Revenue Facts

ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲೂ ಸ್ಟೇನ್‌ಲೆಸ್‌ ಸ್ಟೀಲ್‌ಗಳಿಗೆ ಹೆಚ್ಚಿದ ಬೇಡಿಕೆ

‘ರಿಯಲ್‌ ಎಸ್ಟೇಟ್‌ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಸ್ಟೇನ್‌ಲೆಸ್‌ ಸ್ಟೀಲ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಹಗುರವಾದ ಆದರೆ ದೀರ್ಘಾವಧಿಯಲ್ಲಿ ಬಾಳಿಕೆ ಬರುವಂಥ ಗಟ್ಟಿಮುಟ್ಟಾದ ವಸ್ತುಗಳ ಆಯ್ಕೆಗೆ ಆದ್ಯತೆ ಹೆಚ್ಚುತ್ತಿದೆ’ ಎಂದು ಜೆಎಸ್‌ಎಲ್‌ ಲೈಫ್‌ಸ್ಟೈಲ್‌ ಲಿಮಿಟೆಡ್‌ನ(ಜೆಎಸ್‌ಎಲ್‌ಎಲ್‌) ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಶ್‌ ಮೊಹತಾ ಹೇಳಿದ್ದಾರೆ.

“ಗ್ರಾಹಕರ ಮನಸ್ಥಿತಿ ಆಮೂಲಾಗ್ರವಾಗಿ ಬದಲಾವಣೆ ಕಾಣುತ್ತಿದೆ. ಹೊಸತನದ ಹಾಗೂ ಹೆಚ್ಚು ಐಷಾರಾಮಿ ಆಯ್ಕೆಗಳ ಬಗ್ಗೆ ಅವರು ಗಮನಹರಿಸುತ್ತಿದ್ದು ಸ್ಟೇನ್‌ಲೆಸ್‌ ಸ್ಟೀಲ್‌ಗಳಿಗೆ ಬೇಡಿಕೆ ಹೆಚ್ಚುತ್ತಿದೆ” ಎಂದು ಬ್ಯುಸಿನೆಸ್‌ಲೈನ್‌ಗೆ ಅವರು ತಿಳಿಸಿದ್ದಾರೆ.

ಸ್ಟೀಲ್‌ ಡಿಸೈನರ್‌ ಬಿಯರ್‌ ಮಗ್‌ಗಳ ಲಭ್ಯತೆಯ ಬಗ್ಗೆಯೂ ಗ್ರಾಹಕರಿಂದ ವಿಚಾರಣೆ ಬಂದಮೇಲೆ ಲೇಸರ್‌ ಫಿನಿಶ್‌ ಇರುವ ಮಗ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆʼ ಎಂದಿದ್ದಾರೆ.

ಆಶಾದಾಯಕ ಕ್ಷೇತ್ರ
“ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಸ್ಟೇನ್‌ಲೆಸ್‌ ಸ್ಟೀಲ್‌ ಬಳಕೆಯ ಬಗ್ಗೆ ಹೊಸಹೊಸ ಯೋಚನೆಗಳು ಸಾಕಾರಗೊಳ್ಳುತ್ತಿವೆ. ಕೆಲವರು ಸ್ಟೇನ್‌ಲೆಸ್‌ ಸ್ಟೀಲ್‌ ಹಾಗೂ ಲೆದರ್‌ ವಾರ್ಡ್‌ರೋಬ್‌ಗಳನ್ನು ಮಾಡಿಸಿಕೊಂಡಿದ್ದಾರೆ. ಇದು ನಿಜವಾಗಿಯೂ ವಿಶಿಷ್ಟ ಆಲೋಚನೆಯಾಗಿದ್ದು ಜೆಎಸ್‌ಎಲ್‌ಎಲ್‌, ಗ್ರಾಹಕರ ಎಲ್ಲ ಬಗೆಯ ಬೇಡಿಕೆಗಳನ್ನು ಪೂರೈಸಲು ಸಿದ್ಧವಿದೆ,” ಎಂದು ಅವರು ಹೇಳಿದ್ದಾರೆ.

ರಿಯಲ್‌ ಎಸ್ಟೇಟ್‌ ಕ್ಷೇತ್ರ ಉತ್ತಮವಾಗಿ ಬೆಳೆಯುತ್ತಿದೆ. ಹಾಗೂ ಈ ವಲಯದಲ್ಲಿ ಜನಪ್ರಿಯಗೊಳ್ಳುತ್ತಿರುವ ಟ್ರೆಂಡ್‌ಗಳು ಆಶಾದಾಯಕವಾಗಿವೆ. ಹೀಗಾಗಿ ಸಂಸ್ಥೆ ಮನೆ ಪೀಠೋಪಕರಣಗಳು, ಅಡುಗೆ ಮನೆಯ ಅಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಕಾರ್ಯನಿರತವಾಗಿದೆ. ಹಾಗೆಯೇ ಸ್ನಾನದ ಕೋಣೆಯ ಪರಿಕರಗಳನ್ನು ಸ್ಟೇನ್‌ಲೆಸ್‌ ಸ್ಟೀಲ್‌ನಲ್ಲಿ ನಿರ್ಮಿಸುವ ಬಗ್ಗೆ ಉತ್ತಮ ಬೇಡಿಕೆ ಇರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

“ಕೊಳಾಯಿ ಹಾಗೂ ಪೈಪ್‌ ಫಿಟ್ಟಿಂಗ್‌ ವ್ಯವಹಾರವೂ ಚುರುಕುಗೊಂಡಿದ್ದು ಬೆಲೆ ದುಬಾರಿಯೇ ಆದರೂ ಇಲ್ಲಿಯೂ ಸ್ಟೇನ್‌ಲೆಸ್‌ ಸ್ಟೀಲ್‌ಗಳನ್ನು ಬಳಸುವ ಬಗ್ಗೆ ಆಸಕ್ತಿ ಬೆಳೆದಿದೆ. ಇದರಿಂದಾಗಿ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದ್ದು ನಮ್ಮ ವ್ಯಾಪಾರವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಅಡುಗೆ ಮನೆಯಷ್ಟೇ ಅಲ್ಲ ಇಡೀ ಮನೆಯನ್ನು ಆಕರ್ಷಕವಾಗಿ ಅಲಂಕರಿಸುವ ಬಗ್ಗೆ ಜನ ಆಸಕ್ತಿ ತೋರುತ್ತಿದ್ದು ವಿಲ್ಲಾಗಳು ಸೇರಿದಂತೆ ಐಚಾರಾಮಿ ಮನೆಗಳ ಬಗ್ಗೆ ಹೆಚ್ಚು ಬೇಡಿಕೆ ಇದೆ,” ಎನ್ನುತ್ತಾರೆ ಮೊಹತಾ.

ಜನರ ಮನಸ್ಥಿತಿ ಈಗ ಬದಲಾಗಿದೆ. ಕಡಿಮೆ ದರದಲ್ಲಿ ವಸ್ತುಗಳನ್ನು ಕೊಂಡು ಅದನ್ನು ಮತ್ತೆ ಮತ್ತೆ ರಿಪೇರಿ ಮಾಡುವುದು, ಪೇಂಟ್‌ ಮಾಡುವುದು ಮಾಡುವುದಕ್ಕಿಂತ ದೀರ್ಘಾವಧಿ ಬಳಕೆಯ ವಸ್ತುಗಳನ್ನು ಕೊಳ್ಳಲು ಮನಸ್ಸು ಮಾಡುತ್ತಿದ್ದಾರೆ. ಹೀಗಾಗಿ ದುಬಾರಿಯಾದರೂ ಸ್ಟೇನ್‌ಲೆಸ್‌ ಸ್ಟೀಲ್‌ಗಳ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಸರ್ಕಾರ ಕೂಡ ಏಕತೆಯ ಪ್ರತಿಮೆ ನಿರ್ಮಿಸುವ ಮೂಲಕ ಈ ಆಲೋಚನೆಯನ್ನು ಉತ್ತೇಜಿಸಿದೆ. ಸ್ಟೇನ್‌ಲೆಸ್‌ ಸ್ಟೀಲ್‌ಗೆ ಬೇಡಿಕೆ ಹೆಚ್ಚಿದ್ದು ಉದ್ಯಮವೂ ಅಭಿವೃದ್ಧಿ ಪಥದಲ್ಲಿದೆ. ಇತ್ತೀಚೆಗೆ ಚೆನ್ನೈನಲ್ಲಿ ಪ್ಲಾಂಟ್‌ ನಿರ್ಮಿಸಿದ್ದು ಚೆನ್ನೈ ಮೆಟ್ರೊ ರೈಲು ಯೋಜನೆಗೆ ಅಗತ್ಯ ಸ್ಟೀಲ್‌ ಉತ್ಪನ್ನಗಳನ್ನು ಪೂರೈಸುತ್ತಿರುವ ಬಗ್ಗೆಯೂ ಅವರು ಮಾಹಿತಿ ನೀಡಿದ್ದಾರೆ.

ಆರೋಗ್ಯ ಹಾಗೂ ನೈರ್ಮಲ್ಯ
ಆರೋಗ್ಯ, ನೈರ್ಮಲ್ಯ ಹಾಗೂ ಆಸ್ಪತ್ರೆಗಳಲ್ಲೂ ಸ್ಟೇನ್‌ಲೆಸ್‌ ಸ್ಟೀಲ್‌ ಉತ್ಪನ್ನಗಳಿಗೆ ಉತ್ತಮ ಬೇಡಿಕೆ ಇದೆ. ಈಗಾಗಲೇ ಹರಿಯಾಣದ ಫರಿದಾಬಾದ್‌ನಲ್ಲಿರುವ ಮಾತಾ ಅಮೃತಾನಂದಮಯಿ ಆಸ್ಪತ್ರೆಗೆ ಸ್ಟೇನ್‌ಲೆಸ್‌ ಸ್ಟೀಲ್‌ ಅಪ್ಲಿಕೇಶನ್‌ ಅನ್ನು ನೀಡಿದ್ದೇವೆ. ಆಸ್ಪತ್ರೆ ಹಾಗೂ ಆಸ್ಪತ್ರೆಗಳ ಕೊಳಾಯಿ ವ್ಯವಸ್ಥೆಗೆ ಬೇಡಿಕೆ ಹೆಚ್ಚುತ್ತಿದೆ ಎಂದೂ ಅವರು ಹೇಳಿದ್ದಾರೆ.

Exit mobile version