ಬೆಂಗಳೂರು, ಜ. 18 : ಜಾಗತಿಕವಾಗಿ ಪ್ರತಿ ದಿನ 1600 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಹೀಗಿರುವಾಗ ಭಾರತದ ಉದ್ಯೋಗಿಗಳುಗೆ ಬಂಪರ್ ಆಫರ್ ಬಂದಿದೆ. ವ ಭಾರತೀಯ ಉದ್ಯೋಗಿಗಳಿಗೆ ಈ ವರ್ಷ ಏಷ್ಯಾದ ಅತಿ ಹೆಚ್ಚು ವೇತನ ಸಿಗಲಿದೆ. ವೇತನ ಹೆಚ್ಚಳಕ್ಕೆ ಸಾಕಷ್ಟು ಕಂಪನಿಗಳು ಸಿದ್ಧವಾಗಿದ್ದು, ಈ ಬಗ್ಗೆ ಕಾರ್ನ್ ಫೆರಿ ನಡೆಸಿರುವ ಸಮೀಕ್ಷೆಯಲ್ಲಿ ವರದಿ ಬಹಿರಂಗವಾಗಿದೆ. ಉನ್ನತ ಪ್ರತಿಭೆಗಳಿಗೆ 15%-30% ರಷ್ಟು ಹೆಚ್ಚು ವೇತನ ಗಳಿಸಲಿದ್ದಾರೆ ಎಂದು ಹೇಳಲಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್ ಆಗುತ್ತಿದ್ದು, ಉದ್ಯೋಗಿಗಳು ಸಂತಸದಲ್ಲಿದ್ದಾರೆ. ಕಳೆದ ವರ್ಷ ಶೇ.9.4 ರಷ್ಟು ವೇತನ ಹೆಚ್ಚಳವಾಗಿತ್ತು. ಇದೀಗ 2023 ರಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರದಲ್ಲಿ ಸರಾಸರಿ ವೇತನ ಶೇ.9.8 ರಷ್ಟು ಹೆಚ್ಚಾಗಲಿದೆ.
ಹೈಟೆಕ್ ಕೈಗಾರಿಕೆಗಳು, ಜೀವ ವಿಜ್ಞಾನಗಳು ಮತ್ತು ಆರೋಗ್ಯ ರಕ್ಷಣೆಯು ಶೇ. 10 ಕ್ಕಿಂತ ಹೆಚ್ಚಿನ ವೇತನವನ್ನು ನೀಡುತ್ತಿದೆ ಎಂದು ವರದಿ ಹೇಳಿದೆ. ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಇಂತಹ ಸಂದರ್ಭದಲ್ಲಿಯೇ ಈ ಬೆಳವಣಿಗೆ ಕಂಡು ಬಂದಿದೆ. ಟೈರ್ 1 ನಗರಗಳೆಂದು ಕರೆಯಲ್ಪಡುವ ಪ್ರಮುಖ ಮೆಟ್ರೋಪಾಲಿಟನ್ ಕೇಂದ್ರಗಳಲ್ಲಿನ ಉದ್ಯೋಗಿಗಳು ಇನ್ನೂ ಹೆಚ್ಚಿನ ದರವನ್ನು ಪಡೆಯುತ್ತಾರೆ. ಇದು ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ. ಇಲ್ಲಿ ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಶಿಕ್ಷಣದಲ್ಲಿನ ಅಂತರವು ಒಟ್ಟಾರೆ ನಿರುದ್ಯೋಗ ದರವು ಅಧಿಕವಾಗಿರುವಾಗಲೂ ಪ್ರತಿಭೆಗಾಗಿ ಹೋರಾಟವನ್ನು ತೀವ್ರಗೊಳಿಸುತ್ತದೆ.
ಕಾರ್ನ್ ಫೆರ್ರಿ, ಭಾರತದಲ್ಲಿನ 818 ಕಂಪನಿಗಳು ಸಂಯೋಜಿತ 800,000 ಸಿಬ್ಬಂದಿಯನ್ನು ನೇಮಿಸಿಕೊಂಡಿವೆ. ಶೇ. 61 ರಷ್ಟು ಸಂಸ್ಥೆಗಳು ಪ್ರಮುಖ ವ್ಯಕ್ತಿಗಳಿಗೆ ದಾರಾಳವಾಗಿ ವೇತನವನ್ನು ಒದಗಿಸುತ್ತಿವೆ. ಆಸ್ಟ್ರೇಲಿಯಾದಲ್ಲಿ 3.5%, ಚೀನಾ 5.5%, ಹಾಂಗ್ ಕಾಂಗ್, 7% ಇಂಡೋನೇಷ್ಯಾ, 4.5% ಕೊರಿಯಾ, 5% ಮಲೇಷ್ಯಾ, 3.8% ನ್ಯೂಜಿಲೆಂಡ್, 5.5% ಫಿಲಿಪೈನ್ಸ್, 4% ಸಿಂಗಾಪುರದಲ್ಲಿ 3.5% ಗೆ ಹೋಲಿಸಿದರೆ ಭಾರತಕ್ಕೆ 9.8% ಏರಿಕೆಯಾಗಿದೆ ಎಂದು ವರದಿ ಹೇಳುತ್ತಿದೆ. 5% ಥೈಲ್ಯಾಂಡ್, 8% ವಿಯೆಟ್ನಾಂ. ಸುಮಾರು 60% ಕಂಪನಿಗಳು ಹೈಬ್ರಿಡ್ ಮಾದರಿಯ ಕೆಲಸವನ್ನು ಅನುಸರಿಸಲು ಉದ್ಯೋಗಿಗಳನ್ನು ಕೇಳಿಕೊಂಡಿವೆ.
ಹೊಸ ಸಮೀಕ್ಷೆಯ ಪ್ರಕಾರ 2023 ರಲ್ಲಿ, ಜಾಗತಿಕವಾಗಿ ಕೇವಲ 37% ದೇಶಗಳು ವೇತನ ಹೆಚ್ಚಳ ಮಾಡುವ ನಿರೀಕ್ಷೆ ಇದೆ ಎಂದು ವರದಿ ಹೇಳಿದೆ. ವೇತನ ಹೆಚ್ಚಳ ಮಾಡುವ ಟಾಪ್ 10 ದೇಶಗಳು ಯಾವುವು ಎಂದು ತಿಳಿಯೋಣ ಬನ್ನಿ, ಭಾರತ (4.6%), ವಿಯೆಟ್ನಾಂ (4.0%), ಚೀನಾ (3.8%), ಬ್ರೆಜಿಲ್ (3.4%), ಸೌದಿ ಅರೇಬಿಯಾ (2.3%), ಮಲೇಷ್ಯಾ (2.2%), ಕಾಂಬೋಡಿಯಾ (2.2%), ಥೈಲ್ಯಾಂಡ್ (2.2%), ಓಮನ್ (2.0%), ರಷ್ಯಾ (1.9%) ದೇಶಗಳಲ್ಲಿ ವೇತನ ಹೆಚ್ಚಳ ಮಾಡಲಿದೆ. ಇನ್ನು ಐದು ರಾಷ್ಟ್ರಗಳು ಇಳಿಕೆ ಹಾದಿ ಹಿಡಿದಿದ್ದು, ಪಾಕಿಸ್ತಾನ (-9.9%), ಘಾನಾ (-11.9%), ಟರ್ಕಿ (-14.4%), ಶ್ರೀಲಂಕಾ (-20.5%), ಅರ್ಜೆಂಟೀನಾ (-26.1%)ಗಳಲ್ಲಿ ವೇತನವನ್ನು ಕಡಿತಗೊಳಿಸಲಿದೆ.