Revenue Facts

ಯಾವ ಕಾಲದಲ್ಲಿ ದಸ್ತಾವೇಜುಗಳನ್ನು ಹಾಜರುಪಡಿಸಬೇಕು? ಭಾರತದ ಹೊರಗೆ ಬರೆದುಕೊಟ್ಟ ದಸ್ತಾವೇಜುಗಳಿಗೂ ಈ ನಿಯಮ ಅನ್ವಯಿಸುತ್ತದೆಯೇ?

ಯಾವ ಕಾಲದಲ್ಲಿ ದಸ್ತಾವೇಜುಗಳನ್ನು ಹಾಜರುಪಡಿಸಬೇಕು? ಭಾರತದ ಹೊರಗೆ ಬರೆದುಕೊಟ್ಟ ದಸ್ತಾವೇಜುಗಳಿಗೂ ಈ ನಿಯಮ ಅನ್ವಯಿಸುತ್ತದೆಯೇ?

ಬೆಂಗಳೂರು ಜುಲೈ 10: ಮರಣಶಾಸನ ಮತ್ತು 24,25 ಮತ್ತು 26 ನೇ ಪ್ರಕರಣಗಳಲ್ಲಿ ಒಳಗೊಂಡ ಉಪಬಂಧಗಳಿಗೆ ಒಳಪಟ್ಟು, ಮರಣಶಾಸನವನ್ನು ಹೊರತುಪಡಿಸಿ ಇತರ ಯಾವುದೇ ದಸ್ತಾವೇಜನ್ನು, ಅದನ್ನು ಬರೆದುಕೊಟ್ಟ ದಿನಾಂಕದಿಂದ ನಾಲ್ಕು ತಿಂಗಳೊಳಗೆ ಯುಕ್ತ ಅಧಿಕಾರಿಗೆ ಆ ಉದ್ದೇಶಕ್ಕಾಗಿ ಅದನ್ನು ಹಾಜರಿಪಡಿಸಿದ್ದ ಹೊರತು ನೋಂದಣಿಗಾಗಿ ಅಂಗೀಕರಿಸಕ್ಕದಲ್ಲ.

ಪರಂತು, ಡಿಕ್ರಿ ಅಥವಾ ಆದೇಶ ಪ್ರತಿಗೆ ಸಂಬಂಧಪಟ್ಟಂತೆ ಹಾಜರುಪಡಿಸುವ ಕಾಲ:
ಪರಂತು, ಡಿಕ್ರಿ ಅಥವಾ ಆದೇಶ ಪ್ರತಿಗೆ ಸಂಬಂಧಪಟ್ಟಂತೆ ಆ ಡಿಕ್ರಿ ಅಥವಾ ಆದೇಶವನ್ನು ಮಾಡಿದಂತ ತಿಂಗಳೊಳಗೆ ಅಥವಾ ಅದರ ಬಗ್ಗೆ ಅಪೀಲು ಮಾಡಬಹುದಾದಲ್ಲಿ ಅದು ಅಂತಿಮವಾಗತಕ್ಕಂಥ ದಿವಸದಿಂದ ನಾಲ್ಕು ತಿಂಗಳೊಳಗೆ ಹಾಜರುಪಡಿಸಬಹುದು.

ಮರುನೊಂದಣಿಗೆ ಆದೇಶೀಸಿರುವ ದಸ್ತಾವೇಜುಗಳ ಹಾಜರುಪಡಿಸುವ ಕಾಲ:
ಈ ಅಧಿನಿಯಮದಲ್ಲಿ ತದ್ವಿರುದ್ಧವಾಗಿ ಏನೇ ಅಡಕವಾಗಿದ್ದಾಗ್ಯೂ, ರಿಜಿಸ್ಟ್ರಾರನು ಅಥವಾ ಸಬ್-ರಿಜಿಸ್ಟ್ರಾರನು ನೋಂದಣಿಗಾಗಿ ಅದನ್ನು ಹಾಜರುಪಡಿಸಲು ಕ್ರಮಬದ್ಧವಾಗಿ ಶಕ್ತಗೊಳಿಸಿರದ ವ್ಯಕ್ತಿಯಿಂದ ನೋಂದಣಿಯ ಅಗತ್ಯವಿರುವ ದಸ್ತಾವೇಜನ್ನು ಯಾವುದೇ ಪ್ರಕರಣದಲ್ಲಿ ಅಂಗೀಕರಿಸಿದ್ದರೆ ಮತ್ತು ಅದನ್ನು ನೋಂದಾಯಿಸಿದ್ದರೆ ಅಂಥ ದಸ್ತಾವೇಜಿನ ಮೇರೆಗೆ ಕ್ಲೇಮು ಮಾಡುವ ಯಾವನೇ ವ್ಯಕ್ತಿಯು ಅಂಥ ದಸ್ತಾವೇಜಿನ ನೋಂದಣಿಯು ಅಸಿಂಧುವೆಂದು ಅವನಿಗೆ ಮೊದಲು ತಿಳಿದುಬಂದಂದಿನಿಂದ ನಾಲ್ಕು ತಿಂಗಳೊಳಗೆ ದಸ್ತಾವೇಜನ್ನು ಮೂಲತಃ ನೋದಣಿ ಮಾಡಿದಂಥ ಜಿಲ್ಲೆಯ ರಿಜಿಸ್ಟ್ರಾರನ ಕಛೇರಿಯಲ್ಲಿ ಮರುನೋಂದಣಿಗಾಗಿ VIನೇ ಭಾಗದ ಉಪಬಂಧಗಳಿಗನುಸಾರವಾಗಿ ಅಂಥ ದಸ್ತಾವೇಜನ್ನು ಹಾಜರುಪಡಿಸಬಹುದು ಅಥವಾ ಹಾಜರುಪಡಿಸುವಂತೆ ಮಾಡಬಹುದು

ಮತ್ತು ಅದನ್ನು ಹಾಜರುಪಡಿಸಲು ಕ್ರಮಬದ್ಧವಾಗಿ ಶಕ್ತಗೊಳಿಸಿಲ್ಲದ ವ್ಯಕ್ತಿಯಿಂದ ನೋಂದಣಿಗಾಗಿ ಆ ದಸ್ತಾವೇಜನ್ನು ಹಾಗೆ ಅಂಗೀಕರಿಸಲಾಗಿತ್ತೆಂದು ರಿಜಿಸ್ಟ್ರಾರನಿಗೆ ಮನದಟ್ಟಾದ ಮೇಲೆ ಅವನು ಆ ದಸ್ತಾವೇಜನ್ನು ಹಿಂದೆ ನೋದಾಯಿಸಲಾಗಿರದಿದ್ದರೆ ಹೇಗೋ ಹಾಗೆ ಅಥವಾ ಹಾಜರುಪಡಿಸುವಿಕೆಯ IVನೇ ಭಾಗದ ಮೇರೆಗೆ ಅದಕ್ಕಾಗಿ ಅನುಮತಿಸಿದ ಕಾಲದೊಳಗೆ ನೋಂದಣಿಗಾಗಿ ಮಾಡಿದ ಹಾಜರುಪಡಿಸುವಿಕೆ ಆಗದಿದ್ದರೆ ಹೇಗೋ ಹಾಗೆ ಆ ದಸ್ತಾವೇಜಿನ ಮರುನೋಂದಣಿಗಾಗಿ ಅವನು ಮುಂದುವರೆಯತಕ್ಕದ್ದು ಮತ್ತು ದಸ್ತಾವೇಜುಗಳ ನೋಂದಣಿಯ ಬಗ್ಗೆ ಈ ಅಧಿನಿಯಮದ ಎಲ್ಲಾ ಉಪಬಂಧಗಳು ಅಂಥ ಮರುನೋಂದಣಿಗೆ ಅನ್ವಯವಾಗತಕ್ಕದ್ದು ಮತ್ತು ಅಂಥ ದಸ್ತಾವೇಜನ್ನು ಈ ಪ್ರಕರಣದ ಮೇರೆಗಿನ ಉಪಬಂಧಗಳಿಗನುಸಾರ ಕ್ರಮಬದ್ಧವಾಗಿ ಮರುನೋಂದಣಿ ಮಾಡಿದ್ದರೆ ಅದರ ದಿನಾಂಕದಿಂದ ಮರು ನೋಂದಣಿಯ ಉದ್ದೇಶಗಳಿಗಾಗಿ ನೋಂದಾಯಿಸಲಾಗಿದೆಯೆಂದು ಭಾವಿಸತಕ್ಕದ್ದು.

ಕ್ರಮಬದ್ಧವಾಗಿ ಪರಂತು, 1917ನೇ ಸೆಪ್ಟೆಂಬರ್ ಹನ್ನೆರಡನೇಯ ದಿವಸದಿಂದ ಮೂರು ತಿಂಗಳೊಳಗಾಗಿ ಈ ಪ್ರಕರಣವು ಅನ್ವಯವಾಗುವಂಥ ದಸ್ತಾವೇಜಿನ ಮೇರೆಗೆ ಕ್ಷೇಮು ಮಾಡುವ ಯಾವನೇ ವ್ಯಕ್ತಿಯು ದಸ್ತಾವೇಜಿನ ನೋಂದಣಿಯು ಅಸಿಂಧುವಾಗುತ್ತದೆಂದು ಅವನಿಗೆ ಮೊದಲು ತಿಳಿದುಬಂದ ಕಾಲ ಯಾವುದೇ ಆಗಿರಬಹುದಾಗಿದ್ದಾಗ್ಯೂ, ಅದನ್ನು ಈ ಪ್ರಕರಣಕ್ಕನುಸಾರವಾಗಿ ಮರುನೋಂದಣಿಗಾಗಿ ಹಾಜರುಪಡಿಸಬಹುದು ಅಥವಾ ಹಾಜರುಪಡಿಸುವಂತೆ ಮಾಡಬಹುದು.

ಬೇರೆ ಬೇರೆ ಕಾಲಗಳಲ್ಲಿ ಹಲವಾರು ವ್ಯಕ್ತಿಗಳು ಬರೆದುಕೊಟ್ಟ ದಸ್ತಾವೇಜುಗಳು. -ಬೇರೆ ಬೇರೆ ಕಾಲಗಳಲ್ಲಿ ದಸ್ತಾವೇಜನ್ನು ಹಲವಾರು ವ್ಯಕ್ತಿಗಳು ಬರೆದುಕೊಡುವಲ್ಲಿ ಅಂಥ ದಸ್ತಾವೇಜನ್ನು ಪ್ರತಿಯೊಂದು ಬರೆದುಕೊಡುವಿಕೆಯ ದಿನಾಂಕದಿಂದ ನಾಲ್ಕು ತಿಂಗಳೊಳಗಾಗಿ ನೋಂದಣಿ ಮತ್ತು ಮರುನೋಂದಣಿಗಾಗಿ ಹಾಜರುಪಡಿಸಬಹುದು.

ಹಾಜರುಪಡಿಸುವಿಕೆಯಲ್ಲಿನ ವಿಳಂಬವು ಅನಿವಾರ್ಯವಾಗಿರುವಲ್ಲಿ ಉಪಬಂಧ-(1) ಜರೂರು ಅವಶ್ಯಕತೆ ಅಥವಾ ಅನಿವಾರ್ಯ ಆಕಸ್ಮಿಕದಿಂದಾಗಿ ಭಾರತದಲ್ಲಿ ಬರೆದುಕೊಟ್ಟ ಯಾವುದೇ ದಸ್ತಾವೇಜು ಅಥವಾ ಮಾಡಿದ ಡಿಕ್ರಿ ಅಥವಾ ಆದೇಶದ ಪ್ರತಿಯನ್ನು ಆ ಬಗ್ಗೆ ಇಲ್ಲಿ ಈ ಮುಂಚೆ ನಿಯಮಿಸಿದ ಕಾಲದ ಮುಕ್ತಾಯದ ತರುವಾಯದವರೆಗೆ ನೋಂದಣಿಗಾಗಿ ಹಾಜರುಪಡಿಸದಿದ್ದರೆ ರಿಜಿಸ್ಟ್ರಾರನು ಹಾಜರುಪಡಿಸುವುದರಲ್ಲಿನ ವಿಳಂಬವು ನಾಲ್ಕು ತಿಂಗಳುಗಳನ್ನು ಮೀರದೆ ಇರುವ 5 ಪ್ರಕರಣಗಳಲ್ಲಿ ಸರಿಯಾದ ನೋಂದಣಿ ಫೀಜಿನ ಮೊಬಲಗಿನ ಹತ್ತರಷ್ಟನ್ನು ಮೀರದ ಜುಲ್ಮಾನೆಯನ್ನು ಸಂದಾಯ ಮಾಡಿದ ಮೇಲೆ ಅಂಥ ದಸ್ತಾವೇಜನ್ನು ನೋಂದಣಿಗಾಗಿ ಅಂಗೀಕರಿಸಬಹುದೆಂದು ನಿರ್ದೇಶಿಸಬಹುದು.

1 “ರಾಜಗಳ” ಎಂಬ ಪ್ರತಿಯೋಜಿಸಲಾಗಿದೆ.
(2) ಅಂಥ ನಿರ್ದೇಶನಕ್ಕಾಗಿ ಯಾವುದೇ ಅರ್ಜಿಯನ್ನು ಸಬ್‌ರಿಜಿಸ್ಟ್ರಾರ್‌ನಲ್ಲಿ ದಾಖಲು ಮಾಡಬಹುದು ಮತ್ತು ಅವನು ತಕ್ಷಣವೇ ಅದನ್ನು ತಾನು ಅಧೀನನಾಗಿರುವ ಸಬ್‌ರಿಜಿಸ್ಟ್ರಾರ್‌ನಿಗೆ ಕಳುಹಿಸತಕ್ಕದ್ದು.

ಭಾರತದ ಹೊರಗೆ ಬರೆದುಕೊಟ್ಟ ದಸ್ತಾವೇಜುಗಳು.-ಯಾವುದೇ ದಸ್ತಾವೇಜನ್ನು ಭಾರತದ ಹೊರಗೆ ಇರುವ ಎಲ್ಲಾ ಅಥವಾ ಯಾವನೇ ಪಕ್ಷಕಾರರಿಂದ ಬರೆದುಕೊಡಲಾಗಿದೆಯೆಂದು ತಾತ್ಪರ್ಯವಾಗುವಾಗ ಆ ಬಗ್ಗೆ ಇಲ್ಲಿ ಈ ಮುಂಚೆ ನಿಯಮಿಸಿದ ಕಾಲದ ಮುಕ್ತಾಯದ ತರುವಾಯದವರೆಗೆ ನೋಂದಣಿಗಾಗಿ ಅದನ್ನು ಹಾಜರುಪಡಿಸದೆ ಇರುವಲ್ಲಿ ನೋಂದಣಾಧಿಕಾರಿಗೆ.-
(ಎ) ಪತ್ರವನ್ನು ಹಾಗೆ ಬರೆದುಕೊಡಲಾಗಿತ್ತೆಂದು; ಮತ್ತು
(ಬಿ) [ಭಾರತ]ದಲ್ಲಿ ಅದು ತಲುಪಿದ ತರುವಾಯ ನಾಲ್ಕು ತಿಂಗಳೊಳಗೆ ನೋಂದಣಿಗಾಗಿ ಅದನ್ನು ಹಾಜರುಪಡಿಸಲಾಗಿತ್ತೆಂದು,ಮನದಟ್ಟಾದರೆ ಸರಿಯಾದ ನೋಂದಣಿ ಫೀಜನ್ನು ಸಂದಾಯ ಮಾಡಿದ ಮೇಲೆ ಅಂಥ ದಸ್ತಾವೇಜನ್ನು ನೋಂದಣಿಗಾಗಿ ಅವನು ಅಂಗೀಕರಿಸಬಹುದು.

ಮರಣಶಾಸನ(Will)ಗಳ ಹಾಜರುಪಡಿಸುವ ಕಾಲ:-
ಮರಣಶಾಸನ(Will)ಗಳನ್ನು ಯಾವುದೇ ಕಾಲದಲ್ಲಿ ನೋಂದಣಿಗಾಗಿ ಹಾಜರುಪಡಿಸಬಹುದು ಅಥವಾ ಇಡಬಹುದು.

Exit mobile version