Revenue Facts

ಬಿಬಿಎಂಪಿಯಲ್ಲಿ 45 ಸಾವಿರಕ್ಕೂ ಅಧಿಕ ಎ ಖಾತಾ ಪ್ರಮಾಣ ಪತ್ರಗಳು ಅಕ್ರಮ

ಬಿಬಿಎಂಪಿಯಲ್ಲಿ 45 ಸಾವಿರಕ್ಕೂ ಅಧಿಕ ಎ ಖಾತಾ ಪ್ರಮಾಣ ಪತ್ರಗಳು ಅಕ್ರಮ

 

ಬೆಂಗಳೂರು, ಆ. 07 : ಬಿಬಿಎಂಪಿಯಲ್ಲಿ ಅಕ್ರಮವಾಗಿ ಬಿ ಖಾತಾ ಆಸ್ತಿಗಳನ್ನು ಎ ಖಾತಾಗೆ ವರ್ಗಾವಣೆ ಮಾಡಿರುವುದು ಈ ಹಿಂದೆಯೇ ಪತ್ತೆಯಾಗಿತ್ತು. 45 ಸಾವಿರಕ್ಕೂ ಹೆಚ್ಚು ಈ ಹಿಂದೆ ಬಿ ಖಾತಾ ಜಾಗಗಳನ್ನು ಎ ಖಾತಾಗೆ ಅಕ್ರಮವಾಗಿ ಬದಲಾಯಿಸಿಕೊಂಡಿರುವುದು ಪತ್ತೆಯಾಗಿತ್ತು. ಇದರಿಂದ ನಾಗರಿಕ ಸಂಸ್ಥೆಗೆ 5 ಸಾವಿರ ಕೋಟಿ ರೂ. ನಷ್ಟವಾಗಿದೆ. ಹೀಗಾಗಿ ಬಿಬಿಎಂಪಿ ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿತ್ತು. ಈ ಅಕ್ರಮವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗಿದೆ.

ಈ ತನಿಖೆಯಲ್ಲಿ ಭ್ರಷ್ಟ ಕಂದಾಯ ಅಧಿಕಾರಿಗಳು 45,133 ಕ್ಕೂ ಹೆಚ್ಚು ಆಸ್ತಿಗಳಿಗೆ ‘ಎ’ ಖಾತಾ ಪ್ರಮಾಣಪತ್ರವನ್ನು ನೀಡಿದ್ದಾರೆ. ಬೊಮ್ಮನಹಳ್ಳಿ 6,413, ದಾಸರಹಳ್ಳಿ 3,927, ಪೂರ್ವ 6,136, ಮಹದೇವಪುರ 12,334, ಆರ್‌ಆರ್ನಗರ 3,422, ದಕ್ಷಿಣ 2,157, ಪಶ್ಚಿಮ 4,623, ಯಲಹಂಕ 6,121 ಆಸ್ತಿಗಳಿಗೆ ಎ ಖಾತಾ ಪ್ರಮಾಣ ಪತ್ರವನ್ನು ನೀಡಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತುದೆ. ಸಾಫ್ಟ್‌ ವೇರ್‌ ಅನ್ನು ಬಳಸಿಕೊಂಡು ಅಧಿಕಾರಿಗಳು ಅಕ್ರಮ ನಡೆಸಿದ್ದಾರೆ. ಆಸ್ತಿ ಮಾಲೀಕರಿಂದ 580 ಕೋಟಿ ರೂ. ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಂಗಳೂರಿನ ಬಿಬಿಎಂಪಿಯ 243 ವಾರ್ಡ್ ಗಳಲ್ಲಿ ಅಂದಾಜು ಒಂದು ಲಕ್ಷ ಎ ಖಾತಾಗಳು ಅಕ್ರಮವಾಗಿ ನೋಂದಣಿಯಾಗಿರುವುದು ಪತ್ತೆಯಾಗಿದೆ. ಈ ಬಗ್ಗೆ ಪರಿಶೀಲನಾ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಬೊಮ್ಮನಹಳ್ಳಿ, ಮಹದೇವಪುರ, ಯಲಹಂಕ, ಆರ್ ಆರ್ ನಗರ, ದಾಸರಹಳ್ಳಿ ಸೇರಿದಂತೆ ಬೆಂಗಳೂರಿನ ಹಲವು ವಲಯಗಳಲ್ಲಿ ಅಕ್ರಮ ಎ ಖಾತೆಗಳನ್ನು ಮಾಡಲಾಗಿದೆ.

40 ಸಾವಿರಕ್ಕೂ ಅಧಿಕ ಪ್ರಕರಣಗಳಲ್ಲಿ ಅಕ್ರಮವಾಗಿ ಖಾತಾ ನೀಡಿರುವುದು ಗೊತ್ತಾಗಿದೆ. ಇನ್ನು 9 ಸಾವಿರ ಪ್ರಕರಣಗಳ ಬಗ್ಗೆ ಎಆರ್ಒಗಳೇ ಮಾಹಿತಿ ನೀಡಿದ್ದಾರೆ. ಇದಲ್ಲದೆ, ಪುಸ್ತಕದಲ್ಲಿ ‘ಎ’ ಖಾತೆ ಎಂದು ಅಕ್ರಮವಾಗಿ ಬದಲಾಯಿಸಿ, ಹಣ ಪಡೆದಿರುವ ಪ್ರಕರಣಗಳೂ ಹೆಚ್ಚಿವೆ. ಇಂತಹ ಪ್ರಕರಣಗಳು ಸುಮಾರು 50 ಸಾವಿರ ಮೀರಬಹುದು. ಇವುಗಳೆಲ್ಲವನ್ನೂ ತನಿಖೆ ನಡೆಸಲಾಗುತ್ತಿದೆ.

Exit mobile version