Revenue Facts

ಪಿಎಂ ಕಿಸಾನ್ ಹಣದ ನೆರವು ಏರಿಕೆ?

ಪಿಎಂ ಕಿಸಾನ್ ಹಣದ ನೆರವು ಏರಿಕೆ?

ನವದೆಹಲಿ;ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಎಂಬುದು ಭಾರತ ಸರ್ಕಾರವು ಪ್ರಾರಂಭಿಸಿದ ಯೋಜನೆಯಾಗಿದ್ದು, ಇದು ದೇಶದ ಎಲ್ಲಾ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಹಣಕಾಸಿನ ನೆರವು ನೀಡುತ್ತದೆ.ರೈತರ ಅನುಕೂಲಕ್ಕಾಗಿ ಕೇಂದ್ರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ವಾರ್ಷಿಕ 76 ಸಾವಿರ ನೆರವು ನೀಡುತ್ತಿರುವುದು ಗೊತ್ತೇ ಇದೆ. ಶೀಘ್ರದಲ್ಲೇ ಸರಕಾರ ಈ ನೆರವನ್ನು 78 ಸಾವಿರಕ್ಕೆ ಹೆಚ್ಚಿಸಲಿದೆ. ಕಳೆದ ಸಾರ್ವತ್ರಿಕ ಚುನಾವಣೆಗೂ ಮುನ್ನ ಈ ಯೋಜನೆ ಜಾರಿಗೆ ಬಂದಿತ್ತು. ಮುಂದಿನ ಲೋಕಸಭೆ ಚುನಾವಣೆಗೂ ಮುನ್ನ ಈ ಯೋಜನೆಯಡಿ ರೈತರಿಗೆ ಹೆಚ್ಚುವರಿಯಾಗಿ 12 ಸಾವಿರ ನೀಡುವ ಸಾಧ್ಯತೆ ಇದೆ. ಸರ್ಕಾರದಿಂದ ಅಧಿಕೃತ ಘೋಷಣೆಯಾಗುವುದು ಬಾಕಿ ಇದೆ.ಸರ್ಕಾರ ಚಿಂತನೆ ಮಾಡಿದೆ ಎಂದು ಅಧಿಕಾರಿಗಳು – ತಿಳಿಸಿದ್ದಾರೆ. ಒಂದು ವೇಳೆ ಈ ಯೋಜನೆಗೆ ಅನು ಮೋದನೆ ಸಿಕ್ಕರೆ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ 22 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ಅವರು ಹೇಳಿದ್ದಾರೆ.

Exit mobile version