Revenue Facts

ಕಡಿಮೆ ವೆಚ್ಚದ ಸ್ವಂತ ಮನೆ ಹೊಂದುವವರ ಸಂಖ್ಯೆ ಹೆಚ್ಚಳ!

ಕಡಿಮೆ ವೆಚ್ಚದ ಸ್ವಂತ ಮನೆ ಹೊಂದುವವರ ಸಂಖ್ಯೆ ಹೆಚ್ಚಳ!

ನಗರೀಕರಣ ಅಥವಾ ನಗರ ಜೀವನ ಶೈಲಿ ಭಾರತದಲ್ಲಿಯೂ ಹೆಚ್ಚಾಗುತ್ತಿದ್ದು, ಇಲ್ಲಿ ನಗರ ಪ್ರದೇಶದಲ್ಲಿ ಸ್ವಂತ ಮನೆ ಹೊಂದುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಶ್ರೀಮಂತ ವರ್ಗದವರು ಮಾತ್ರವಲ್ಲ, ಕಡಿಮೆ ಆದಾಯ ಹೊಂದಿರುವ, ಮಧ್ಯಮ ವರ್ಗದ ಜನರು ಸಹ ನಗರ ಪ್ರದೇಶದಲ್ಲಿ ತಮ್ಮದೇ ಸ್ವಂತ ಮನೆ ಹೊಂದುವ ಅಕಾಂಕ್ಷೆ, ಗುರಿಯನ್ನು ಹೊಂದಿದ್ದಾರೆ.

ದೇಶದ ಎಲ್ಲ ಜನರಿಗೆ ತಮ್ಮ ಸ್ವಂತ ಮನೆ ಕನಸನ್ನು ಪೂರೈಸಿಕೊಳ್ಳುವ ಸಲುವಾಗಿ ಸರ್ಕಾರವು ಹೊಸ ಹೊಸ ನೀತಿಗಳನ್ನು ಪರಿಚಯಿಸುತ್ತಾ ಬಂದಿದೆ. ಹೀಗಾಗಿ ತಮ್ಮ ಅನುಕೂಲಕ್ಕೆ ತಕ್ಕಂತೆ ಕಡಿಮೆ ವೆಚ್ಚದ ಮನೆಯನ್ನು ಹೊಂದುವವರ ಸಂಖ್ಯೆ ಹೆಚ್ಚಾಗಿದೆ. ಅಭಿವೃದ್ಧಿ ಹೊಂದುತ್ತಿರುವ ಭಾರತದಂತಹ ದೇಶದಲ್ಲಿ ಜನರಿಗೆ ಕಡಿಮೆ ವೆಚ್ಚದ ಮನೆಯ ಆಯ್ಕೆಗಳನ್ನು ನೀಡುವುದು ಅತಿ ಅಗತ್ಯವೂ ಹೌದು. ಹಾಗೇ ಕಡಿಮೆ, ಮಧ್ಯಮ ವರ್ಗ ಹಾಗೂ ಸಮಾಜದಲ್ಲಿ ದುರ್ಬಲ ವರ್ಗ ಎಂದು ಗುರುತಿಸಿಕೊಂಡಿರುವ ಜನರಿಗೆ ಅವರ ಕೈಗೆಟಕುವ ದರದಲ್ಲಿ ಕಡಿಮೆ ವೆಚ್ಚದ ವಸತಿ ಯೋಜನೆ ಸಂಖ್ಯೆ ಹೆಚ್ಚಾಗಿದೆ.

ಸಮೀಕ್ಷೆಯೊಂದರ ಪ್ರಕಾರ 600 ಮಿಲಿಯನ್‌ ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲ ವರ್ಗದ ಜನರು ಕಡಿಮೆ ವೆಚ್ಚದ ಮನೆಗಳನ್ನು ಹೆಚ್ಚು ಅವಲಂಭಿಸಿದ್ದು, ಈ ಮೂಲಕ ರಿಯಲ್‌ ಎಸ್ಟೇಟ್‌ ಕ್ಷೇತ್ರದ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ರಿಯಾಲ್ಟಿ ತಜ್ಞರು ಅಭಿಪ್ರಾಯ ಪಡುತ್ತಾರೆ. ಕಡಿಮೆ ವೆಚ್ಚದ ವಸತಿ ಸೌಲಭ್ಯಕ್ಕೆ ಆಕರ್ಷಿತರಾಗುವ ಇತರ ಕಾರಣಗಳ ಬಗ್ಗೆಯೂ ರಿಯಾಲ್ಟಿ ತಜ್ಞರು ವಿವರಣೆ ನೀಡಿದ್ದಾರೆ.

ಸರ್ಕಾರದ ನೀತಿಗಳು
ತಮ್ಮ ಅನಕೂಲಕ್ಕೆ ತಕ್ಕಂತಹ ಮನೆಗಳನ್ನು ಹೊಂದಲು ಸರ್ಕಾರದ ಕೆಲ ನೀತಿಗಳ ಪ್ರಭಾವವೂ ಕಾರಣ. ಸರ್ವೀಸ್ ತೆರಿಗೆ ಇದಕ್ಕೆ ಅನ್ವಯಿಸುವುದಿಲ್ಲ. ದೇಶದಲ್ಲಿ ಅನೇಕ ಏಜೆನ್ಸಿಗಳು ಕಡಿಮೆ ವೆಚ್ಚದ ಮನೆಗಳನ್ನು ಖರೀದಿಸಲು ಉತ್ತೇಜಿಸುತ್ತವೆ. ಹಾಗೆಯೇ ದೊಡ್ಡ ಪ್ರಮಾಣದಲ್ಲಿ ಜನರಿಗೆ ಕೈಗೆಟಕುವ ಬೆಲೆಯ ವಸತಿ ಯೋಜನೆಗಳನ್ನು ಆರಂಭಿಸಲು ರಿಯಲ್‌ ಎಸ್ಟೇಟ್‌ ಡೆವಲಪರ್‌ಗಳು ತಮ್ಮ ದೃಷ್ಟಿ ನೆಟ್ಟಿರುವುದು ಕಾರಣ.

ಮನೆ ಮಾಲೀಕತ್ವ ಹಾಗೂ ಆದಾಯ ಏರಿಕೆ
ನಗರೀಕರಣ ಹೆಚ್ಚಾದಂತೆ ಭಾರತದಲ್ಲೂ ಸ್ವಂತ ಮನೆ ಮಾಲೀಕತ್ವ ಹೊಂದುತ್ತಿರುವವ ಸಂಖ್ಯೆಯೂ ಹೆಚ್ಚಾಗುತ್ತಿದೆ. ಶ್ರೀಮಂತರು ಮಾತ್ರ ಸ್ವಂತ ಮನೆ ಹೊಂದುತ್ತಿದ್ದಾರೆ ಎಂದರೆ ತಪ್ಪಾಗುತ್ತದೆ. ಜೊತೆಗೆ ಕಡಿಮೆ ಆದಾಯ ಇರುವ ಜನರೂ ಕೂಡ ತಮ್ಮದೇ ಆದ ಮನೆಯ ಕನಸನ್ನು ಪೂರೈಸಿಕೊಳ್ಳುತ್ತಿದ್ದಾರೆ.

ನಿರ್ಮಾಣ ಅವಧಿ:
ಅಧಿಕ ವೆಚ್ಚದ ಮನೆ ಅಥವಾ ಅಪಾರ್ಟ್‌ಮೆಂಟ್ ನರ‍್ಮಾಣಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದರ ಅನುಮೋದನೆ ಹಾಗೂ ಪರವಾನಿಗೆಗೆ ಅಧಿಕ ಸಮಯ ವ್ಯಯ ಜೊತೆಗೆ ವೆಚ್ಚವೂ ಅಧಿಕ. ಅದಕ್ಕಾಗಿಯೇ ಪುರಸಭೆಗಳು ಜಾಗೂ ಕಟ್ಟಡ ನರ‍್ಮಾಣದಾರರು ಜೊತೆಯಾಗಿ ಕಡಿಮೆ ವೆಚ್ಚದ ವಸತಿ ಸೌಲಭ್ಯ ಒದಗಿಸುತ್ತಿದ್ದಾರೆ ಎಂಬುದು ರಿಯಾಲ್ಟಿ ತಜ್ಞರ ಮಾತು.

ಕಾರ್ಮಿಕರ ಸಂಖ್ಯೆ ಹಾಗೂ ಸಾಮಾಗ್ರಿಗಳು
“ಕಟ್ಟಡ ನಿರ್ಮಾಣ ಸಾಮಾಗ್ರಿಗಳು ಹಾಗೂ ಕಟ್ಟಡ ಕಾರ್ಮಿಕರ ಸಂಖ್ಯೆಯೂ ಕೂಡ ಮನೆ ನರ‍್ಮಾಣದ ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ಈ ವೆಚ್ಚಗಳು ಆರ್ಥಿಕತೆ ಮೇಲೆ ನೇರ ಪರಿಣಾಮ ಬೀರುತ್ತವೆ. ವಿಶೇಷವಾಗಿ ಉಪನಗರ ಪ್ರದೇಶಗಳಲ್ಲಿ ಕಡಿಮೆ ವೆಚ್ಚದಲ್ಲಿ ಭೂಮಿ, ಜಾಗದ ಲಭ್ಯತೆಯು ಕಡಿಮೆ ವೆಚ್ಚದ ಮನೆ ಅಭಿವೃದ್ಧಿಯ ಪ್ರಗತಿಯನ್ನು ಉತ್ತೇಜಿಸುತ್ತದೆ,” ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

Exit mobile version