Revenue Facts

ರೆಕಾರ್ಡ್ ಆಫ್‌ ರೈಟ್ಸ್ ದಾಖಲೆ ಯಾವುದಕ್ಕೆ ಮುಖ್ಯ ? ಎಲ್ಲಿ ಹೇಗೆ ಪಡೆಯಬೇಕು?

Record of Rights document

Record of Rights document

ಬೆಂಗಳೂರು, ಡಿ. 26: ಯಾವುದೇ ಒಂದು ಆಸ್ತಿಯನ್ನು ಖರೀದಿ ಮಾಡಬೇಕಾದರೆ ಅಥವಾ ಮಾರಾಟ ಮಾಡಬೇಕಾದರೆ ಆರ್.ಅರ್ ಬಹುಮುಖ್ಯ ದಾಖಲೆ. ಇದನ್ನು ರೆಕಾರ್ಡ್ ಆಫ್‌ ರೈಟ್ ದಾಖಲೆ ಅಂತಲೇ ಕರೆಯುವುದು ವಾಡಿಕೆಯಲ್ಲಿದೆ. ಈ ದಾಖಲೆ ಭೂಮಿ ಯಾರಿಂದ ಯಾರಿಗೆ ಮಾರಾಟವಾಗಿದೆ, ಪ್ರಸ್ತುತ ಯಾರ ಹೆಸರಿನಲ್ಲಿದೆ ಎಂಬ ಭೂ ವಹಿವಾಟಿನ ಪೂರ್ಣ ವಿವರ ಈ ದಾಖಲೆಯಲ್ಲಿ ಲಭಬ್ಯವಾಗುತ್ತದೆ. ಈ ದಾಖಲೆ ತಾಲೂಕು ಹಂತದ ಉಪ ತಹಶೀಲ್ದಾರ್ ಕಚೇರಿಯಲ್ಲಿ ಲಭ್ಯವಿರುತ್ತದೆ.

ಈ ಹಿಂದಿನ ಕಾಲದಲ್ಲಿ ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ಕೈ ಬರಹದ ದಾಖಲೆಗಳು ಇರುತ್ತಿದ್ದವು.ಕಾಲ ಬದಲಾದಂತೆ ಇದೀಗ ಅನ್‌ಲೈನ್ ನಲ್ಲಿಯೇ ಆಸ್ತಿ ವರ್ಗಾವಣೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ನಿರ್ವಹಣೆ ಮಾಡಲಾಗುತ್ತದೆ. ಯಾವ ಯಾಸ್ತಿಯನ್ನು ಯಾವಾಗ ಯಾರು ಖರೀದಿ ಮಾಡಿದರು ? ಯಾರು ಮಾರಾಟ ಮಾಡಿದ್ದಾರೆ ಎಂಬ ಸಂಪೂರ್ಣ ವಿವರಗಳನ್ನು ದಾಖಲಿಸಲಾಗುತ್ತದೆ. ಅಂದರೆ ಒಂದು ಆಸ್ತಿ ವಹಿವಾಟಿನ ಸಂಪೂರ್ಣ ಇತಿಹಾಸ ಲಭ್ಯವಾಗುತ್ತದೆ. ಪ್ರಸ್ತುತ ಆಸ್ತಿಯ ಅಸಲಿ ಮಾಲೀಕರನ್ನು ಗುರುತಿಸಲು ರೆಕಾರ್ಡ್ ಆಫ್ ರೈಟ್ಸ್ ದಾಖಲೆ ಸಹಾಯವಾಗುತ್ತದೆ. ಇನ್ನು ಯಾವುದೇ ಆಸ್ತಿಯನ್ನು ಸಾಲಕ್ಕೆ ಬದಲಿ ಅಡಮಾನ ಇಡುವಾಗಲೂ ಆರ್‌.ಆರ್ ದಾಖಲೆಯನ್ನು ಸಲ್ಲಿಸಲೇಬೇಕು. ಈ ಆರ್‌.ಆರ್. ನ್ನು ಗ್ರಾಮವಾರು ನಿರ್ವಹಣೆ ಮಾಡಲಾಗುತ್ತದೆ. ಈ ದಾಖಲೆಯ ತಾಲೂಕು ಉಪ ತಹಶೀಲ್ದಾರ್ ಕಚೇರಿಯಲ್ಲಿ ಸಿಗುತ್ತದೆ. ಈ ದಾಖಲೆಯನ್ನು ಸಾರ್ವಜನಿಕರು ಅರ್ಜಿ ಸಲ್ಲಿಸಿ ಸರ್ಕಾರಿ ಶುಲ್ಕ ಪಾವತಿಸಿ ಪಡೆಯಬಹುದಾಗಿದೆ.

ಅರ್‌.ಅರ್ ದಾಖಲೆಯಲ್ಲಿ ಏನು ಮಾಹಿತಿ ಇರುತ್ತದೆ ?

ಆರ್‌.ಆರ್ ದಾಖಲೆಯಲ್ಲಿ ಈ ಕೆಳಗಿನ ಮಹತ್ವದ ಮಾಹಿತಿ ಇರುತ್ತದೆ.

ಆಸ್ತಿಯ ಮಾಲೀಕರ ಹೆಸರು ಮತ್ತು ಅವರಿಗೆ ಹೇಗೆ ಬಂತು ಎಂಬ ವಿವರ ಇರುತ್ತದೆ.

ಈ ಆಸ್ತಿಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ದಾವೆ ಇದ್ದರೆ ಅದರ ಉಲ್ಲೇಖ ಇರುತ್ತದೆ..

ಆಸ್ತಿಯ ಮೇಲೆ ಸಾಲ ಪಡೆದಿದ್ದರೆ ಅದರ ವಿವರ, ಲೋನ್ ಪಡೆದವರ ವಿವರ ಉಲ್ಲೇಖವಾಗಿರುತ್ತದೆ.

ಈ ದಾಖಲೆ ಯಾಕೆ ಮುಖ್ಯ ?

ಒಂದು ಆಸ್ತಿಯನ್ನು ಖರೀದಿ ಮಾಡುವಾಗ ಅದರ ಅಸಲಿ ಮಾಲೀಕರು, ಅವರಿಗೆ ಯಾವ ರೀತಿ ಬಂತು ಎಂಬ ವಿಚಾರ ತಿಳಿದುಕೊಳ್ಳಬೇಕು. ಒಂದು ಆಸ್ತಿಯ ಅಸಲಿ ಮಾಲೀಕರು, ಅವರಿಗೆ ಯಾವ ರೀತಿ ಈ ಜಮೀನು ಬಂತ ಎಂಬ ವಿವರ ಈ ಅರ್‌.ಆರ್ ನಲ್ಲಿತಿಳಿಯಬಹುದು. ಆಸ್ತಿ ಕೃಷಿ ಭೂಮಿಯೇ ಅಥವಾ ಕೃಷಿಯೇತರ ಭೂಮಿಯೇ ಎಂಬುದರ ವಿವರ ಪಡೆಯಬಹುದು. ಆಸ್ತಿಗೆ ಸಂಬಂಧಿಸಿದಂತೆ ಏನಾದರೂ ಅಕ್ರಮ ವಹಿವಾಟು ನಡೆದಿದ್ದರೆ, ಅಥವಾ ಬೇನಾಮಿ ವಹಿವಾಟು ನಡೆದಿದ್ದರೆ ಅದರ ಮಾಹಿತಿ ತಿಳಿದುಕೊಳ್ಳಬಹುದು. ಆಸ್ತಿಗೆ ಸಂಬಂಧಿಸಿದಂತೆ ಯಾವುದಾದರೂ ವಿವಾದ ಉಂಟಾಗಿ ನ್ಯಾಯಾಲಯದಲ್ಲಿ ದಾವೆ ವಿಚಾರಣೆ ಹಂತದಲ್ಲಿದ್ದರೆ ಮಾಹಿತಿ ಪಡೆಯಬಹುದು. ಆಸ್ತಿ ವಹಿವಾಟಿನಲ್ಲಿ ಮೋಸ ಹೋಗುವುದನ್ನು ತಪ್ಪಿಸಲು ಅರ್.ಅರ್. ಕಡ್ಡಾಯವಾಗಿ ನೋಡಲೇಬೇಕು. ಆಸ್ತಿಗೆ ಸಂಬಂಧಿಸಿದಂತೆ ತೆರಿಗೆ ಪಾವತಿ ಆಗಿದೆಯೇ ಎಂಬುದರ ವಿವರ ಸಹ ಅರ್.ಅರ್.ನಲ್ಲಿ ನೋಡಬಹುದು. ಒಂದು ಆಸ್ತಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಲೀಕತ್ವದ ವಿವರಗಳು ಅರ್.ಅರ್. ನಲ್ಲಿ ಲಭ್ಯವಾಗಲಿದೆ.

Exit mobile version