Revenue Facts

KSRTC ಸಿಬ್ಬಂದಿಗೆ ವಿಮಾ ಯೋಜನೆ ಜಾರಿ

ಬೆಂಗಳೂರು:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ ೧.೨೦ ಕೋಟಿಯನ್ನು ವಿಮಾ ಯೋಜನೆ ಜಾರಿಗೆ ತರಲಾಗಿದೆ.ಕೆಎಸ್ ಆರ್ ಟಿಸಿ ನಿಗಮದ ಸಿಬ್ಬಂದಿಗೆ ಪ್ರೀಮಿಯಂರಹಿತ ಅಪಘಾತ ಪರಿಹಾರ‌ ವಿಮಾ ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಕುರಿತು ಮಾತನಾಡಲು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಮತ್ತು KSRTC ವ್ಯವಸ್ಥಾಪಕ ನಿರ್ದೇಶಕ ರಾಚಪ್ಪ ಹಾಗೂ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕರ್ನಾಟಕ ವಲಯ ಮುಖ್ಯಸ್ಥ ನವನೀತ್ ಕುಮಾರ್ ಒಡಂಬಡಿಕೆ ವಿನಿಮಯ ಒಪ್ಪಂದ ನಡೆದಿದೆ.

ವಿಮಾ ಯೋಜನೆ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷತೆ..

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಸಿಬ್ಬಂದಿಗಳಿಗೆ , ವಿಮಾ ಯೋಜನೆ ಮೂಲಕ ಸಂತ್ರಸ್ತ ಕುಟುಂಬಗಳಿಗೆ ಸುರಕ್ಷತೆಯನ್ನು ಒದಗಿಸಲು ಫಲಾನುಭವಿಗಳಿಗೆ ಗಣನೀಯ ಮೊತ್ತವನ್ನು ಒದಗಿಸಲಾಗುವುದು. ಯೂನಿಯನ್ ಸೂಪರ್ ಸ್ಯಾಲರಿ ಅಕೌಂಟ್ ಯೋಜನೆಯು ಶಾಶ್ವತ ಅಥವಾ ಭಾಗಶಃ ಶಾಶ್ವತ ಅಂಗವೈಕಲ್ಯವನ್ನು ಎದುರಿಸುತ್ತಿರುವ ಉದ್ಯೋಗಿಗಳಿಗೆ 1 ಕೋಟಿ ರೂ. ಪ್ರಯೋಜನಗಳನ್ನು ಈ ವಿಮಾ ಯೋಜನೆ ಒಳಗೊಂಡಿರುತ್ತದೆ.

ನೌಕರರು ಶಾಶ್ವತ ಅಂಗವೈಕಲ್ಯತೆಗೆ ಒಳಗಾದಲ್ಲಿಯೂ ಸಹ ವಿಮೆ..

ಈ ವಿಮಾ ಯೋಜನೆಯಡಿ ಯೂನಿಯನ್ ಬ್ಯಾಂಕಿನಲ್ಲಿ ವೇತನ ಪಡೆಯುತ್ತಿರುವ ನೌಕರರು ಯಾವುದೇ ಅಪಘಾತದಲ್ಲಿ ಮರಣಿಸಿದ್ದರೆ ಅಂತಹ ನೌಕರರ ಅವಲಂಬಿತರಿಗೆ 1.20 ಕೋಟಿ ರೂ ಅಪಘಾತದ ವಿಮೆಯ ಹಣ ಅವರ ಕೈ ಸೇರಲಿದೆ. ನೌಕರರು ಶಾಶ್ವತ ಅಂಗನ್ಯೂನತೆಗೆ ಒಳಗಾದಲ್ಲಿ ರೂ.1 ಕೋಟಿಗಳನ್ನು ಪಡೆಯಬಹುದಾಗಿದ್ದು, ಡೆಬಿಟ್ ಕಾರ್ಡ್​ ಮೇಲೆ 15 ಲಕ್ಷ ರೂ ಅಪಘಾತ ವಿಮಾ ಸೌಲಭ್ಯವನ್ನು ಜಾರಿ ಮಾಡಲಾಗಿದೆ. ಯೋಜನೆಯಡಿ ಅಪಘಾತವಲ್ಲದ ಸ್ವಾಭಾವಿಕ ಮರಣಕ್ಕೆ ರೂ.5 ಲಕ್ಷಗಳು ವಿಮೆಯೊಂದಿಗೆ ಇತರೆ ಹೆಚ್ಚುವರಿ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು.

Exit mobile version