Revenue Facts

ಗ್ಯಾಸ್ ಸಿಲಿಂಡರ್ ಬಗ್ಗೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ

ಗ್ಯಾಸ್ ಸಿಲಿಂಡರ್ ಬಗ್ಗೆ ಮೋದಿ ಸರ್ಕಾರದ ಮಹತ್ವದ ನಿರ್ಧಾರ

#Important #decision #Modi government #regarding #gas cylinder

ನವದೆಹಲಿ;ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.ಉಜ್ವಲ ಯೋಜನೆಯಡಿ ಹೊಸ 75,000 ಎಲ್ಪಿಜಿ ಸಂಪರ್ಕಕ್ಕಾಗಿ 1650 ಕೋಟಿ ರೂ.ಗಳ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ 75 ಲಕ್ಷ ಹೊಸ ಉಚಿತ ಎಲ್‌ಪಿಜಿ ಸಂಪರ್ಕಗಳನ್ನು ನೀಡಲು ಇಂದು ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಮುಂದಿನ 3 ವರ್ಷಗಳಲ್ಲಿ ಉಜ್ವಲ ಯೋಜನೆಯಡಿ ಮಹಿಳೆಯರಿಗೆ ಈ ಎಲ್‌ಪಿಜಿ ಸಂಪರ್ಕಗಳು ಲಭ್ಯವಾಗಲಿವೆ.ಯೋಜನೆಯಡಿ, ಮೂರು ವರ್ಷಗಳಲ್ಲಿ ಒಟ್ಟು 75 ಲಕ್ಷ ಎಲ್ಪಿಜಿ ಸಂಪರ್ಕಗಳನ್ನ ನೀಡಲಾಗುವುದು, ಇದಕ್ಕಾಗಿ ಒಟ್ಟು 1,650 ಕೋಟಿ ರೂಪಾಯಿ ವ್ಯಯಿಸಲಾಗುವುದು.

ನಾಲ್ಕು ವರ್ಷಗಳಲ್ಲಿ ಜಾರಿಗೆ ತರಲು 7,210 ಕೋಟಿ ರೂ.ಗಳ ಹಣಕಾಸು ವೆಚ್ಚದ ಇ-ಕೋರ್ಟ್ ಯೋಜನೆ ಹಂತ -3 ಅನ್ನು ಕೇಂದ್ರ ಯೋಜನೆಯಾಗಿ ಸರ್ಕಾರ ಅನುಮೋದಿಸಿದೆ ಎಂದು ಕೇಂದ್ರ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್ ಹೇಳಿದರು.ಉಜ್ವಲ ಫಲಾನುಭವಿಗಳ ಸಂಖ್ಯೆಭಾರತದಲ್ಲಿ 10 ಕೋಟಿ ದಾಟಿದೆ. ಬಿಪಿಎಲ್ ಕುಟುಂಬಗಳು ಮತ್ತು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಶುದ್ಧ ಅಡುಗೆ ಇಂಧನವನ್ನು ಒದಗಿಸುವ ಗುರಿಯನ್ನು ಹೊಂದಿದೆ.ಪಿಎಂ ಉಜ್ವಲ ಯೋಜನೆ ನರೇಂದ್ರ ಮೋದಿ ಸರ್ಕಾರದ ಪ್ರಮುಖ ಯೋಜನೆಯಾಗಿದೆ,5 ಕೋಟಿ ಹೊಸ ಅನಿಲ ಸಂಪರ್ಕಗಳನ್ನು ವಿತರಿಸುವ ಉದ್ದೇಶದಿಂದ ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು.

Exit mobile version