Revenue Facts

ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ ಅ.1 ರಿಂದ ಜಾರಿ

ಬೆಂಗಳೂರು;ಅಕ್ಟೋಬರ್ 1 ರಿಂದ ಕಂದಾಯ ಇಲಾಖೆ ಕಚೇರಿಗಳಲ್ಲಿ ಇ-ಆಫೀಸ್ ತಂತ್ರಾಂಶ(e-office ) ರಾಜ್ಯದ ಎಲ್ಲ ತಹಸಿಲ್ದಾರ್ ಹಂತದವರೆಗೆ ತರಲು ಸಿದ್ಧತೆ ನಡೆಸಿದೆ. ಇ-ಆಫೀಸ್ ತಂತ್ರಾಂಶ ಜಾರಿಯಾದ್ರೆ 10 ನಿಮಿಷದಲ್ಲೇ ಎಲ್ಲಾ ದಾಖಲೆಗಳು ಸಿಗಲಿವೆ.ಜನರಿಗೆ ಕಚೇರಿಗೆ ಅಲೆಯುವ ದೊಡ್ಡ ಪರಿಹಾರ ಸಿಕ್ಕಂತಾಗಿದೆ,ರೆಕಾರ್ಡ್ ರೂಮ್ ನ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ, ತಂತ್ರಾಂಶದಲ್ಲಿ ಅಳವಡಿಸುವ ಪ್ರಕ್ರಿಯೆ ರಾಜ್ಯದಾದ್ಯಂತ ಆರಂಭವಾಗಲಿದೆ.ಆಡಳಿತದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಗೆ ಮಾಡುವ ನಿಟ್ಟಿನಲ್ಲಿ ಮತ್ತು ಕಾಗದದ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಕಡತಗಳನ್ನು(File) ಬೇಗ ವಿಲೇವಾರಿ ಮಾಡಲು ಅನುಕೂಲವಾಗುತ್ತದೆ ಎಂದು ಸರಕಾರವು ಇ-ಆಫೀಸ್‌ ತಂತ್ರಾಂಶವನ್ನು ಜಾರಿ ಮಾಡುತ್ತಿದೆ .ಇ-ಆಫೀಸ್ ತಂತ್ರಾಂಶ ಜಾರಿಯಾದ್ರೆ 10 ನಿಮಿಷದಲ್ಲೇ ಎಲ್ಲಾ ದಾಖಲೆಗಳು ಸಿಗಲಿವೆ.

ಗುಣಮಟ್ಟದ ಸೇವೆ ಮತ್ತು ಸಿಬ್ಬಂದಿ ಉತ್ತಮ ಕಾರ್ಯ ನಿರ್ವಹಣೆಯ ದೃಷ್ಟಿಯಿಂದ ತಾಲೂಕು ಆಡಳಿತ ನೂತನ ಮಾಹಿತಿ ಕೇಂದ್ರ ಸ್ಥಾಪನೆ ಮತ್ತು e-office ತಂತ್ರಾಂಶ ಆಳವಡಿಕೆ ಸೇರಿ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.ಇ- ಆಫೀಸ್‌ ನಿರ್ವಹಣೆಯನ್ನು ಮಾಡಿದಲ್ಲಿ ಎಲ್ಲ ಕೆಲಸಗಳು ಸುಲಭವಾಗಿ ನಡೆಯುತ್ತವೆ. ಕಡತಗಳ ಮೇಲೆ ದಿನಾಂಕ ಮತ್ತು ಸಮಯ ನಮೂದಾಗುತ್ತದೆ. ಯಾರ ಫೈಲ್‌ ಯಾರ ಬಳಿ ಇದೆ ಎಂದು ಹುಡುಕಲು ಮತ್ತು ಕಡತದ ಸ್ಥಿತಿ ನೋಡಲು ಬಹಳ ಸುಲಭವಾಗುತ್ತದೆ. ಇಲ್ಲಿ ವಿಳಂಬಕ್ಕೆ ಅವಕಾಶವೇ ಇರುವುದಿಲ್ಲ. ಮತ್ತು ಇ-ಆಫೀಸ್‌ನಲ್ಲಿ ನೋಟ್‌ ಸೀಟ್‌, ಕಡತ ಯಾವ ಹಂತದಲ್ಲಿದೆ ಎನ್ನುವ ಎಲ್ಲ ಮಾಹಿತಿಯನ್ನು ಮೇಲಧಿಕಾರಿಗಳು ಗಮನಿಸುತ್ತಾರೆ. ಇದರಿಂದ ನಾವು ಜಾಗೃತರಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ತಪ್ಪುಗಳು ಮತ್ತೆ ಮತ್ತೆ ಮರುಕಳಿಸದಂತೆ ನೋಡಿಕೊಳ್ಳಲು ಇ-ಕಚೇರಿ ಸಹಾಯವಾಗುತ್ತದೆ, ಈ ಪೋರ್ಟಲ್ ನಾಗರಿಕರಿಗೆ ನಿಗದಿತ ಅವಧಿಯಲ್ಲಿ ಪ್ರಕಟವಾದ ಸರ್ಕಾರಿ ಆದೇಶಗಳನ್ನು ಹುಡುಕಲು ಸಹಾಯ ಮಾಡುತ್ತದೆ. ಇ-ಆಫೀಸ್ ಭಾರತ ಸರ್ಕಾರದ ಇ-ಆಡಳಿತ ಯೋಜನೆಯಡಿ “ತಂತ್ರಾಂಶ ಆಧಾರಿತ ಯೋಜನೆ” ಆಗಿದೆ.

 

Exit mobile version