡಿಯಾ’ ನಿಯೋಗದಿಂದ ಇಂದು ಮಣಿಪುರ ಭೇಟಿ

ಬೆಂಗಳೂರು ಜು . 29 :;ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾದ 16 ಪಕ್ಷಗಳ 21 ಸಂಸದರ ನಿಯೋಗ ಇಂದು ಮತ್ತು ನಾಳೆ (ಜುಲೈ 29 ಮತ್ತು 30) ಮಣಿಪುರಕ್ಕೆ ಭೇಟಿ ನೀಡಲಿದೆ.ಇಂಡಿಯಾ ನಾಯಕರು ಹಿಂಸಾಚಾರ ಪೀಡಿತ ಮಣಿಪುರದ ನೈಜ ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡಲಿದ್ದಾರೆ, 20 ನಾಯಕರ ನಿಯೋಗದಲ್ಲಿ ಕಾಂಗ್ರೆಸ್ ನಾಯಕರಾದ ಟಿಎಂಸಿಯ ಸುಶ್ಮಿತಾ ದೇವ್, ಎಎಪಿಯ ಸುಶೀಲ್ ಗುಪ್ತಾ, ಶಿವಸೇನೆ (ಯುಬಿಟಿ) ಅರವಿಂದ್ ಸಾವಂತ್, ಡಿಎಂಕೆಯ ಕನಿಮೋಳಿ ಕರುಣಾನಿಧಿ, ಜೆಡಿಯು ಮುಖಂಡರಾದ ರಾಜೀವ್ ರಂಜನ್ ಸಿಂಗ್ ಮತ್ತು ಅನೀಲ್ ಪ್ರಸಾದ್ ಹೆಗ್ಡೆ, ಸಂದೋಶ್ ಕುಮಾರ್ (ಸಿಪಿಐ), ಎಎ ರಹೀಮ್ (ಸಿಪಿಐಎಂ), ಮನೋಜ್ ಕುಮಾರ್ ಝಾ (ಆರ್ಜೆಡಿ), ಜಾವೇದ್ ಅಲಿ ಖಾನ್ (ಸಮಾಜವಾದಿ ಪಕ್ಷ), ಮಹುವಾ ಮಾಜಿ (ಜೆಎಂಎಂ), ಪಿಪಿ ಮೊಹಮ್ಮದ್ ಫೈಜಲ್ (ಎನ್ಸಿಪಿ), ಇಟಿ ಮೊಹಮ್ಮದ್ ಬಶೀರ್ (ಐಯುಎಂಎಲ್), ಎನ್ಕೆ ಪ್ರೇಮಚಂದ್ರನ್ (ಆರ್ಎಸ್ಪಿ). ರವಿಕುಮಾರ್ (ವಿಸಿಕೆ), ತಿರು ಥೋಲ್ ತಿರುಮಾವಲವನ್ (ವಿಸಿಕೆ) ಮತ್ತು ಜಯಂತ್ ಸಿಂಗ್ (ಆರ್ ಎಲ್ ಡಿ) ಇದ್ದಾರೆ.

ಕಾಂಗ್ರೆಸ್ ಸಂಸದ ನಾಸೀರ್ ಹುಸೇನ್ ಪ್ರಕಾರ ಇಂಡಿಯಾ ನಿಯೋಗ ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಮಧ್ಯಾಹ್ನದ ವೇಳೆಗೆ ಇಂಪಾಲ್‌ಗೆ ತಲುಪಲಿದ್ದಾರೆ.ಅಲ್ಲಿಂದ ರಾಜ್ಯದ ಗುಡ್ಡಗಾಡು ಪ್ರದೇಶಗಳು ಮತ್ತು ಕಣಿವೆಯಲ್ಲಿ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಜನರೊಂದಿಗೆ ಮಾತನಾಡಲಿದ್ದಾರೆ.ನಿಯೋಗವು ಭಾನುವಾರ ಮಣಿಪುರದ ರಾಜ್ಯಪಾಲೆ ಅನುಸೂಯಾ ಉಕೆ ಅವರನ್ನು ಭೇಟಿ ಮಾಡಲಿದೆ

Exit mobile version