Revenue Facts

ಸರ್ಕಾರಿ ಜಾಗವನ್ನು ಕಬಳಿಕೆ ಮಾಡಿದರೆ, ಎಲ್ಲಿ ದೂರು ನೀಡಬೇಕು..?

ಬೆಂಗಳೂರು, ಏ. 10 : ಗ್ರಾಮದಲ್ಲಿ ಅಥವಾ ಪಟ್ಟಣಗಳಲ್ಲಿ ಎಲ್ಲಿಯಾದರೂ ಯಾರಾದರೂ ಅಕ್ರಮವಾಗಿ ಸರ್ಕಾರಿ ಜಾಗವನ್ನು ಕಬಳಿಸಿಕೊಂಡು ಕಟ್ಟಡ ನಿರ್ಮಾಣ ಮಾಡುವುದು ಅಥವಾ ಆಸ್ಥಳವನ್ನು ಸ್ವಂತಕ್ಕೆ ಉಪಯೋಗಿಸಿಕೊಂಡರೆ, ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಇದನ್ನು ನೀವೇನಾದರೂ ಗಮನಿಸಿದರೆ, ಆಗ ಏನು ಮಾಡಬೇಕು..? ದೂರನ್ನು ಎಲ್ಲಿ ದಾಖಲಿಸಬೇಕು ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಪ್ರತಿಯೊಂದು ಗ್ರಾಮದಲ್ಲೂ ಹಾಗೂ ಪಟ್ಟಣಗಳಲ್ಲೂ ಸರ್ಕಾರಿ ಜಮೀನುಗಳು ಇದ್ದೇ ಇರುತ್ತವೆ. ಸರ್ಕಾರಿ ಸ್ಥಳವನ್ನು ಯಾಕೆ ಖಾಲಿ ಬಿಡುತ್ತಾರೆ ಎಂಬುದನ್ನು ನೋಡೋಣ ಬನ್ನಿ..

ಜಾಗ ಖಾಲಿ ಬಿಡಲು ಕೆಲ ಉದ್ದೇಶಗಳು ಇರುತ್ತವೆ. ಮೊದಲನೇಯದಾಗಿ, ಹಳೆ ಕಾಲದ ಜಾಗವಾಗಿರುತ್ತದೆ. ಅಂದರೆ, ಹಳೆ ಕಾಲದ ವಂಶಸ್ಥರು ಇಲ್ಲದ ಜಾಗಗಳನ್ನು ಸರ್ಕಾರ ಸರಕಾರ ಮುಟ್ಟಗೋಲು ಹಾಕಿಕೊಂಡಿರುತ್ತದೆ. ಇದನ್ನು ಬಿನ್ ವಾರಸುದಾರ ಭೂಮಿ ಎಂದು ಹೇಳಲಾಗುತ್ತದೆ. ಇವನ್ನು ಖಾಲಿ ಬಿಡಲಾಗಿರುತ್ತದೆ. ಇನ್ನು ದನ ಕರುಗಳಿಗಾಗಿ ಕೆಲ ಜಾಗವನ್ನು ಮೀಸಲಿಟ್ಟರಲಾಗಿರುತ್ತದೆ. ಈ ಜಾಗದಲ್ಲಿ ಬೆಲೇಐುವ ಹುಲ್ಲು ಹಅಗೂ ಇತರೆ ಆಹಾರವೂ ದನ ಕರುಗಳಿಗೆ ಸಹಾಯವಾಗಲಿ ಎಂದು ಬಿಟ್ಟಿರಲಾಗುತ್ತದೆ. ಇದನ್ನು ಗೋಮಾಳ ಎಂದು ಕೂಡ ಕರೆಯಲಾಗುತ್ತದೆ.

ಗ್ರಾಮಕ್ಕೆ ಹೊಂದಿ ಕೊಂಡಿರುವ ಒಂದೆರಡು ಸರ್ವೆ ನಂಬರ್‌ ಸ್ಥಳವನ್ನು ಕೂಡ ಸರ್ಕಾರ ಖಾಲಿ ಬಿಟ್ಟಿರುತ್ತದೆ. ಇವೆಂದರೆ, ಗೋಮಾಳ, ಪರಂಪೋಕ, ಗೈರಾಣ ಹೀಗೆ ಸರ್ಕಾರದ ಅನೇಕ ಆಸ್ತಿಗಳು ಖಾಲಿ ಇರುತ್ತವೆ. ಈ ಸ್ಥಳವನ್ನು ಯಾರಾದರೂ ಕಬಳಿಸಿಕೊಂಡರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಸರ್ಕಾರದ ಅನುಮತಿ ಇಲ್ಲದೆ ಬಳಸುವುದನ್ನು ಯಾರಾದರೂ ನೋಡಿದರೆ, ಕೂಡಲೇ ಸರ್ಕಾರದ ಗಮನಕ್ಕೆ ತರುವುದು ಬಹಳ ಮುಖ್ಯವಾಗುತ್ತದೆ.

ಕಂದಾಯ ಇಲಾಖೆಯಲ್ಲಿ ಈ ಬಗ್ಗೆ ದೂರನ್ನು ನೀಡಬೇಕಾಗುತ್ತದೆ. ಪತ್ರದ ಮುಖಾಂತರ ಪತ್ರದಲ್ಲಿ ಯಾರು ಸರ್ಕಾರಿ ಆಸ್ತಿಯನ್ನು ಕನಬಳಿಸಿದ್ದಾರೆ. ಸರ್ವೇ ನಂಬರ್‌ ಏನು ಹೀಗೆ ಹಲವು ಮಾಹಿತಿಗಳನ್ನು ನೀಡಿ ದೂರು ದಾಖಲಿಸಬೇಕಾಗುತ್ತದೆ. ಇನ್ನು ದೂರುದಾರ ಯಾರೆಂಬುದನ್ನು ಸುರಕ್ಷತೆಗಾಗಿ ತಿಳಿಸಬಾರದು ಎಂದರೆ, ದೂರು ನೀಡುವಾತ ಗ್ರಾಮದಲ್ಲಿರುವ ಆಸಕ್ತರ ಜೊತೆಗೆ ಒಟ್ಟಿಗೆ ಸೇರಿ ದೂರು ಸಲ್ಲಿಸುವುದು ಬಹಳ ಉತ್ತಮ.

ಗ್ರಾಮ ಠಾಣಾ ವ್ಯಾಪ್ತಿಗೆ ಒಳಪಟ್ಟರೆ ತಹಸಿಲ್ದಾರ್ ಅವರಿಗೆ ದೂರು ಕೊಡಲು ಹೋಗಬೇಡು. PDO ಅವರಿಗೆ ದೂರನ್ನು ಸಲ್ಲಿಸಬಹುದು. ಸರ್ಕಾರಿ ಆಸ್ತಿ ಸಾರ್ವಜನಿಕರ ಸ್ವತ್ತು, ಕಾಯುವ ಹೊಣೆ ಪ್ರತಿಯೊಬ್ಬರದ್ದು.‌ ಹಾಗಾಗಿ ಅಕ್ರಮವಾಗಿ ಭೂ ಒತ್ತುವರಿ ಮಾಡಿಕೊಂಡಿರುವುದು ಕಂಡು ಬಂದಾಗ ನಿರ್ಭೀತಿಯಿಂದ ರೆವ್ನ್ಯೂ ಇನ್ಸ್‌ ಪೆಕ್ಟರ್‌ ಗೆ ದೂರು ನೀಡಬಹುದು.

Exit mobile version