Revenue Facts

ಆಸ್ತಿ ತೆರಿಗೆ ಬಾಕಿ ಇದ್ದರೆ ಪಾಲಿಕೆಯಿಂದ ಸ್ಥಿರಾಸ್ತಿ ಜಪ್ತಿ ;ಮುನೀಶ್ ಮೌದ್ಗಿಲ್

ಬೆಂಗಳೂರು: ಆಸ್ತಿ ತೆರಿಗೆ ಪಾವತಿಸದೆ 500 ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡಿರುವ ಸುಮಾರು 6 ಲಕ್ಷ ಮಂದಿಗೆ ಸಂದೇಶ ಕಳುಹಿಸಿರುವ ಬಿಬಿಎಂಪಿ(BBMP), ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. 6 ಲಕ್ಷ ಮಂದಿಗೆ ಬಾಕಿ ತೆರಿಗೆ(Tax) ಪಾವತಿಸುವಂತೆ ಸಂದೇಶ ಕಳುಹಿಸಿದ್ದು, 500 ಕೋಟಿ ರು. ತೆರಿಗೆ ಬಾಕಿ ಉಳಿಸಿಕೊಂಡಿರುವ 6 ಲಕ್ಷ ಮಂದಿಗೆ ಈ ಸಂದೇಶ ಹೋಗಿದೆ. ಸಂದೇಶ ಬಂದ ನಂತರವೂ ಬಾಕಿ ತೆರಿಗೆ ಪಾವತಿಸದಿದ್ದರೆ ಶೀಘ್ರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ಆಸ್ತಿ ಸಂಖ್ಯೆಯನ್ನು ನೆನಪಿಸಿ ಸಂದೇಶ ಕಳುಹಿಸಿರುವ ಪಾಲಿಕೆ, ಈ ಅಪ್ಲಿಕೇಷನ್ ಸಂಖ್ಯೆಯ ಆಸ್ತಿಯ ತೆರಿಗೆ ಪಾವತಿ ಮಾಡಲಾ ಗಿಲ್ಲ, ದಯವಿಟ್ಟು ಗಮನಿಸಿ, ತೆರಿಗೆ ಪಾವತಿಸದೇ ಇರುವುದರಿಂದ ನಿಮ್ಮನ್ನು ಬಿಬಿಎಂಪಿ(BBMP) ಕಾಯಿದೆ 2020ರ ಅಡಿಯಲ್ಲಿ ಕ್ರಮಕ್ಕೆ ಒಳಪಡಿಸಬೇಕಾಗುತ್ತದೆ. ಇದರಲ್ಲಿ ಚರಾಸ್ತಿಗಳ ಸೀಲಿಂಗ್, ಮುಟ್ಟುಗೋಲು, ಸಬ್ ರಿಜಿಸ್ಟ್ರಾರ್ ನೀಡಿದ ಎನ್ನಂಬರೆನ್ಸ್ ಸರ್ಟಿಫಿಕೇಟ್ (ಋಣಭಾರ ಪ್ರಮಾಣಪತ್ರ)ವಶಪಡಿಸಿಕೊಳ್ಳುವಿಕೆ, ಹಿಂಪಡೆಯುವಿಕೆ, ಕ್ರಿಮಿನಲ್ ಪ್ರಕರಣ ದಾಖಲಿಸುವುದು ಸೇರಿವೆ.ಯಾವುದೇ ಸೃಷ್ಟಿಕರಣಕ್ಕಾಗಿ ನಿಮ್ಮ ಸ್ಥಳೀಯ ವಾರ್ಡ್ ಅಥವಾ ಎಆರ್‌ಒ ಕಚೇರಿಯನ್ನು ಸಂಪರ್ಕಿಸಿ. ಬಾಕಿ ತೆರಿಗೆ ಪಾವತಿಸಲು https://bbmptax.karnataka.gov.in/ ವಹಿಸಿ ಎಂದು ತಿಳಿಸಿದೆ.ಬಿಬಿಎಂಪಿ ಇತ್ತೀಚೆಗೆ ಆಸ್ತಿ ತೆರಿಗೆ ಪಾವತಿಸದವರ ವಾಹನಗಳು ಮತ್ತು ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಕ್ರಮ ಅನುಸರಿಸುತ್ತಿದೆ. ಡಿಸೆಂಬರ್ 12 ರಿಂದ ಬೀಗಮುದ್ರೆ ಹಾಕುವ ಕಾರ್ಯ ಆರಂಭವಾಗಿದ್ದು, ಬೆಂಗಳೂರಿನ ಎಲ್ಲಾ 8 ವಲಯಗಳಲ್ಲಿ ಈಗಾಗಲೇ 1000ಕ್ಕೂ ಹೆಚ್ಚು ವಾಣಿಜ್ಯ ಕಟ್ಟಡಗಳಿಗೆ ಬೀಗ ಜಡಿಯಲಾಗಿದೆ. ಆಸ್ತಿಗಳ ಮಾಲೀಕರು ಕೆಲವು ವರ್ಷ ತೆರಿಗೆ ಕಟ್ಟಿದ್ದರೆ ಇನ್ನೂ ಕೆಲವು ವರ್ಷಗಳ ಬಾಕಿ ಉಳಿಸಿಕೊಂಡಿದ್ದಾರೆ. ಬಿಬಿಎಂಪಿ ಇಂತಹ 10,000 ಬಾಕಿದಾರರಿಗೆ ನೋಟಿಸ್ ನೀಡಿದೆ.ನಗರದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳಿಂದ ಆಸ್ತಿ ತೆರಿಗೆಯನ್ನು ಪಾವತಿಸಿಲ್ಲದವರಿಗೆ ಎಸ್‌ಎಂಎಸ್(SMS) ಸಂದೇಶಗಳನ್ನು ಮೂರು ತಿಂಗಳಿಂದ ಕಳುಹಿಸಲಾಗುತ್ತಿದೆ. ಆದರೂ 6 ಲಕ್ಷಕ್ಕೂ ಹೆಚ್ಚು ಮಂದಿ ಇನ್ನೂ ಪಾವತಿಸಿಲ್ಲ. ಹೀಗಾಗಿ, ಬಿಬಿಎಂಪಿ(BBMP) ಕಾಯ್ದೆ 2020 ಪ್ರಕಾರ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ಇದೀಗ ಕಳುಹಿಸಲಾಗುತ್ತಿರುವ ಎಸ್‌ಎಂಎಸ್‌ನಲ್ಲಿ ಆಸ್ತಿ ಮಾಲೀಕರಿಗೆ ವಿವರಿಸಲಾಗಿದೆ’ ಎಂದು ಬಿಬಿಎಂಪಿ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್‌ ಮೌದ್ಗಿಲ್‌(Munish Moudgil) ತಿಳಿಸಿದರು.

Exit mobile version