Revenue Facts

ಆದಾಯ ಮಿತಿ 5 ಲಕ್ಷ ರೂ.ಗೆ ಏರಿಕೆ,ಆದಾಯ ತೆರಿಗೆದಾರರ ಗೊಂದಲ ಬಗೆಹರಿಯುವ ನಿರೀಕ್ಷೆ

Income Tax

Income Tax

ಹೊಸದಿಲ್ಲಿ;ಮಧ್ಯಮವರ್ಗದಿಂದ ಹಿಡಿದು ಮೇಲ್ವರ್ಗದವರೆಗೆ ಆದಾಯ ತೆರಿಗೆ ಪಾವತಿ ಕಡ್ಡಾಯವಾಗಿದೆ. ಆದರೆ, ಈ ಬಾರಿ ಈ ಆದಾಯ ತೆರಿಗೆ ವಿಷಯದಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಬದಲಾವಣೆ ಮಾಡುವ ನಿರೀಕ್ಷೆ ಇದೆ.ಹಣ ಹೂಡಿಕೆಗೆ (Investment Option) ಅತ್ಯಂತ ಆಕರ್ಷಕ ಮಾರ್ಗಗಳಲ್ಲಿ ರಿಯಲ್ ಎಸ್ಟೇಟ್ (Real Estate) ಪ್ರಮುಖವಾದುದು. ಸ್ವಂತ ನೆಲೆ, ಮನೆಯ ಜೊತೆಗೆ ಹೂಡಿಕೆಗಾಗೂ ಜನರು ನಿವೇಶನಗಳನ್ನು ಕೊಳ್ಳಲು ಮುಂದಾಗುತ್ತಾರೆ. ಈ ಹಿನ್ನೆಲೆಯಲ್ಲಿ ಬಹಳ ಮಂದಿ ಒಂದಕ್ಕಿಂತ ಹೆಚ್ಚು ನಿವೇಶನಗಳನ್ನು ಹೊಂದಿರುತ್ತಾರೆ. ಒಂದನ್ನು ಸ್ವಂತ ವಾಸಕ್ಕೆ ಇಟ್ಟುಕೊಂಡು, ಉಳಿದಿದ್ದನ್ನು ಬಾಡಿಗೆಗೆ ಕೊಡುತ್ತಾರೆ. ಈ ಬಾಡಿಗೆ ಹಣಕ್ಕೆ ತೆರಿಗೆ (Income Tax on Rent) ವಿಧಿಸಲಾಗುತ್ತದೆ.

2023-24ರ ಸಾಲಿನ ಬಜೆಟ್‌ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣ ಬಜೆಟ್ ಆಗಿದೆ. 2024ರಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಅದಕ್ಕಾಗಿಯೇ ಮೋದಿ ಸರ್ಕಾರವು ತನ್ನ ಕೊನೆಯ ಪೂರ್ಣ ಬಜೆಟ್‌ನಲ್ಲಿ ತೆರಿಗೆದಾರರಿಗೆ ಪರಿಹಾರವನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. 2023-24ನೇ ಹಣಕಾಸು ವರ್ಷದ ಬಜೆಟ್ ಫೆಬ್ರವರಿ 1 ರಂದು ಮಂಡನೆಯಾಗಲಿದೆ. ಈ ಹಿಂದೆ, ವೈಯಕ್ತಿಕ ತೆರಿಗೆ ವಿನಾಯಿತಿ ಮಿತಿಯಲ್ಲಿ ಕೊನೆಯ ಬಾರಿಗೆ 2014ರಲ್ಲಿ ಬದಲಾವಣೆ ಮಾಡಲಾಗಿತ್ತು. ಮೋದಿ ಸರ್ಕಾರದ ಮೊದಲ ಅವಧಿಯ ಮೊದಲ ಬಜೆಟ್ ಮಂಡಿಸುವಾಗ ಆಗಿನ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ವಾರ್ಷಿಕ ಆದಾಯದ ಮಿತಿಯನ್ನು 2 ಲಕ್ಷ ರೂ.ನಿಂದ 2.5 ಲಕ್ಷ ರೂ.ಗೆ ಹೆಚ್ಚಳ ಮಾಡಿ ಘೋಷಿಸಿದ್ದರು.

ಎರಡು ವರ್ಷಗಳ ಹಳೆಯ ತೆರಿಗೆ ಪದ್ಧತಿಯಲ್ಲಿ ವೈಯಕ್ತಿಕ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸಲು ಸರ್ಕಾರವು ಪರಿಗಣಿಸುತ್ತಿದೆ ಎಂದು ಸರ್ಕಾರಿ ಮೂಲಗಳನ್ನು ಉಲ್ಲೇಖಿಸಿ ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಹೇಳಿದೆ. ಇದನ್ನು 2.5 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಬಹುದು. “ಹಿಂದಿನ ವರ್ಷದಲ್ಲಿ ಬಾಡಿಗೆಗೆ ಕೊಡಲಾಗಿದ್ದ ನಿವೇಶನ ಈಗ ಖಾಲಿಯಾಗಿದ್ದರೂ, ಆ ಆಸ್ತಿಯಿಂದ ಬಾಡಿಗೆ ಬರುತ್ತಿರುವಂತೆ ಪರಿಗಣಿಸಿ ತೆರಿಗೆ ಹಾಕಲಾಗುತ್ತದೆ. ಒಬ್ಬ ವ್ಯಕ್ತಿ ಸ್ವಬಳಕೆಗೆ ಎರಡು ಆಸ್ತಿಗಳನ್ನು ಕೊಳ್ಳಲು ಅನುಮತಿಸಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಕ್ಕೆ ಉತ್ತೇಜನ ಕೊಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಸ್ವ ಬಳಕೆಯ ಆಸ್ತಿ ಹೊಂದುವುದನ್ನು ಎರಡಕ್ಕೆ ಮಿತಿಗೊಳಿಸುವ ನಿರ್ಧಾರದ ಬಗ್ಗೆ ಮರುಪರಿಶೀಲಿಸುವುದು ಉತ್ತಮ,” ಎಂದು ಪ್ರೀ-ಬಜೆಟ್ ಮೆಮೋರಾಂಡಂನಲ್ಲಿ ಐಸಿಎಐ ತಿಳಿಸಿದೆ.

Exit mobile version